ಶಿರಡಿ ಸಾಯಿಬಾಬಾ ಮಂದಿರದಲ್ಲಿ ಪವಾಡ… ಕಾವ್ಯಾ ಗೌಡ ಅಂದುಕೊಂಡಂತೆ ನಡೆದೆ ಬಿಟ್ಟಿತು!

Published : Apr 16, 2026, 02:46 PM IST

Kavya Gowda in Shirdi: ಕನ್ನಡ ಕಿರುತೆರೆ ನಟಿ ಕಾವ್ಯಾ ಗೌಡ ಶಿರಡಿ ಸಾಯಿ ಬಾಬಾನ ಭಕ್ತೆ. ಅವರು ಹೆಚ್ಚಾಗಿ ಶಿರಡಿಗೆ ದರ್ಶನ ಕೊಡುತ್ತಿರುತ್ತಾರೆ. ಇದೀಗ ಶಿರಡಿಗೆ ತೆರಳಿದ್ದ ಕಾವ್ಯಾ ಗೌಡಗೆ ದೇವಸ್ಥಾನದಲ್ಲಿ ಪವಾಡವೇ ನಡೆದಿದೆ. ಅಷ್ಟಕ್ಕೂ ಆಗಿದ್ದು ಏನು? 

PREV
16
ಕಾವ್ಯಾ ಗೌಡ

ನಟಿ ಹಾಗೂ ಇನ್ಫ್ಲೂಯನ್ಸರ್ ಕಾವ್ಯಾ ಗೌಡ ಶಿರಡಿ ಸಾಯಿ ಬಾಬಾನ ಭಕ್ತೆ. ಹೆಚ್ಚಾಗಿ ಶಿರಡಿಗೆ ತೆರಳಿ ಬಾಬಾ ದರ್ಶನ ಪಡೆದು ಬರುತ್ತಿರುತ್ತಾರೆ. ಈ ಬಾರಿ ಮಿರಾಕಲ್ ನಡೆದಿದೆ. ಈ ಕುರಿತು ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆದ ಪವಾಡ ಏನು? ನಟಿ ಏನು ಹೇಳಿದ್ದಾರೆ ನೋಡಿ.

26
ಪತಿ ಜೊತೆ ಶಿರಡಿ ಸಾಯಿ ಬಾಬಾ ದರ್ಶನ

ಕಾವ್ಯಾ ಗೌಡ ತಮ್ಮ ಪತಿ ಸೋಮಶೇಖರ್ ಜೊತೆ ಶಿರಡಿಗೆ ತೆರಳಿದ್ದು, ಅಲ್ಲಿನ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ದೇವಸ್ಥಾನದ ಫೋಟೊಗಳು, ಅಲ್ಲಿ ನಡೆದ ಸನ್ಮಾನ, ಅಲ್ಲಿ ಕಂಡಂತಹ ವ್ಯಕ್ತಿ, ಜೊತೆಗೆ ನಡೆದ ಪವಾಡವನ್ನೂ ತಿಳಿಸಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

36
ಬಾಬಾ ಪವಾಡ

ಕಾವ್ಯಾ ಗೌಡ ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಕಾವ್ಯಾ ಗೌಡ ತಮ್ಮ ಪತಿ ಬಳಿ ಇವತ್ತು ನಾನು ಮತ್ತು ಬಾಬಾ ಮ್ಯಾಚಿಂಗ್ ಡ್ರೆಸ್ ಹಾಕಿರುತ್ತೇವೆ ಎಂದು ಹೇಳಿದ್ದರಂತೆ. ಅದನ್ನೇ ಮ್ಯಾನಿಫೆಸ್ಟ್ ಮಾಡಿದ್ದರಂತೆ. ಆದರೆ ಅಲ್ಲಿ ಹಾಗಾಗಿರಲಿಲ್ಲ. ಬಾಬಾ ಧರಿಸಿದ ಬಟ್ಟೆಯ ಬಣ್ಣ ಬೇರೆಯೇ ಆಗಿತ್ತು. ಆದರೆ ನಂತರ ನಡೆದದ್ದು ಪವಾಡ.

46
ಸಾಯಿ ಬಾಬಾರನ್ನು ಕಂಡ ಕಾವ್ಯಾ ಗೌಡ

ಬಳಿಕ ಕಾವ್ಯಾ ಗೌಡ ಒಬ್ಬ ವ್ಯಕ್ತಿಯನ್ನು ಕಂಡರು, ಆ ವ್ಯಕ್ತಿಯ ಬಗ್ಗೆ ಏನು ಹೇಳಬೇಕು ಅನ್ನೋದು ನಟಿಗೆ ಗೊತ್ತಾಗಲಿಲ್ಲ. ಆದರೆ ಅವರು ಸಾಯಿ ಬಾಬಾನ ಹಾಗೇ ಕಂಡರಂತೆ. ಕಾವ್ಯಾ ಗೌಡ ಹೃದಯ ಕೂಡ ಅದನ್ನೇ ಹೇಳಿತ್ತಂತೆ. ಕಾವ್ಯಾ ಗೌಡ ಎದುರು ಬಂದ ವ್ಯಕ್ತಿ ಅವರ ಎದುರು ನಿಂತು, ಸ್ವಲ್ಪ ಹೊತ್ತು ಅವರನ್ನೇ ನೋಡಿದಂತೆ. ಆ ಸಂದರ್ಭದಲ್ಲಿ ಕಾವ್ಯಾ ಗೌಡ ಫೋಟೊ ತೆಗೆದುಕೊಂಡರು.

56
ಬಿಳಿ ಬಣ್ಣದ ಬಟ್ಟೆ ಧರಿಸಿದ್ದ ವ್ಯಕ್ತಿ

ಅಲ್ಲಿಂದ ಮರಳಿದ ಬಳಿಕ, ಫೋಟೊಗಳನ್ನು ನೋಡುವಾಗ, ಆ ವ್ಯಕ್ತಿ ಕೂಡ ಬಿಳಿ ಬಣ್ಣದ ಬಟ್ಟೆ ಧರಿಸಿದ್ದುದನ್ನು ನಟಿ ಗಮನಿಸಿದ್ದಾರೆ. ಈ ಭಾವನೆಯನ್ನು ಏನೆಂದು ಕರೆಯುವುದು ಅನ್ನೋದು ನನಗೆ ಗೊತ್ತಿಲ್ಲ. ಆದರೆ ಇವತ್ತು ಬಾಬಾ ನನ್ನ ಜೊತೆ ಇದ್ದರು ಎಂದು ನನಗೆ ಅನಿಸಿತು. ಇದೇ ನಂಬಿಕೆ ಮತ್ತು ಭಾವನೆಗಳ ಮೂಲಕ ಇದು ನಿಜವಾಯ್ತು ಎಂದಿದ್ದಾರೆ..

66
ನನ್ನ ಸಾಯಿ ಬಾಬಾ, ನನ್ನ ಶಕ್ತಿ

ನಟಿ ಈ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ನನ್ನ ಸಾಯಿ ಬಾಬಾ, ನನ್ನ ಶಕ್ತಿ ಎಂದಿದ್ದಾರೆ. ಅಂದ ಹಾಗೆ ಆ ವ್ಯಕ್ತಿ ಕೂಡ ಬಿಳಿ ಬಣ್ಣದ ಶರ್ಟ್ ಧರಿಸಿ, ತಲೆ ಮೇಲೆ ಖಾವಿ ವಸ್ತ್ರವನ್ನು ಧರಿಸಿ, ಕುತ್ತಿಗೆಗೆ ರುದ್ರಾಕ್ಷಿ ಮಾಲೆಗಳನ್ನು ಧರಿಸಿದ್ದರು. ಫೋಟೊವನ್ನು ನೋಡಿದರೆ ಸಾಯಿ ಬಾಬಾರಂತೆ ಒಂದು ಸಲ ಭಾಸವಾಗುತ್ತದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories