ನಟಿ ರಚಿತಾ ರಾಮ್‌ ಈ ಎರಡು ಧಾರಾವಾಹಿಗಳನ್ನ ಮಿಸ್ ಮಾಡ್ದೆ ನೋಡ್ತಾರಂತೆ...!

Published : Nov 17, 2025, 01:17 PM IST

Sandalwood actress Rachita Ram: ಕಿರುತೆರೆ ಕಲಾವಿದರಿಗೆ ಸ್ಟಾರ್‌ ನಟ-ನಟಿಯರು "ನಿಮ್ಮ ಧಾರಾವಾಹಿಗಳನ್ನ ನಾವು ನೋಡ್ತೀವಿ ಅಥವಾ ನಿಮ್ಮ ನಟನೆ ತುಂಬಾ ಇಷ್ಟ" ಎಂದು ಹೇಳಿದಾಗ ಅವರ ಸಂತೋಷಕ್ಕೆ ಪಾರವೇ ಇರಲ್ಲ. ಇದೀಗ ರಚಿತರಾಮ್ ಎರಡು ಧಾರಾವಾಹಿಗಳನ್ನ ಮಿಸ್ ಮಾಡ್ದೆ ನೋಡುವುದಾಗಿ ತಿಳಿಸಿದ್ದಾರೆ.    

PREV
16
ಭರ್ಜರಿಯಾಗಿ ಪರ್ಫಾರ್ಮೆನ್ಸ್​ ನೀಡಿದ ಕಲಾವಿದರು

ಶನಿವಾರದಿಂದ ಜೀ ವಾಹಿನಿಯಲ್ಲಿ ಡಾನ್ಸ್ ಕರ್ನಾಟಕ ಡಾನ್ಸ್ (Dance Karnataka Dance) ಪ್ರಸಾರವಾಗುತ್ತಿದೆ. ಬಹುತೇಕ ಕಿರುತೆರೆಯ ಕಲಾವಿದರು ಶೋಗೆ ಎಂಟ್ರಿ ಕೊಟ್ಟಿದ್ದು, ಭರ್ಜರಿಯಾಗಿ ಪರ್ಫಾರ್ಮೆನ್ಸ್​ ನೀಡಿದ್ದಾರೆ.

26
ಯಾರೆಲ್ಲಾ ಇದ್ದಾರೆ?

ಎಂದಿನಂತೆ ಅನುಶ್ರೀ ಅವರು ಈ ಸೀಸನ್‌ ಆಂಕರ್ ಆಗಿದ್ದು, ಜಡ್ಜಸ್ ಪ್ಯಾನೆಲ್‌ನಲ್ಲಿ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್‌ಕುಮಾರ್, ಡಿಂಪಲ್ ಕ್ವೀನ್ ರಚಿತಾ ರಾಮ್, ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಮತ್ತು ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಇದ್ದಾರೆ.

36
ಹೆಚ್ಚು ಸದ್ದು ಮಾಡುತ್ತಿದೆ ಶೋ

ಡಾ.ಶಿವರಾಜ್ ಕುಮಾರ್ ಅವರು ಅದ್ಭುತ ನಟ ಮಾತ್ರವಲ್ಲದೆ, ಒಳ್ಳೆಯ ಡ್ಯಾನ್ಸರ್ ಆಗಿದ್ದು, ತಮ್ಮದೇ ಆದ ಸ್ಟೈಲ್‌ಗೆ ಜನಪ್ರಿಯ. ಇವರ ಅನುಭವ, ಜ್ಞಾನ ಸ್ಪರ್ಧಿಗಳಿಗೆ ಉತ್ತೇಜನ ನೀಡಲಿದೆ. ನಟಿ ಮಾತ್ರವಲ್ಲದೆ, ಶಾಸ್ತ್ರೀಯ ನೃತ್ಯಗಾರ್ತಿಯೂ ಆಗಿರುವ ರಚಿತಾರಾಮ್ ಅವರು ಸಹ ಬಹುಮುಖ ಪ್ರತಿಭೆ. ರಾಷ್ಟ್ರಪ್ರಶಸ್ತಿ ವಿಜೇತ ವಿಜಯ ರಾಘವೇಂದ್ರ ಅವರ ನಟನೆ, ಸಂಗೀತ ಪ್ಲಸ್ ಡಾನ್ಸ್ ಬಗೆಗಿನ ಜ್ಞಾನ, ಅರ್ಜುನ್ ಜನ್ಯ ಅವರಿಗಿರುವ ಸಂಗೀತದ ಅರಿವಿನಿಂದಾಗಿ ಈ ಶೋ ಹೆಚ್ಚು ಸದ್ದು ಮಾಡುತ್ತಿದೆ.

46
ಗೋಲ್ಡನ್ ಹ್ಯಾಟ್ ಪಡೆದುಕೊಂಡ ಭವ್ಯಗೌಡ '

ಅಂದಹಾಗೆ ಶೋನಲ್ಲಿ ಕರ್ಣ ಧಾರಾವಾಹಿ ಖ್ಯಾತಿಯ ಭವ್ಯಗೌಡ 'ಕೋಟಿಗೊಬ್ಬ 3’ ಚಿತ್ರದ "ಸಾಲುತಿಲ್ಲವೇ ಸಾಲುತಿಲ್ಲವೇ ನಿನ್ನ ಹಾಗೆ ಮತ್ತು ಯಾರು ಇಲ್ಲವೆ.." ಗೀತೆಗೆ ಅದ್ಭುತವಾಗಿ ನೃತ್ಯ ಮಾಡಿದರು. ಈ ಸಮಯದಲ್ಲಿ ಡಾನ್ಸ್‌ ನೋಡಿದ ಶಿವಣ್ಣ, ರಚಿತರಾಮ್‌ ಪ್ರತಿಯೊಬ್ಬರು ಪ್ರಶಂಸೆ ವ್ಯಕ್ತಪಡಿಸಿ, ಗೋಲ್ಡನ್ ಹ್ಯಾಟ್ ಕೊಟ್ಟರು.

56
"ನಿಮ್ಮ ಧಾರಾವಾಹಿ ನೋಡುತ್ತಿರುತ್ತೇನೆ"

ಆಗ ಭವ್ಯಗೌಡ ರಚಿತರಾಮ್ ಅವರ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರು. ಸ್ಟಾರ್ ನಟಿಯಾದರೂ ಸ್ವಲ್ಪವೂ ಅಹಂಕಾರವಿಲ್ಲ ಎಂದರು. ಆ ಸಮಯದಲ್ಲಿ ಶಿವಣ್ಣ "ಅದಕ್ಕೆ ರಚಿತಾ ಕನ್ನಡದ ಲೇಡಿ ಸೂಪರ್‌ಸ್ಟಾರ್" ಎಂದು ಹೊಗಳಿದರು. ಇದನ್ನು ಕೇಳಿದ ರಚಿತಾಗೆ ಬಹಳ ಸಂತೋಷವಾಗಿ ಶಿವರಾಜ್‌ಕುಮಾರ್‌ ಅವರಿಗೆ ಅಭಿನಂದಿಸಿದರು. ಜೊತೆಗೆ ಭವ್ಯಗೌಡಗೆ ನಾನು ನಿಮ್ಮ ಧಾರಾವಾಹಿ ನೋಡುತ್ತಿರುತ್ತೇನೆ ಎಂದು ಹೇಳಿದರು. ಜೊತೆಗೆ ಜೀ ಕನ್ನಡ ವಾಹಿನಿಯಲ್ಲಿ ಬರುವ ಎರಡು ಧಾರಾವಾಹಿಯನ್ನ ಮಾತ್ರ ಮಿಸ್‌ ಮಾಡದೆ ನೋಡುವುದಾಗಿ ತಿಳಿಸಿದರು.

66
ಕಾಲೆಳೆದ ಅನುಶ್ರೀ

ಹೌದು, ರಚಿತರಾಮ್ ಜೀ ವಾಹಿನಿಯಲ್ಲಿ ಬರುವ 'ಕರ್ಣ' ಮತ್ತು 'ಲಕ್ಷ್ಮೀ ನಿವಾಸ' ಧಾರಾವಾಹಿಯನ್ನ ಬಹಳ ಇಷ್ಟಪಟ್ಟು ನೋಡ್ತಾರಂತೆ. ಅದರಲ್ಲೂ 'ಲಕ್ಷ್ಮೀ ನಿವಾಸ'ದಲ್ಲಿ ಸಿದ್ದೇಗೌಡ ಅವರ ನಟನೆ ಬಹಳ ಇಷ್ಟವಂತೆ. ಇದನ್ನ ಕೇಳಿಸಿಕೊಂಡ ಸಿದ್ದೇಗೌಡ್ರು ಪಾತ್ರಧಾರಿ ಧನಂಜಯ ನಾಚಿನೀರಾದರು. ಇದನ್ನ ಗಮನಿಸಿದ ಅನುಶ್ರೀ ಕಾಲೆಳೆದರು. ಆಗ ಇಡೀ ಶೋ ನಗೆಗಡಲಲ್ಲಿ ತೇಲಿತು.

Read more Photos on
click me!

Recommended Stories