ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ, ಆದಿ ಮತ್ತು ಭಾಗ್ಯಳ ಮದುವೆಯ ನಿರೀಕ್ಷೆಗಳು ತಲೆಕೆಳಗಾಗಿವೆ. ಭಾಗ್ಯಳೇ ಮನವೊಲಿಸಿ ಆದಿಯ ಮದುವೆಗೆ ಸುರಭಿಯನ್ನು ಒಪ್ಪಿಸಿದ್ದಾಳೆ. ಆದರೆ, ಸುರಭಿಯ ನಿಜವಾದ ಹೆಸರು ಆದಿಯ ಗತಕಾಲವನ್ನು ಕೆದಕಿದ್ದು, ಕಥೆಗೆ ರೋಚಕ ತಿರುವು ನೀಡಿದೆ.
ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ಈಗ ಯಾರೂ ಊಹಿಸದ ತಿರುವು ಸಿಕ್ಕಿದೆ. ಆದಿ ಮತ್ತು ಭಾಗ್ಯ ಒಂದಾಗಬೇಕು, ಅವರು ಮದುವೆಯಾಗಬೇಕು ಎಂದು ಬಯಸ್ತಿದ್ದ ಭಾಗ್ಯಾ ಅತ್ತೆ ಕುಸುಮಾ ಸೇರಿದಂತೆ ವೀಕ್ಷಕರ ಲೆಕ್ಕಾಚಾರ ಉಲ್ಟಾ ಆಗಿದೆ.
27
ಮದುವೆಗೆ ಒಪ್ಪಿಗೆ
ಸುರಭಿಯನ್ನು ನೋಡಲು ಆದಿಗೆ ಗೊತ್ತಿಲ್ಲದಂತೆಯೇ ಮನೆಯವರು ಕರೆತಂದಿದ್ದರು. ತನ್ನನ್ನು ಮದುವೆಯಾಗಬೇಡ ಎಂದು ಆದಿ ಎಷ್ಟೇ ಹೇಳಿಕೊಂಡರೂ ಸುರಭಿ ಅದನ್ನು ಕೇಳಲೇ ಇಲ್ಲ. ಮದುವೆಗೆ ಒಪ್ಪಿಗೆ ಸೂಚಿಸಿದ್ದಾಳೆ.
37
ಎಲ್ಲರಿಗೂ ಶಾಕ್
ಅದೇ ವೇಳೆ ಸುರಭಿ ಈ ಮದುವೆಗೆ ಒಪ್ಪುವುದಿಲ್ಲ, ಆದಿ ಮದುವೆ ಭಾಗ್ಯನ ಜೊತೆನೇ ಆಗುವುದು ಎಂದೆಲ್ಲಾ ಕನಸು ಕಾಣುತ್ತಿದ್ದ ಕುಸುಮಾಗೆ ಸುರಭಿಯ ಮಾತು ಕೇಳಿ ಶಾಕ್ ಆಗಿದೆ. ಆದರೆ ಭಾಗ್ಯನಿಗೆ ಖುಷಿಯಾಗಿದೆ.
ಅಷ್ಟಕ್ಕೂ ಇಂಥವರು ಸಿಗಲು ಸಾಧ್ಯವೇ ಇಲ್ಲ ಎಂದು ಭಾಗ್ಯನೇ ಸುರಭಿಯ ಮನವೊಲಿಸಿದ್ದಾಳೆ. ಅವಳ ಮಾತನ್ನು ಕೇಳಿ ಸುರಭಿ ಆದಿಯನ್ನು ಒಪ್ಪಿಕೊಂಡಿದ್ದು ಆಗಿದೆ. ಅಲ್ಲಿಗೆ ಎಲ್ಲರ ಲೆಕ್ಕಾಚಾರ ಉಲ್ಟಾ ಆಗಿದೆ.
57
ರೋಚಕ ತಿರುವು
ಆದರೆ, ಈ ಲೆಕ್ಕಾಚಾರ ಉಲ್ಟಾ ಆಗುವ ಹೊತ್ತಿಗೇ ಮತ್ತೊಮ್ಮೆ ರೋಚಕ ತಿರುವು ಸಿಕ್ಕಿದೆ. ಅದೇನೆಂದರೆ, ಸುರಭಿಯನ್ನು ಅಲ್ಲಿಯವರೆಗೆ ಸುಬ್ಬಿ ಸುಬ್ಬಿ ಎಂದೇ ಕರೆಯುತ್ತಿದ್ದರು. ಆದ್ದರಿಂದ ಆಕೆಯ ನಿಜವಾದ ಹೆಸರು ಏನೆಂದು ಯಾರಿಗೂ ತಿಳಿದಿರಲಿಲ್ಲ.
67
ಸುರಭಿ ಹೆಸರು
ಆದಿಯ ಮನೆಯವರು ಆಕೆಯ ಹೆಸರನ್ನು ಕೇಳಿದಾಗ ಆಕೆ ಸುರಭಿ ಎಂದಿದ್ದಾಳೆ. ಈ ಹೆಸರು ಆದಿಯ ಮಾಜಿ ಲವರ್ ಹೆಸರು. ಈ ಹೆಸರು ಕೇಳುತ್ತಿದ್ದಂತೆಯೇ ಆದಿ ಬೆವರಿ ಜೋರಾಗಿ ಕಿರುಚಿಕೊಂಡು ಬಿದ್ದುಹೋಗಿದ್ದಾನೆ.
77
ಇನ್ನೆಷ್ಟು ವರ್ಷ?
ಹಾಗಿದ್ದರೆ, ಅಲ್ಲಿಗೆ ಆದಿ ಮತ್ತು ಸುಬ್ಬಿ ಮದ್ವೆ ಕ್ಯಾನ್ಸಲ್ ಆದಂತೆ. ಈಗಲೂ ಲೆಕ್ಕಾಚಾರ ಉಲ್ಟಾ ಆಗಿದ್ದು, ಆದಿ ಕೊನೆಗೂ ಭಾಗ್ಯಳನ್ನೇ ಮದುವೆಯಾಗುವುದು ಎನ್ನುತ್ತಿದ್ದಾರೆ ವೀಕ್ಷಕರು. ಆದರೆ ಅದಕ್ಕೆ ಇನ್ನೆಷ್ಟು ವರ್ಷ ಕಾಯಬೇಕೋ ಗೊತ್ತಿಲ್ಲವಷ್ಟೇ.