ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿ ಅಶ್ವಿನಿ ಗೌಡ ಅವರು ತೊಳೆಯದ ಕಾಫಿ ಕಪ್ ವಿಚಾರವಾಗಿ ರಘು ಜೊತೆ ಜಗಳವಾಡಿದ ನಂತರ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಈ ಜಗಳವು ಅಶ್ವಿನಿ ಅವರ ಅಹಂಕಾರಕ್ಕೆ ಧಕ್ಕೆ ತಂದಿದ್ದು, ಅವರ ಈ ಪ್ರತಿಭಟನೆಯು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಬಿಗ್ಬಾಸ್ನಲ್ಲಿ (Bigg Boss) ಸದ್ಯ ಅಶ್ವಿನಿ ಗೌಡ ಅವರ ಉಪವಾಸ ಸತ್ಯಾಗ್ರಹದ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿಯೂ ಹವಾ ಸೃಷ್ಟಿಸುತ್ತಿದೆ. ಕಾಫಿ ಕಪ್ನಿಂದ ರಘು ಜೊತೆ ಶುರುವಾದ ಜಗಳ ಅಶ್ವಿನಿ ಗೌಡ ಅವರ ಉಪವಾಸದವರೆಗೆ ಬಂದು ತಲುಪಿದೆ.
29
ಆಗಿದ್ದೇನು?
ಅಷ್ಟಕ್ಕೂ ಆಗಿದ್ದೇನೆಂದರೆ, ಅಶ್ವಿನಿ ಗೌಡ ಅವರು ತಾವು ಕುಡಿದ ಕಾಫಿ ಕಪ್ ಅನ್ನು ತೊಳೆದಿರಲಿಲ್ಲ. ಆ ಬಗ್ಗೆ ರಘು ಪ್ರಶ್ನಿಸಿದ್ದರು. ಆದರೆ ಅದಕ್ಕೆ ಅಶ್ವಿನಿ ತಮ್ಮದೇ ಆದ ರೀತಿಯಲ್ಲಿ ಉತ್ತರ ಕೊಟ್ಟು ರಘು ಅವರ ಕೋಪಕ್ಕೆ ಕಾರಣವಾಗಿದ್ದರು.
39
ಕಪ್ ವಿಷ್ಯದಲ್ಲಿ ಜಗಳ
ತಮಗೆ ಬೆನ್ನು ನೋವು ಇರುವ ಕಾರಣ, ಈಗ ಮಾಡಲು ಆಗಲ್ಲ, ಹತ್ತು ನಿಮಿಷ ಬಿಟ್ಟು ಕಪ್ ತೊಳೆಯುತ್ತೇನೆ ಎಂದಾಗ ಮೊದಲೇ ರೇಗಿದ್ದ ರಘು, ಹತ್ತು ನಿಮಿಷದಲ್ಲಿ ನೋವು ಹೋಗತ್ತಾ ಎಂದಾಗ ಇದು ಅಶ್ವಿನಿ ಗೌಡ (Bigg Boss Ashwini Gowda) ಅವರ ಇಗೋ ಹರ್ಟ್ ಮಾಡಿದೆ.
ಇಬ್ಬರ ನಡುವೆ ಇದೇ ವಿಷಯಕ್ಕೆ ಜಗಳವಾಗಿ, ಅಲ್ಲಿರುವ ಇತರ ಸ್ಪರ್ಧಿಗಳು ಒಬ್ಬೊಬ್ಬರ ಪರ ವಹಿಸಿಕೊಂಡು ಮಾತನಾಡಿದ್ದಾರೆ. ಅಷ್ಟಕ್ಕೂ ಅಶ್ವಿನಿ ಅವರ ಹೆಸರು ಹೇಳಿ ಕರೆದದ್ದು, ಅಶ್ವಿನಿ ಅವರಿಗೆ ಕೋಪ ತರಿಸಿದೆ. ಇದು ತುಂಬಾ ವಿಚಿತ್ರವಾಗಿದೆ ಎಂದು ರಘು ಹೇಳಿದ್ದಾರೆ.
59
ರಘು ಪ್ರಶ್ನೆ
ಜಾಹ್ನವಿ ಈ ಬಗ್ಗೆ ಪ್ರಶ್ನೆ ಮಾಡಲು ಬಂದಾಗ, “ಹೆಸರು ಕರೆದರೂ ಅವರಿಗೆ ಬೇಸರ ಆಗತ್ತಾ?” ಎಂದು ಅಚ್ಚರಿಕೆಯಿಂದ ಕೇಳಿದ್ದಾರೆ. ಹಾಗಿದ್ರೆ ಇನ್ಮುಂದೆ ಅವರು ಊಟನೇ ಮಾಡಲ್ವಾ ಎಂದು ಧ್ರುವಂತ್ ಕೇಳಿದ್ದಾರೆ.
69
ಅಶ್ವಿನಿ ಗೌಡ ಉಪವಾಸ
ಯಾರು ಹೇಳಿದರೂ ಅಶ್ವಿನಿ ಗೌಡ ಊಟ ಮಾಡುತ್ತಿಲ್ಲ. ನನಗೆ ತುಂಬಾ ಹರ್ಟ್ ಆಗಿದೆ ಎಂದಿದ್ದಾರೆ. ಇದರ ಬಗ್ಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಶುರುವಾಗಿದೆ.
79
ಇಂಗ್ಲೆಂಡ್ ರಾಣಿಗೆ ಮೋಸ!
ಪಾಪ ಇಂಗ್ಲೆಂಡ್ ರಾಣಿಗೆ ಮಹಾ ಮೋಸ ಆಗಿ ಬಿಟ್ಟಿದೆ ಎಂದು ತಮಾಷೆ ಮಾಡಿರುವ ನೆಟ್ಟಿಗರು, ಮೊದಲು ಇತರರಿಗೆ ಗೌರವ ಕೊಟ್ಟು ಆಮೇಲೆ ಗೌರವ ತೆಗೆದುಕೊಳ್ಳುವುದನ್ನು ಕಲಿಯಬೇಕು. ಬೇರೆಯವರಿಗೆ ರೆಸ್ಪೆಕ್ಟ್ ಕೊಟ್ಟರಷ್ಟೇ, ಇವರಿಗೂ ಗೌರವ ಕೊಡೋದು ಎನ್ನುತ್ತಿದ್ದಾರೆ ನೆಟ್ಟಿಗರು.
89
ಅಶ್ವಿನಿ ಗೌಡ ನಾಟಕ?
ಬಿಗ್‌ಬಾಸ್ ಮನೆಯಲ್ಲಿ ಏನು ಮಾಡಿದರೂ ನಡೆಯತ್ತೆ, ಸುಲಭದಲ್ಲಿ ತಾವು ಹೊರಕ್ಕೆ ಹೋಗುವುದಿಲ್ಲ ಎನ್ನುವುದು ಅಶ್ವಿನಿ ಅವರಿಗೆ ದೃಢವಾಗಿರುವ ಕಾರಣ ಇಂಥದ್ದೆಲ್ಲಾ ನಾಟಕ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಉಪವಾಸ ಮಾಡಿ ಹೆಚ್ಚೂ ಕಮ್ಮಿಯಾದರೆ ಕಷ್ಟ, ಬೇಗ ಅವರನ್ನು ಮನೆಯಿಂದ ಹೊರಕ್ಕೆ ಕಳಿಸಿ ಎಂದು ಕಾಲೆಳೆಯುತ್ತಿದ್ದಾರೆ.
99
ಹೊರಕ್ಕೆ ಹೋಗಲ್ಲ ಬಿಡಿ
ಒಟ್ಟಿನಲ್ಲಿ ಅಶ್ವಿನಿ ಗೌಡ ಪರ ಇರುವ ವೀಕ್ಷಕರು ತುಂಬಾ ಕಮ್ಮಿ. ಆದರೂ ಅವರು ಇಷ್ಟುಬೇಗ ಬಿಗ್ಬಾಸ್ನಿಂದ ಹೊರಕ್ಕೆ ಹೋಗುವುದಿಲ್ಲ ಎನ್ನುವುದೂ ಅಷ್ಟೇ ದಿಟ ಎಂದು ತಮ್ಮದೇ ಆದ ರೀತಿಯಲ್ಲಿ ಹೇಳಿಕೆಗಳನ್ನು ಮೊದಲಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಬರುತ್ತಲೇ ಇದೆ!