ಬಿಗ್ ಬಾಸ್ ಫಿನಾಲೆ ಇಂದು ಸಂಜೆ ಪ್ರಸಾರಗೊಳ್ಳಲಿದೆ. ವಿನ್ನರ್ ಯಾರು ಅನ್ನೋ ಅಧಿಕೃತ ಘೋಷಣೆ ಇನ್ನಷ್ಟೆ ಹೊರಬೀಳಬೇಕಿದೆ. ಆದರೆ ಅದಕ್ಕೂ ಮೊದಲೇ ಬಿಗ್ ಬಾಸ್ ವಿನ್ನರ್ ಯಾರು? ಅನೌನ್ಸ್‌ಗೂ ಮೊದಲೇ ಬಹಿರಂಗಪಡಿಸಿದ ಮಾಜಿ ರನ್ನರ್ ಅಪ್ ಕಿರಿಕ್ ಕೀರ್ತಿ.
ಬಿಗ್ ಬಾಸ್ 12ನೇ ಆವೃತ್ತಿ ಕುತೂಹಲ ತೀವ್ರಗೊಳ್ಳುತ್ತಿದೆ. ಬಿಗ್ ಬಾಸ್ ವಿನ್ನರ್ ಯಾರು? ಎಲ್ಲೆಡೆ ಇದೇ ಪ್ರಶ್ನೆ ಹರಿದಾಡುತ್ತಿದೆ. ಫಿನಾಲೆ ವೇದಿಕೆಯಲ್ಲಿ ಸ್ಪರ್ಧಿಗಳಾದ ಗಿಲ್ಲಿ ನಟ, ಕಾವ್ಯ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ರಘು, ಧನುಷ್ ನಡುವೆ ಪೈಪೋಟಿ ತೀವ್ರಗೊಂಡಿದೆ. ಸೋಶಿಯಲ್ ಮೀಡಿಯಾಗಳಲ್ಲೂ ವಿನ್ನರ್ ಭವಿಷ್ಯಗಳು, ಹಲವರು ಇದೇ ಸ್ಪರ್ಧಿ ಗೆಲುವು ಕಂಡಿದ್ದಾರೆ ಎಂದು ಪೋಸ್ಟ್‌ಗಳು ಹರಿದಾಡುತ್ತಿದೆ. ಇದರ ನಡುವೆ ಬಿಗ್ ಬಾಸ್ ಮಾಜಿ ರನ್ನರ್ ಅಪ್ ಕಿರಿಕ್ ಕೀರ್ತಿ ಅಧಿಕೃತ ಘೋಷಣೆಗೂ ಮೊದಲೇ ವಿನ್ನರ್ ಹೆಸರು ಅನೌನ್ಸ್ ಮಾಡಿದ್ದಾರೆ.
26
ಕಿರಿಕ್ ಕೀರ್ತಿ ಹೇಳಿದ ವಿನ್ನರ್ ಯಾರು?
ಬಿಗ್ ಬಾಸ್ 4ನೇ ಆವೃತ್ತಿಯಲ್ಲಿ ರನ್ನರ್ ಅಪ್ ಪ್ರಶಸ್ತಿ ಗೆದ್ದುಕೊಂಡ ಕಿರಿಕ್ ಕೀರ್ತಿ ಇದೀಗ ಬಿಗ್ ಬಾಸ್ 12ರ ವಿನ್ನರ್ ಹೆಸರು ಘೋಷಿಸಿದ್ದಾರೆ. ಅದು ಬೇರೆ ಯಾರು ಅಲ್ಲ, ಬಹುತೇಕರ ನೆಚ್ಚಿನ ಗಿಲ್ಲಿ ನಟ. ಗಿಲ್ಲಿ ನಟ ಬಿಗ್ ಬಾಸ್ ವಿನ್ನರ್ ಎಂದು ಫೋಟೋ ಪೋಸ್ಟರ್ ಹಾಕಿದ್ದಾರೆ. ಜೊತೆಗೆ ಲೋಡಿಂಗ್, ಬಿಗ್ ಬಾಸ್ 12 ವಿನ್ನರ್ ಎಂದು ಹ್ಯಾಶ್‌ಟ್ಯಾಗ್ ಮಾಡಿದ್ದಾರೆ.
36
ಅಧಿಕೃತ ಘೋಷಣೆಯೊಂದೇ ಬಾಕಿ
ಬಿಗ್ ಬಾಸ್ 12ನೇ ಆವೃತ್ತಿಯ ವಿನ್ನರ್ ಗಿಲ್ಲಿ ಎಂದು ಎಲ್ಲೆಡೆ ಹರಿದಾಡುತ್ತಿದೆ. ಅಧಿಕೃತ ಘೋಷಣೆಯೊಂದೆ ಬಾಕಿ ಇದೆ ಎಂಬ ಮಾತುಗಳು ಕೇಳಿಬರುತ್ತಿದೆ. ಕಿರಿಕ್ ಕೀರ್ತಿ ಸೇರಿದಂತೆ ಬಿಗ್ ಬಾಸ್ ಕಾರ್ಯಕ್ರಮದ ಜೊತೆ ಗುರುತಿಸಿಕೊಂಡಿದ್ದ ಹಲವರು ಗಿಲ್ಲಿ ಪರ ಬ್ಯಾಟ್ ಬೀಸಿದ್ದಾರೆ.
6 ದಿನ ಹಿಂದೆ ಗಿಲ್ಲಿಗಾಗಿ ವೋಟ್‌ಗೆ ಮನವಿ ಮಾಡಿದ್ದ ಕೀರ್ತಿ
6 ದಿನಗಳ ಹಿಂದೆ ಬಿಗ್ ಬಾಸ್ 12ರಲ್ಲಿ ಗಿಲ್ಲಿ ಗೆಲ್ಲಬೇಕು ಎಂದು ಕಿರಿಕ್ ಕೀರ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೇ ವೇಳೆ ಗಿಲ್ಲಿಗಾಗಿ ವೋಟ್ ಮಾಡುವಂತೆ ಮನವಿ ಮಾಡಿದ್ದರು. ಯಾವತ್ತೂ ಬಿಗ್‌ಬಾಸ್ ಮನೆಯಲ್ಲಿ ಇಂತವರೇ ಗೆಲ್ಲಬೇಕು ಅಂತ ಹೇಳಿದವನಲ್ಲ... ಆದ್ರೆ ಈ ಹುಡುಗ ಮಾಡಿದ ಮೋಡಿಗೆ ಫಿದಾ ಆಗದವರು ಯಾರು..? ಬಿಗ್‌ಬಾಸ್ ಮನೆಯವರಿಗೆ ಗಿಲ್ಲಿ ಸಖತ್ ಸಿಲ್ಲಿ ಅನಿಸಿದ್ರೂ ಕೂಡ, ಹೊರಗೆ ಕೂತು ಅದೇ ಬಿಗ್ ಬಾಸ್ ನೋಡೋರಿಗೆ ಗಿಲ್ಲಿ ಕೊಟ್ಟ ಮನರಂಜನೆ ಅಷ್ಟಿಷ್ಟಲ್ಲ. ಗಿಲ್ಲಿ ಗೆಲುವಿನ ಹೆಬ್ಬಾಗಿಲಲ್ಲಿ ಆಲ್ರೆಡಿ ನಿಂತಿದ್ದಾನೆ.ಗೆದ್ದು ಬಾ ಗಿಲ್ಲಿ.ವೋಟ್ ಮಾಡೋದು ಮರೀಬೇಡಿ. ನಮ್ ಹುಡುಗ ಗೆಲ್ಲಬೇಕು ಎಂದು ಕಿರಿಕ್ ಕೀರ್ತಿ ಪೋಸ್ಟ್ ಮಾಡಿದ್ದರು.
56
ಹಳೇ ಆವೃತ್ತಿ ರೀತಿ ಅಚ್ಚರಿ ನೀಡುತ್ತಾ?
ಬಿಗ್ ಬಾಸ್ ಕನ್ನಡದ ಕೆಲ ಆವೃತ್ತಿಗಳಲ್ಲಿ ವಿನ್ನರ್ ಇವರೇ ಎಂದು ಬಹುತೇಕ ವೀಕ್ಷಕರು ನಿರ್ಧರಿಸಿದ್ದರು. ಆದರೆ ಫಿನಾಲೆ ವೇದಿಕೆಯಲ್ಲಿ ಅಚ್ಚರಿ ಫಲಿತಾಂಶ ಹೊರಬಿದ್ದಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಇದೇ ಚರ್ಚೆಗಳು ಶುರುವಾಗಿದೆ. ವೀಕ್ಷಕರ ವಿನ್ನರ್, ಬಿಗ್ ಬಾಸ್ ಘೋಷಿಸುವ ವಿನ್ನರ್ ವ್ಯತ್ಯಾಸವಾಗದಿರಲಿ ಎಂದು ಮನವಿ ಮಾಡುತ್ತಿದ್ದಾರೆ.
66
ಟ್ವೀಟ್ ಮೂಲಕ ಕಿಚ್ಚ ಸುದೀಪ್ ಧನ್ಯವಾದ
ಬಿಗ್ ಬಾಸ್ 12ನೇ ಆವೃತ್ತಿ ಫಿನಾಲೆಗೂ ಮೊದಲು ನಿರೂಪಕ ಕಿಚ್ಚ ಸುದೀಪ್ ಟ್ವೀಟ್ ಮೂಲಕ ಅದ್ಭುತ ಬಿಗ್ ಬಾಸ್ ಆವೃತ್ತಿ ಯಶಸ್ವಿಯಾಗಿರುವುದಕ್ಕೆ ಧನ್ಯವಾದ ಹೇಳಿದ್ದಾರೆ. ಬಿಗ್ ಬಾಸ್‌ನ್ನು ತಪ್ಪದೇ ವೀಕ್ಷಿಸಿ ಗೆಲ್ಲಿಸಿದ ವೀಕ್ಷಕರಿಗೆ, ಅತ್ಯುತ್ತಮ ಮನರಂಜನೆ ನೀಡಿದ ಸ್ಪರ್ಧಿಗಳು, ತಾಂತ್ರಿಕ ಸಿಬ್ಬಂದಿಗಳು, ಮಾರ್ಗದರ್ಶನ ನೀಡಿದ ಹಲವರು, ಬೆಂಬಲಕ್ಕೆ ನಿಂತವರಿಗೂ ಕಿಚ್ಚ ಸುದೀಪ್ ಧನ್ಯವಾದ ಹೇಳಿದ್ದಾರೆ.
ಟ್ವೀಟ್ ಮೂಲಕ ಕಿಚ್ಚ ಸುದೀಪ್ ಧನ್ಯವಾದ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.