Sudarshan Rangaprasad new serial: ಅತ್ತ ಬಿಗ್ ಬಾಸ್ ಶೋನಿಂದ ನಟಿ ಸಂಗೀತಾ ಭಟ್ ಹೊರಬರುತ್ತಿದ್ದಂತೆ, ಇತ್ತ ಪತಿ ಸುದರ್ಶನ್ ರಂಗಪ್ರಸಾದ್ ಜನಪ್ರಿಯ ವಾಹಿನಿಯ ಧಾರಾವಾಹಿಯೊಂದರಲ್ಲಿ ಖಡಕ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡ ಸುದರ್ಶನ್ ಬಿಗ್ ಬಾಸ್ ಕನ್ನಡ ಶೋನಿಂದ ನಟಿ ಸಂಗೀತಾ ಭಟ್ ಹೊರಬಂದ ಬೆನ್ನಲ್ಲೇ, ಅವರ ಪತಿ, ನಟ ಸುದರ್ಶನ್ ರಂಗಪ್ರಸಾದ್ ಹೊಸ ಧಾರಾವಾಹಿಯೊಂದಕ್ಕೆ ಎಂಟ್ರಿ ಕೊಟ್ಟಿದ್ದಾರೆ. ‘ಭಾಗ್ಯಲಕ್ಷ್ಮೀ’ ಸೀರಿಯಲ್‌ನ ‘ತಾಂಡವ್’ ಪಾತ್ರದ ಮೂಲಕ ಮನೆಮಾತಾಗಿದ್ದ ಸುದರ್ಶನ್, ಇದೀಗ ಜನಪ್ರಿಯ ವಾಹಿನಿಯ ಧಾರಾವಾಹಿಯೊಂದರಲ್ಲಿ ಖಡಕ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
25
ಈಗ ವಿಲನ್ ಆಗಿ ಎಂಟ್ರಿ
ಈಗ ವಿಲನ್ ಆಗಿ ಎಂಟ್ರಿ ಹೌದು. ‘ಭಾಗ್ಯಲಕ್ಷ್ಮೀ’ ಧಾರಾವಾಹಿಯ ಕಥಾನಾಯಕ ‘ತಾಂಡವ್’ ಪಾತ್ರದ ಮೂಲಕ ಮನೆಮಾತಾಗಿದ್ದ ಸುದರ್ಶನ್ ರಂಗಪ್ರಸಾದ್, ಇದೀಗ ಪ್ರೇಕ್ಷಕರ ಮುಂದೆ ಮತ್ತೊಂದು ಹೊಸ ಅವತಾರದಲ್ಲಿ ಅಬ್ಬರಿಸಲು ರೆಡಿಯಾಗಿದ್ದಾರೆ. ಸನ್ ಉದಯ ವಾಹಿನಿಯ ಜನಪ್ರಿಯ ಧಾರಾವಾಹಿ ‘ರಥಸಪ್ತಮಿ’ಯಲ್ಲಿ ಸುದರ್ಶನ್ ಅವರು ಖಡಕ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೌಟುಂಬಿಕ ಕಥೆಯ ನಾಯಕನಾಗಿ ಮೆಚ್ಚುಗೆ ಗಳಿಸಿದ್ದ ಅವರು, ಈಗ ವಿಲನ್ ಆಗಿ ಹೇಗೆ ಅಬ್ಬರಿಸಲಿದ್ದಾರೆ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ.
35
ಅಭಿಮಾನಿಗಳಿಗೆ ತೀವ್ರ ಬೇಸರ
ಅಭಿಮಾನಿಗಳಿಗೆ ತೀವ್ರ ಬೇಸರ ಸುದರ್ಶನ್ ಅವರಿಗೆ ಹೊಸ ಪ್ರಾಜೆಕ್ಟ್ ಸಿಕ್ಕ ಸಂಭ್ರಮ ಒಂದೆಡೆಯಾದರೆ, ಅವರ ಪತ್ನಿ ಸಂಗೀತಾ ಭಟ್ ಇತ್ತೀಚೆಗಷ್ಟೇ ಬಿಗ್ ಬಾಸ್ ಕನ್ನಡ ಸೀಸನ್‌ನಿಂದ ಹೊರಬರಬಂದರು. ವಾರದ ಆರಂಭದಲ್ಲಿ ಟಾಸ್ಕ್ ವೇಳೆ ಎದೆಬಡಿತ ಹೆಚ್ಚಾಗಿ ತೀವ್ರ ಅಸ್ವಸ್ಥಗೊಂಡಿದ್ದ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿತ್ತು. ಆದರೆ, ಭಾನುವಾರದ ಸಂಚಿಕೆಯಲ್ಲಿ "ಆಟಕ್ಕಿಂತ ಆರೋಗ್ಯವೇ ಮುಖ್ಯ" ಎಂದು ಹೇಳಿದ ಕಿಚ್ಚ ಸುದೀಪ್, ಪ್ಯಾನಿಕ್ ಅಟ್ಯಾಕ್‌ನಿಂದ ಬಳಲುತ್ತಿದ್ದ ಸಂಗೀತಾ ಅವರನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಿಕೊಟ್ಟರು. ಸಂಗೀತಾ ಅವರ ಈ ಹಠಾತ್ ನಿರ್ಗಮನ ಅವರ ಅಭಿಮಾನಿಗಳಿಗೆ ತೀವ್ರ ಬೇಸರ ತಂದಿದೆ.
ಕಿರುತೆರೆಯಲ್ಲಿ ಹೊಸ ಇನ್ನಿಂಗ್ಸ್ ಆರಂಭ ಸುದರ್ಶನ್ ಮತ್ತು ಸಂಗೀತಾ ಅವರದ್ದು 9 ವರ್ಷಗಳ ಸುಂದರ ಪ್ರೇಮ ವಿವಾಹ. ಇಬ್ಬರೂ ಒಬ್ಬರಿಗೊಬ್ಬರು ಸದಾ ಬೆಂಬಲವಾಗಿ ನಿಲ್ಲುವ ಈ ಜೋಡಿ, ಇತ್ತೀಚೆಗಷ್ಟೇ ತಮ್ಮ ಕನಸಿನ ಹೊಸ ಮನೆ ಖರೀದಿಸಿ ‘ಸುಖಾಸ’ ಎಂದು ಹೆಸರಿಟ್ಟಿದ್ದರು. ಇದೀಗ ಸಂಗೀತಾ ಬಿಗ್ ಬಾಸ್‌ನಿಂದ ಹೊರಬಂದ ಹೊತ್ತಲ್ಲೇ, ಸುದರ್ಶನ್ ಅವರಿಗೆ ಹೊಸ ಸೀರಿಯಲ್ ಆಫರ್ ಸಿಕ್ಕಿದೆ. ಪತ್ನಿಯ ಬೆಂಬಲದೊಂದಿಗೆ ಸುದರ್ಶನ್ ಮತ್ತೆ ಕಿರುತೆರೆಯಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.
55
ದೊಡ್ಮನೆಯ ಆಟಕ್ಕೆ ಹೊಸ ತಿರುವು
ದೊಡ್ಮನೆಯ ಆಟಕ್ಕೆ ಹೊಸ ತಿರುವು ಇನ್ನೊಂದೆಡೆ, ಸಂಗೀತಾ ಅವರ ನಿರ್ಗಮನದ ಬೆನ್ನಲ್ಲೇ ‘ಅಗ್ನಿಪರೀಕ್ಷೆ’ ಖ್ಯಾತಿಯ ಕುಮಾರಿ ಮತ್ತು ಲಕ್ಷ್ಮೀ ಅವರು ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದು, ದೊಡ್ಮನೆಯ ಆಟಕ್ಕೆ ಹೊಸ ತಿರುವು ಸಿಕ್ಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.