Anupama Gowda Weight Loss: ಆ ದಿನ ಮನನೊಂದು 10kg ಸಣ್ಣಗಾದ ಅನುಪಮಾ ಗೌಡ; ಇದರ ಸೀಕ್ರೇಟ್ ಏನು?

Published : Apr 16, 2026, 03:25 PM IST

Anupama Gowda Weight Loss: ಕನ್ನಡದ ಧಾರಾವಾಹಿಗಳಲ್ಲಿ ನಟಿಸಿ, ರಿಯಾಲಿಟಿ ಶೋಗಳಲ್ಲಿ ನಿರೂಪಣೆ ಮಾಡುತ್ತಿರುವ ಅನುಪಮಾ ಗೌಡ ಅವರು ಇಂದು ಬಳುಕುವ ಬಳ್ಳಿಯ ಥರ ಕಾಣುತ್ತಿದ್ದಾರೆ. ಆದರೆ ಈ ಹಿಂದೆ ಅವರು ದಪ್ಪಗಿದ್ದರಂತೆ, ಹೇಗೆ ಸಣ್ಣಗಾದೆ ಎಂದು ಹೇಳಿಕೊಂಡಿದ್ದಾರೆ. 

PREV
15
ಫಸ್ಟ್‌ 65kg ತೂಕ ಹೊಂದಿದ್ರು

2107 ರಲ್ಲಿ ಫೋಟೋಶೂಟ್‌ ಮಾಡಿಸುತ್ತಿದ್ದೆ. ಕಾಸ್ಟ್ಯೂಮ್‌ ಹಾಕಿಕೊಂಡಾಗ ನಾನು ದಪ್ಪ ಆಗಿದ್ದೇನೆ ಎಂದು ಗೊತ್ತಾಗಿತ್ತು. ಆಗ ನಾನು 65kg ತೂಕ ಇದ್ದೆ. ಯಾರೂ ಕೂಡ ದಪ್ಪಗಿದ್ದೀಯಾ ಎಂದು ಹೇಳಿರಲಿಲ್ಲ. ನನಗೆ ಅನಿಸಿ ಸಣ್ಣ ಆಗಬೇಕು ಎನ್ನೋ ಯೋಚನೆ ಬಂತು. ಆಗ ನಾನು ಅಕ್ಕ ಧಾರಾವಾಹಿಯಲ್ಲಿ ನಟಿಸುತ್ತಿದ್ದರೂ ಕೂಡ ಸೆಟ್‌ ಊಟ ಮಾಡುತ್ತಿದ್ದೆ. ಆಗ ನನಗೆ 26 ವರ್ಷ ವಯಸ್ಸಾಗಿತ್ತು. ನಾನು ಕರಿಯರ್‌ ಆರಂಭಿಸಿದಾಗ ಸಣ್ಣ ಇದ್ದೆ,ಆಮೇಲೆ ದಪ್ಪಗಾದೆ ಎಂದು ಅನುಪಮಾ ಗೌಡ ಹೇಳಿದ್ದಾರೆ.

25
ಸಣ್ಣಗಾದೆ

ಆಮೇಲೆ ವರ್ಷ ಕಳೆಯುತ್ತಿದ್ದಂತೆ ದಪ್ಪ ಆದೆ. ಅಲ್ಲಿಯವರೆಗೆ ಕ್ಯಾಲರಿ, ಕ್ಯಾಲರಿ ಡೆಪಿಸಿಟ್‌, ಜಿಮ್‌ ಟ್ರೇನಿಂಗ್‌ ಬಗ್ಗೆ ಕೂಡ ಗೊತ್ತಿರಲಿಲ್ಲ. ಆದರೆ ವರ್ಕೌಟ್‌, ಡಯೆಟ್ ಮಾಡಿ ಸಣ್ಣಗಾದೆ. ಆದರೆ ನಾನು ಫಿಟ್‌ ಆಗಿರಲಿಲ್ಲ ಎಂದು ಅನುಪಮಾ ಗೌಡ ಹೇಳಿದ್ದಾರೆ.

35
ಆಮೇಲೆ ಜಿಮ್‌ಗೆ ಹೋದೆ

ಐದು ವರ್ಷಗಳ ಹಿಂದೆ ಪವಿ ಪಡುಕೋಣೆ ಅವರ ಜಿಮ್‌ಗೆ ಜಾಯಿನ್‌ ಆದೆ, ನನ್ನ ಆರೋಗ್ಯ ಸಮಸ್ಯೆ ಬಗ್ಗೆ ಕೇಳಿಕೊಂಡು ಡಯೆಟ್‌, ವರ್ಕೌಟ್‌ ಆರಂಭಿಸಿದೆವು. ಸ್ಟ್ರಾಂಗ್‌ ಆಗಬೇಕಿತ್ತು, ಎರಡನೇ ಬಾರಿಗೆ ಬಿಗ್‌ ಬಾಸ್‌ ಶೋಗೆ ಹೋದಾಗ ನಾನು ಫಿಟ್‌ ಆಗಿದ್ದೆ, ಆರಾಮಾಗಿ ಆಡುತ್ತಿದ್ದೆ ಎಂದು ಅನುಪಮಾ ಗೌಡ ಹೇಳಿದ್ದಾರೆ.

45
ಈಗ ಮಾಹಿತಿ ಸಿಕ್ಕಿದೆ

ಒಂದು ದಾಳಿಂಬೆ ಹಣ್ಣು ತಿಂದಾಗ ಎಷ್ಟು ಕ್ಯಾಲರಿ ಇರುವುದು ಎಂದು ಗೂಗಲ್‌ ಮಾಡುತ್ತಿದ್ದೆ. ಈಗ ಪ್ರೋಟೀನ್‌ ಫುಡ್‌ ಹೆಚ್ಚು ತಿನ್ನುವೆ. ಈಗ ಎಷ್ಟು ತಿನ್ನಬೇಕು? ಏನು ತಿನ್ನಬೇಕು ಎಂದು ಗೊತ್ತಿದೆ. ನಾನು ಮನೆಯೂಟ ಮಾಡ್ತೀನಿ, ಹೊರಗಡೆ ನಾನು ಅಷ್ಟು ಊಟ ಮಾಡೋದಿಲ್ಲ. ವಾರದಲ್ಲಿ ನಾಲ್ಕು ದಿನ ಜಿಮ್‌ಗೆ ಹೋಗ್ತೀನಿ ಎಂದು ಅನುಪಮಾ ಗೌಡ ಹೇಳಿದ್ದಾರೆ.

55
ವಾಕ್‌ ಮಾಡ್ತೀನಿ

ಜಿಮ್‌ ಹೊರತಾಗಿ ನಾನು ಹೆಚ್ಚು ವಾಕ್‌ ಮಾಡ್ತೀನಿ. ಮುಂದೆ ಮ್ಯಾರಥಾನ್‌ ಓಡಬೇಕು ಎನ್ನೋ ಆಸೆ ಇದೆ. ನನಗೆ ಎಲ್ಲ ದಿನವೂ ಒಂದೇ ಥರ ಇದ್ದರೆ ಬೇಸರ ಆಗುವುದು. ಜೀವನದಲ್ಲಿ ಚಾಲೆಂಜಿಂಗ್‌ ಇರಬೇಕು ಎಂದು ಅನುಪಮಾ ಗೌಡ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories