ಈ ಬಾರಿ ಬಿಗ್ ಬಾಸ್ ಸೆಲೆಬ್ರಿಟಿಗಳಿಗೆ ಮಾತ್ರ ಸೀಮಿತವಾಗಿಲ್ಲ, ಜನಸಾಮಾನ್ಯರಿಗೂ ಅವಕಾಶ ನೀಡಿದೆ. ಬಿಗ್ ಬಾಸ್ ಮನೆಗೆ ಪ್ರವೇಶ ಪಡೆಯಲು ಆಸಕ್ತಿ ಹೊಂದಿರುವವರು ಅನುಸರಿಸಬೇಕಾದ ನಿಯಮಗಳು, ಮೂರು ನಿಮಿಷಗಳ ವಿಡಿಯೋದಲ್ಲಿ ಯಾವೆಲ್ಲಾ ಮಾಹಿತಿ ಇರಬೇಕು ಎಂಬುದನ್ನು ಕಲರ್ಸ್ ಕನ್ನಡ ವಾಹಿನಿ ಸ್ಪಷ್ಟಪಡಿಸಿದೆ.
ಈ ಬಾರಿ ಬಿಗ್ಬಾಸ್ ಅರ್ಥಾತ್ ಬಿಗ್ಬಾಸ್ 13 ಸಾಮಾನ್ಯ ಜನರಿಗೂ ಬಿಗ್ ಆಫರ್ ಕೊಟ್ಟಿರೋ ಕಾರಣದಿಂದ ಸರಿಯಾದ ರೂಲ್ಸ್ ತಿಳಿದುಕೊಳ್ಳದೇ ಅರ್ಧಂಬರ್ಧ ತಿಳಿದುಕೊಂಡು ವಿಡಿಯೋ ಮಾಡಿ ಶೇರ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಲರ್ಸ್ ಕನ್ನಡ ವಾಹಿನಿ (Bigg Boss 12 in Colors Kannada) ಸ್ಪರ್ಧಿಗಳಿಗೆ ವಿಶೇಷ ಸೂಚನೆಯನ್ನು ನೀಡಿದೆ.
26
ನಿಮಗೂ ಭಾಗವಹಿಸಲು ಅವಕಾಶ
ಅಷ್ಟಕ್ಕೂ ಬಿಗ್ಬಾಸ್ ಎಂದರೆ ಸಾಮಾನ್ಯವಾಗಿ ಸೆಲೆಬ್ರಿಟಿಗಳಿಗೆ ಸೀಮಿತ. ಅದರಲ್ಲಿಯೂ ಕಾಂಟ್ರವರ್ಸಿ ಮಾಡಿಕೊಂಡವರಿಗೆ ಮೊದಲ ಆದ್ಯತೆ. ಆದರೆ ಈ ಬಾರಿ ಸಾಮಾನ್ಯ ಜನರಿಗೂ ಅವಕಾಶ ಸಿಗಲಿದೆ ಎಂದು ವಾಹಿನಿ ತಿಳಿಸಿದ್ದು, ಬಿಗ್ಬಾಸ್ ಮನೆಗೆ ಹೋಗಲು ಹಲವರು ಎಲ್ಲಿ ಛಾನ್ಸ್ ತಪ್ಪತ್ತೋ ಎಂದು ತರಾತುರಿಯಲ್ಲಿ ಏನೇನೋ ವಿಡಿಯೋ ಮಾಡಿ ಹಾಕುತ್ತಿರುವುದಾಗಿ ವಾಹಿನಿ ಹೇಳಿದೆ.
36
ವಾಹಿನಿ ಕೊಟ್ಟ ಸೂಚನೆ ಏನು?
ಬಿಗ್ಬಾಸ್ ಆಡಿಷನ್ನಲ್ಲಿ ಭಾಗವಹಿಸಲು ನೀವು ತೋರುತ್ತಿರುವ ಉತ್ಸಾಹ ನಮ್ಮನ್ನು ಅಚ್ಚರಿಗೊಳಿಸಿದೆ. ಆದರೆ ಉತ್ಸಾಹದ ಭರದಲ್ಲಿ ಆಡಿಷನ್ ವಿಡಿಯೋ ಕಳುಹಿಸಲು ನಾವು ಸೂಚಿಸಿರುವ ನಾಲ್ಕು ಹಂತಗಳನ್ನು ಫಾಲೋ ಮಾಡಲು ಮರೆಯಬೇಡಿ ಎಂದು ವಾಹಿನಿ ಹೇಳಿದೆ.
ಎಲ್ಲಕ್ಕಿಂತ ಮುಖ್ಯವಾಗಿ, ವಿಡಿಯೋ ಮಾಡುವಾಗ ನಿಮ್ಮ ಸ್ಪೆಶ್ಯಾಲಿಟಿ ಏನು, ಬಿಗ್ಬಾಸ್ನಲ್ಲಿ ಭಾಗವಹಿಸಲು ನೀವು ಯಾಕೆ ಸೂಕ್ತ ವ್ಯಕ್ತಿ, ಸ್ಪರ್ಧೆಯಲ್ಲಿ ನಿಮ್ಮಿಂದ ನಾವು ಏನು ನಿರೀಕ್ಷಿಸಬಹುದು ಎಂಬುದನ್ನು ಸ್ಪಷ್ಟವಾಗಿ ಹೇಳಿ ಎಂದಿದೆ ಕಲರ್ಸ್ ವಾಹಿನಿ.
56
ಇದನ್ನೂ ಹೇಳೋದು ಕಡ್ಡಾಯ
ಪ್ರತಿಭೆ, ಆತ್ಮವಿಶ್ವಾಸ ಮತ್ತು ನಿಮ್ಮ ಟ್ಯಾಲೆಂಟ್ ಅನ್ನು ತೋರಿಸಲೊಂದು ವೇದಿಕೆ. ಇಲ್ಲಿ ಎಂಟ್ರಿ ಪಡೆಯಲು ನೀವೆಷ್ಟು ಅರ್ಹರು ಎನ್ನುವುದನ್ನು ವಿಡಿಯೋದಲ್ಲಿ ತಪ್ಪದೇ ಹೇಳಿ. ಆಲ್ ದಿ ಬೆಸ್ಟ್ ಎಂದು ಹೇಳಲಾಗಿದೆ. ಆದ್ದರಿಂದ ನೀವು ಈ ನಾಲ್ಕು ನಿಯಮಗಳನ್ನು ಫಾಲೋಮಾಡಲೇಬೇಕಿದೆ.
66
ಮಾಡಬೇಕಾದದ್ದು ಏನು?
ಇದಾಗಲೇ ಬಿಗ್ಬಾಸ್ನ ಆಡಿಷನ್ನಲ್ಲಿ ಭಾಗವಹಿಸಲು ನೀವು ಮೂರು ನಿಮಿಷಗಳ ವಿಡಿಯೋ ಮಾಡಬೇಕು. ಅದರಲ್ಲಿ ನೀವು ಬಿಗ್ಬಾಸ್ ಮನೆಯಲ್ಲಿ ನೀವು ಏಕೆ ಇರಬೇಕು ಎನ್ನುವುದನ್ನು ತಿಳಿಸಬೇಕು. ಇದರಲ್ಲಿ ತಮ್ಮ ಹೆಸರು, ವಿಳಾಸ, ವಯಸ್ಸು ಎಲ್ಲಾ ಡಿಟೇಲ್ಸ್ ಕೊಟ್ಟು ವಿಡಿಯೋ ಮಾಡಿ colorskannada.jiostar.com ಗೆ ಕಳುಹಿಸಬೇಕು ಎಂದು ವಾಹಿನಿ ತಿಳಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.