ಪ್ಯಾನಿಕ್ ಅಟ್ಯಾಕ್ ಮತ್ತು ಅನಾರೋಗ್ಯದ ಕಾರಣದಿಂದಾಗಿ ನಟಿ ಸಂಗೀತಾ ಭಟ್ ಬಿಗ್‌ಬಾಸ್ ಕನ್ನಡ ಸೀಸನ್ 13ರ ಮನೆಯಿಂದ ಹೊರಬಂದಿದ್ದಾರೆ. ಶೋಗಿಂತ ಜೀವನ ಮತ್ತು ಆರೋಗ್ಯವೇ ಮುಖ್ಯ ಎಂದು ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಪತಿ ಸುದರ್ಶನ್ ರಂಗಪ್ರಸಾದ್ ಕೂಡ ಆಕೆಯ ಆರೋಗ್ಯವೇ ಮುಖ್ಯ ಎಂದು ಭಾವುಕರಾಗಿದ್ದಾರೆ.
ಅನಾರೋಗ್ಯದ ಕಾರಣದಿಂದಾಗಿ ಬಿಗ್‌ಬಾಸ್ ಕನ್ನಡ ಸೀಸನ್ 13ರ (Bigg Boss Kannada 13) ಮನೆಯಿಂದ ಸಂಗೀತಾ ಭಟ್ (Sangeetha Bhat) ಹೊರಬಂದಿದ್ದಾರೆ ಹಠಾತ್ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಂಗೀತಾ ಭಟ್ ನೇರವಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರ ಸಲಹೆ ಮೇರೆಗೆ ಅರ್ಧಕ್ಕೆ ನಿಲ್ಲಿಸಿ ಹೊರ ಬಂದಿದ್ದರು.
26
ಪ್ಯಾನಿಕ್ ಅಟ್ಯಾಕ್
ಬಿಗ್ ಬಾಸ್ ಮನೆಗೆ ಹೋದಾಗ ಸಂಗೀತಾ ಅ ವರಿಗೆ ಪ್ಯಾನಿಕ್ ಅಟ್ಯಾಕ್ ಆಗುತ್ತಾ ಹೋಯಿತು. ಒಂದೆರಡು ವಾರಗಳ ಹಿಂದೆಯ ಸಂಗೀತಾ ಮಾನಸಿಕವಾಗಿ ಕುಗ್ಗಿ ಹೋಗಿದ್ದರಂತೆ. ಅದಾದ ನಂತರ ದೈಹಿಕವಾಗಿಯೂ ಸೋತು ಹೋಗಿದ್ದರು. ಅಷ್ಟರಲ್ಲಿಯೇ ಅವರು, ಬಿಗ್ಬಾಸ್ಗಿಂತ ಜೀವನವೇ ಮುಖ್ಯ ಎಂದುಕೊಂಡು ಹೊರಕ್ಕೆ ಬಂದಿದ್ದಾರೆ.
36
ಸಾಮಾನ್ಯ ಜನರ ಅನಿಸಿಕೆ
ಬಿಗ್‌ಬಾಸ್ ಮನೆಗೆ ಹೋಗುವುದು ಎಂದರೆ ಲಕ್ಷಾಂತರ ಮಂದಿಯ ಕನಸು.ದೊಡ್ಡ ದೊಡ್ಡ ಸೆಲೆಬ್ರಿಟಿಗಳು, ತಮಗೆ ಬಿಗ್ಬಾಸ್ಗೆ ಕಾಲ್ ಬಂದರೂ ಹೋಗದೇ ಇರಲು ಹಲವು ಕಾರಣ ಇದೆ. ಆದರೆ ಬಿಗ್ಬಾಸ್ಗೆ ಹೋದರೆ ತಮ್ಮ ಜೀವನವೇ ಬದಲಾಗಿ ಹೋಗುತ್ತದೆ, ತಾವು ಸೆಲೆಬ್ರಿಟಿ ಆಗಿಬಿಡುತ್ತೇವೆ ಎನ್ನುವ ಕಲ್ಪನೆಯಲ್ಲಿ ಇರುವವರಿಗೆ ಬಿಗ್ಬಾಸೇ ಸರ್ವಸ್ವ. ಆದ್ದರಿಂದ ಬಿಗ್ಬಾಸ್ನಲ್ಲಿ ಸಿಕ್ಕ ಅವಕಾಶವನ್ನು ಹಲವರು ಏನೇ ಆದರೂ ಬಿಟ್ಟುಕೊಡುವುದಿಲ್ಲ. ಆದರೆ ಸಂಗೀತಾ ಅವರು ತಮಗೆ ಜೀವನವೇ ಮುಖ್ಯ ಎಂದು ಹೊರಕ್ಕೆ ಬಂದಿದ್ದಾರೆ.
ಹೀಗೆ ಏಕಾಏಕಿ ಬಂದಾಗ, ಪತಿ,ನಟ ಸುದರ್ಶನ್ ರಂಗಪ್ರಸಾದ್ (ಭಾಗ್ಯಲಕ್ಷ್ಮಿ ಸೀರಿಯಲ್ ತಾಂಡವ್) ರಿಯಾಕ್ಷನ್ ಹೇಗಿತ್ತು ಎಂದು ಸಂಗೀತಾ ಅವರಿಗೆ ಕೇಳಿದಾಗ, ಅವರು ಲೈವ್ನಲ್ಲಿ ನನಗೆ ಹೀಗೆ ಆದಾಗ ಅದನ್ನು ಸುದರ್ಶನ್ ನೋಡಿರಲಿಲ್ಲ, ಶೂಟಿಂಗ್ನಲ್ಲಿ ಇದ್ದರು. ಆದರೆ ಅವರಿಗೆ ಹಲವರು ಕಾಲ್ ಮಾಡಿದಾಗಲೇ ವಿಷ್ಯ ತಿಳಿಯಿತು. ಅವರು ಶಾಕ್ನಿಂದ ತತ್ತರಿಸಿ ಹೋದರು ಎಂದಿದ್ದಾರೆ.
56
ಜೀವಂತವಾಗಿ ಇದ್ರೆ ಸಾಕು
ನಾನು ಬಿಗ್‌ಬಾಸ್ ಮನೆಯಿಂದ ಜೀವಂತವಾಗಿ, ಹೆಲ್ತಿಯಾಗಿ ಬಂದರೆ ಸಾಕು ಎಂದು ಬೇಡಿಕೊಂಡರು. ನೀನು ಆರೋಗ್ಯದಿಂದ ಇದ್ದರೆ ಸಾಕು, ಬಿಗ್ಬಾಸ್ಗೆ ಹೋಗಬೇಕೆಂದು ಇಲ್ಲ, ಅಲ್ಲಿಂದ ಏನೂ ಗಳಿಸದಿದ್ದರೂ, ಮುಂದುವರೆಯದಿದ್ದರೂ ಪರವಾಗಿಲ್ಲ. ಆರೋಗ್ಯವಾಗಿ, ಜೀವಂತವಾಗಿ ಇರಬೇಕು ಅಷ್ಟೇ ಎಂದು ಭಾವುಕರಾದರು ಎಂದು ಸಂಗೀತಾ ಹೇಳಿದ್ದಾರೆ. ಎಷ್ಟು ದಿನ ಇರ್ತೀವೋ ಅಷ್ಟು ದಿನ ಒಟ್ಟಿಗೇ ನೆಮ್ಮದಿಯಾಗಿ ಇರಬೇಕು ಅಷ್ಟೇ ಎಂದರು.
66
ಫೋನ್ನಲ್ಲಿ ಮೆಸೇಜ್
ನಾನು ಮನೆಗೆ ಬಂದಾಗ, ನನ್ನ ಫೋನ್ ಚೆಕ್ ಮಾಡಿದ್ರೆ ಅವರು ದಿನವೂ ನನ್ನ ಫೋನ್ಗೆ ಮೆಸೇಜ್ ಕಳಿಸ್ತಾ ಇದ್ದರು. ಅಷ್ಟು ಮಿಸ್ ಮಾಡಿಕೊಳ್ಳುತ್ತಿದ್ದರು. ಬಿಗ್‌ಬಾಸ್ ಮನೆಯಲ್ಲಿ ಊಟ ಮಾಡಿದ್ನಾ, ನಿದ್ದೆ ಮಾಡಿದ್ನಾ ಎಂದು ಸ್ಕ್ರೀನ್ಷಾಟ್ ತೆಗೆದು ಇಟ್ಟುಕೊಂಡಿದ್ರು. ಅವರು ತುಂಬಾನೇ ಮಿಸ್ ಮಾಡಿಕೊಂಡಿದ್ರು. ನನಗೆ ಷೋಗಿಂದ ಲೈಫೇ ಮುಖ್ಯ ಎನ್ನಿಸಿತು ಎಂದಿದ್ದಾರೆ ಸಂಗೀತಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.