ಬಿಗ್ಬಾಸ್ 13ನೇ ಆವೃತ್ತಿಗಾಗಿ ಜನಸಾಮಾನ್ಯರ ಅಗ್ನಿಪರೀಕ್ಷೆ ಮುಗಿದಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ, ಕಿಚ್ಚ ಸುದೀಪ್ ಅವರು ವಿಮಾನದ ರೂಪಕದ ಮೂಲಕ ಸೆಪ್ಟೆಂಬರ್ 6 ರಂದು ಸಂಜೆ 7 ಗಂಟೆಗೆ ಗ್ರ್ಯಾಂಡ್ ಓಪನಿಂಗ್ ದಿನಾಂಕವನ್ನು ಘೋಷಿಸಿದ್ದಾರೆ.
ಬಿಗ್ಬಾಸ್ 13 (Bigg Boss 13)ಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದಾಗಲೇ ಜನಸಾಮಾನ್ಯರಿಗಾಗಿ ಏರ್ಪಡಿಸಿದ್ದ ಅಗ್ನಿಪರೀಕ್ಷೆ ಕೂಡ ಮುಕ್ತಾಯವಾಗಿದ್ದು, ಅವರಲ್ಲಿ ಸೆಲೆಕ್ಟ್ ಆದವರಿಗೆ ತಿಳಿಸಲಾಗಿದೆ.
26
ಹೋಗುವವರು ಯಾರು?
ಈ ಬಾರಿ ಬಿಗ್ಬಾಸ್ ಮನೆಯೊಳಕ್ಕೆ ಹೋಗುವವರು ಯಾರು ಎನ್ನುವ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆಯಾದರೂ, ಇಂದಿಗೂ ಅಂತಿಮವಾಗಿ ಯಾರು ಎನ್ನುವುದು ತಿಳಿದಿಲ್ಲ.
36
ಸೆಪ್ಟೆಂಬರ್ 6ರಂದು ಗ್ರ್ಯಾಂಡ್ ಓಪನಿಂಗ್
ಈ ನಡುವೆಯೇ, ಬಿಗ್ಬಾಸ್ ವಿಮಾನದಲ್ಲಿ ಬಂದ ಕಿಚ್ಚ ಸುದೀಪ್, ಸೆಪ್ಟೆಂಬರ್ 6ರಂದು ಗ್ರ್ಯಾಂಡ್ ಓಪನಿಂಗ್ ಬಗ್ಗೆ ಮಾಹಿತಿ ನೀಡಿದ್ದಾರೆ.
ಪ್ರತಿಯೊಬ್ಬರಿಗೂ ಹಾರುವ ಕನಸು ಇರುತ್ತದೆ. ಆದರೆ, ರೆಕ್ಕೆ ಕಟ್ಟುವ ಅವಕಾಶ ಸಿಗುವುದು ಕೆಲವರಿಗೆ ಮಾತ್ರ. ಫ್ಲೈಟ್ ಮೋಡ್ ಆನ್ ಆದ ಮೇಲೆ ಹೊರಗಡೆ ನೆಟ್ವರ್ಕ್ ಕಟ್ ಆಗುತ್ತದೆ. ನಿಮ್ಮ ನಿಜವಾದ ಕ್ಯಾರೆಕ್ಟರ್ ಹೊರಕ್ಕೆ ಬರುತ್ತದೆ. ಎನ್ನುತ್ತಲೇ ಬಿಗ್ಬಾಸ್ ಪಯಣದ ಕುರಿತು ಸುದೀಪ್ ಮಾತನಾಡಿದ್ದಾರೆ.
56
ನಿಮ್ಮ ಕಂಟ್ರೋಲ್ನಲ್ಲಿ ಯಾವುದೂ ಇರುವುದಿಲ್ಲ
ಜರ್ನಿ ನಿಮ್ಮದೇ ಆದರೂ ಟೇಕಾಫ್ನಿಂದ ಲ್ಯಾಂಡಿಂಗ್ ವರೆಗೂ ನಿಮ್ಮ ಕಂಟ್ರೋಲ್ನಲ್ಲಿ ಯಾವುದೂ ಇರುವುದಿಲ್ಲ ಎಂದಿದ್ದಾರೆ ಸುದೀಪ್
66
ನೋಡುವ ಮಜಾನೇ ಬೇರೆ
ಆದರೆ, ರಿಮೋಟ್ ಸೈಡಿಗಿಟ್ಟು ಈ ಜರ್ನಿಯ ಭಾಗ್ಯ ನೋಡುವ ಮಜಾನೇ ಬೇರೆ ಎನ್ನುತ್ತಲೇ ಬಿಗ್ಬಾಸ್ ಗ್ರ್ಯಾಂಡ್ ಟೇಕ್ ಆಫ್ ಸೆಪ್ಟೆಂಬರ್ 6ರಂದು ಸಂಜೆ 7 ಗಂಟೆಗೆ ಎನ್ನುವ ಮಾಹಿತಿ ಕೊಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.