ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ಅಭಿಷೇಕ್ ಶ್ರೀಕಾಂತ್, ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿರುವ ರಘು ಮತ್ತು ಗಿಲ್ಲಿ ನಟರ ಚಪಾತಿ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಗಿಲ್ಲಿ ನಟನ ಈ ವರ್ತನೆ ಇದಕ್ಕೆ ಕಾರಣ ಎಂದಿದ್ದಾರೆ. ಅವರು ಹೇಳಿದ್ದೇನು?
ಫೈನಲ್ ಸ್ಪರ್ಧಿಯೆಂದೇ ಬಿಂಬಿತವಾಗಿದ್ದ ಅಭಿಷೇಕ್ ಶ್ರೀಕಾಂತ್ (Bigg Boss Abhishek shrikanth) ಅವರು ಮನೆಯಿಂದ ಹೊರಕ್ಕೆ ಬಂದಿದ್ದಾರೆ. ಮನೆಯಲ್ಲಿ ಮೊದಲ ಬಾರಿಗೆ ಜೋಡಿ ಕ್ಯಾಪ್ಟನ್‌ಷಿಪ್ ಕೊಡಲಾಗಿತ್ತು, ಎರಡನೆಯ ಬಾರಿ ಇವರು ಕ್ಯಾಪ್ಟನ್ ಆಗಿದ್ದರು. ಆದರೆ ಇದೀಗ ಕುತೂಹಲದ ಸನ್ನಿವೇಶದಲ್ಲಿ ಹೊರಕ್ಕೆ ಬಂದಿದ್ದಾರೆ.
27
ಸೆಲೆಬ್ರಿಟಿಯಾದ ಅಭಿಷೇಕ್
ಸಹಜವಾಗಿ ಇದೀಗ ಅಭಿಷೇಕ್ ಅವರು ಸೆಲೆಬ್ರಿಟಿಯಾಗಿದ್ದಾರೆ. ಹಾಗೆ ನೋಡಿದರೆ, ಅವರು ಇದಾಗಲೇ ಹಲವು ಸೀರಿಯಲ್ಗಳಲ್ಲಿ ನಟಿಸಿ ಜನಮನ್ನಣೆ ಗಳಿಸಿದವರೇ. ಆದರೆ ಇದೀಗ ಬಿಗ್ಬಾಸ್ನಿಂದಾಗಿ ಇನ್ನು ಒಂದು ಹಂತ ಮೇಲಕ್ಕೆ ಹೋಗಿದ್ದಾರೆ. ಇದೀಗ ಹಲವು ಮಾಧ್ಯಮಗಳಲ್ಲಿ ಸಂದರ್ಶನ ನೀಡುತ್ತಿದ್ದಾರೆ.
37
ರಘು-ಗಿಲ್ಲಿ ಚಪಾತಿ ವಿಷ್ಯ
ಈಗ ಅವರಿಗೆ ಒಂದು ಪ್ರಶ್ನೆ ಎದುರಾಗಿದೆ. ಅದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಒಳಗಾಗಿರುವ ರಘು ಮತ್ತು ಗಿಲ್ಲಿ ನಟ ಅವರ ಆಹಾರದ ವಿಷಯವಾಗಿ. ಗಿಲ್ಲಿ ನಟ ರಘು ಬಳಿ ಬಂದು ಚಪಾತಿ ಕೇಳಿದ್ರೆ ರಘು ಕೊಡಲ್ಲ ಎಂದ್ರು, ಬಳಿಕ ರಾಶಿಕಾ ಬಂದಾಗ ಚಪಾತಿ ತಿಂದರು.
ಇದರ ವಿಡಿಯೋ ವೈರಲ್ ಆಗುತ್ತಲೇ ರಘು ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಟೀಕೆಗಳು ವ್ಯಕ್ತವಾಗುತ್ತಿವೆ. ಆಹಾರದ ವಿಷ್ಯದಲ್ಲಿ ಯಾವ ದುಷ್ಮನ್ಗೂ ಯಾರೂ ಹೀಗೆ ಮಾಡಲ್ಲ ಎಂದೆಲ್ಲಾ ಹೇಳಲಾಗುತ್ತಿದೆ.
57
ಕ್ಲಾರಿಟಿ ಕೊಟ್ಟ ಅಭಿಷೇಕ್
ಇದೀಗ, ಈ ವಿಷಯದ ಬಗ್ಗೆ ಅಭಿಷೇಕ್ ಅವರು ಕ್ಲಾರಿಟಿ ಕೊಟ್ಟಿದ್ದಾರೆ. ನೋಡಿ ಗಿಲ್ಲಿ ನಟನ ಬಗ್ಗೆ ಎಲ್ಲರಿಗೂ ಚೆನ್ನಾಗಿ ಗೊತ್ತು. ಅವನು ಹೇಗೆಂದ್ರೆ ಯಾರಾದ್ರೂ ತಿನ್ನುತ್ತಾ ಇದ್ದರೆ ಪದೇ ಪದೇ ಕೊಡಿ ಕೊಡಿ ಎನ್ನುತ್ತಿರುತ್ತಾನೆ. ರಘುಗೂ ಹಾಗೆಯೇ ಮಾಡಿರ್ತಾನೆ, ಸಾವಿರ ಸಲ ಕೇಳಿರ್ತಾನೆ. ಆದರೆ ಸಾವಿರ ಸಲ ಕೊಟ್ಟ ಮೇಲೆ ಯಾವಾಗ ಕೊಡಲ್ಲ ಎನ್ನುತ್ತಾನೋ, ಅದಷ್ಟು ಪ್ರಸಾರ ಆಗಿರುತ್ತೆ ಅಷ್ಟೇ ಅದರಲ್ಲಿ, ದೊಡ್ಡ ವಿಷ್ಯವೇನಿಲ್ಲ ಎಂದಿದ್ದಾರೆ.
67
ನಿಮಗೇ ಆದ್ರೆ ಏನಾಗುತ್ತೆ?
ನಿಮಗೆ ಯಾರಾದ್ರೂ ಏನಾದ್ರೂ ವಸ್ತು ಕೊಡಿ ಕೊಡಿ ಎಂದು ಪದೇ ಪದೇ ಕೇಳಿದಾಗ ಎಷ್ಟು ಬಾರಿ ಕೊಡುತ್ತೀರಿ ಹೇಳಿ, ಒಂದು ಹಂತ ಮೀರಿದಾಗ ಸಹನೆ ಕಳೆದುಕೊಳ್ತೀರಿ ತಾನೆ ಎಂದು ಪ್ರಶ್ನಿಸಿರೋ ಅಭಿಷೇಕ್, ಗಿಲ್ಲಿ ಕೂಡ ಹಾಗೆನೇ. ಯಾರಾದ್ರೂ ಏನಾದ್ರೂ ಕೊಡಲ್ಲ ಎಂದ್ರೂ ಪದೇ ಪದೇ ಕೇಳಿದಾಗ ಕಿರಿಕಿರಿಯಾಗಿ ಒಂದು ಸಲ ಬೈದು ಕಳಿಸಿರ್ತಾರೆ ಅಷ್ಟೇ ಎಂದಿದ್ದಾರೆ.
77
ವೀಕ್ಷಕರಿಗೆ ಕಿವಿಮಾತು
ಈ ಮೂಲಕ ರಘು ಆಹಾರದ ವಿಷಯದಲ್ಲಿ ಕೊಡಲ್ಲ ಎಂದಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಅಷ್ಟೊಂದು ಅವರ ವಿರುದ್ಧ ರೇಗುವ ಅಗತ್ಯವಿಲ್ಲ ಎಂದು ಅಭಿಷೇಕ್ ಅವರು ಸೂಕ್ಷ್ಮವಾಗಿ ವೀಕ್ಷಕರಿಗೆ ತಿಳಿಸಿದ್ದಾರೆ.