ಬಿಗ್ ಬಾಸ್ 12 ಫಿನಾಲೆಗೂ ಮೊದಲು ಟ್ವೀಟ್ ಮೂಲಕ ಮಹತ್ವದ ಅಪ್‌ಡೇಟ್ ಕೊಟ್ಟ ಸುದೀಪ್

Published : Jan 18, 2026, 03:08 PM IST

ಬಿಗ್ ಬಾಸ್ 12ರ ವಿನ್ನರ್ ಯಾರು? ಈ ಕುತೂಹಲ ತೀವ್ರಗೊಳ್ಳುತ್ತಿದೆ. ಇದೇ ವೇಳೆ ವಿನ್ನರ್ ಕುರಿತು ಹಲವು ಸಂದೇಶ, ಪೋಸ್ಟರ್‌ಗಳು ಹರಿದಾಡುತ್ತಿದೆ. ಇದರ ನಡುವೆ ಬಿಗ್ ಬಾಸ್ 12 ಫಿನಾಲೆಗೂ ಮೊದಲು ಟ್ವೀಟ್ ಮೂಲಕ ಮಹತ್ವದ ಅಪ್‌ಡೇಟ್ ಕೊಟ್ಟ ಸುದೀಪ್. 

PREV
16
ಬಿಗ್ ಬಾಸ್ ಫಿನಾಲೆ ಹೊಸ್ತಿಲಲ್ಲಿ ಸುದೀಪ್ ಟ್ವೀಟ್

ಬಿಗ್ ಬಾಸ್12ರ ಫಿನಾಲೆ ಹೊಸ್ತಿಲಲ್ಲಿ ಎಲ್ಲೆಡೆ ವಿನ್ನರ್ ಚರ್ಚೆ ನಡೆಯುತ್ತಿದೆ. ಮತ್ತೊಂದೆಡೆ ತಮ್ಮ ನೆಚ್ಚಿನ ಸ್ಪರ್ಧಿಗಳು ಗೆಲ್ಲಬೇಕು ಎಂದು ಜೈಕಾರಗಳು ಮೊಳಗುತ್ತಿದೆ. ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲಿ ಗಿಲ್ಲಿ ನಟ, ಕಾವ್ಯ, ಅಶ್ವಿನಿ ಗೌಡ, ರಘು, ಧನುಷ್ ನಡುವೆ ಸ್ಪರ್ಧೆ ತೀವ್ರಗೊಂಡಿದೆ. ವಿನ್ನರ್ ಯಾರು ಅನ್ನೋ ಕುತೂಹಲ ನಡುವೆ ಬಿಗ್ ಬಾಸ್ ಹೋಸ್ಟ್ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

26
ಕಿಚ್ಚ ಸುದೀಪ್ ಟ್ವೀಟ್ ಮೂಲಕ ಹೇಳಿದ್ದೇನು?

ಇಂದಿನ ಸೂರ್ಯಾಸ್ತದೊಂದಿಗೆ ಬಿಗ್ ಬಾಸ್ 12 ಪಯಣ ಅಂತ್ಯಗೊಳ್ಳಲಿದೆ. ಈ ಬಾರಿಯ ಬಿಗ್ ಬಾಸ್ ಅದ್ಭುತವಾಗಿ ಸಾಗಿ ಅತ್ಯುತ್ತಮ ಹಾಗೂ ಗರಿಷ್ಠ ಮನರಂಜನೆ ನೀಡಿದೆ. ಬಿಗ್ ಬಾಸ್ ಬೆಳವಣಿಗೆ ಜೊತೆಗೆ ಅದ್ಭುತ ಹಾಗೂ ಅಸಾಧಾರಣ ಸೀಸನ್ ಆಗಿ ಮಾರ್ಪಟ್ಟಿದೆ. ಬಿಗ್ ಬಾಸ್ ಪ್ರತಿ ವರ್ಷ ಹೇಗೆ ಬೆಳೆಯುತ್ತಾ ಸಾಗಿದೆ ಎಂಬುದಕ್ಕೆ ಇದು ಸಾಕ್ಷಿ. ನಿರಂತರ ಬೆಂಬಲ ನೀಡಿದ ಪ್ರತಿಯೊಬ್ಬ ನಿಷ್ಠಾವಂತ ವೀಕ್ಷಕರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. ಎಲ್ಲಾ ಸ್ಪರ್ಧಿಗಳಿಗೆ ಮತ್ತು ಈ ಸೀಸನ್‌ನ ವಿಜೇತರಿಗೆ ಅಭಿನಂದನೆಗಳು. ಈ ಬೃಹತ್ ಯಶಸ್ಸಿನ ಹಿಂದಿರುವ ಇಡೀ ತಾಂತ್ರಿಕ ತಂಡಕ್ಕೆ ನನ್ನ ದೊಡ್ಡ ಅಭಿನಂದನೆಗಳು; ನೀವಿಲ್ಲದೆ ಬಿಗ್ ಬಾಸ್ ಇಲ್ಲ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

36
ಇದೇ ಟ್ವೀಟ್‌ನಲ್ಲಿ ಮತ್ತೊಂದು ಅಪ್‌ಡೇಟ್

ಬಿಗ್ ಬಾಸ್ 12ನೇ ಆವೃತ್ತಿ ಇಂದಿಗೆ ತೆರೆಬೀಳಲಿದೆ. ಬಿಗ್ ಬಾಸ್ 13ನೇ ಆವೃತ್ತಿ ಆರಂಭವಾಗುವವರೆಗೆ, ವಿಶ್ರಾಂತಿಗಾಗಿ ಸೂರ್ಯಾಸ್ತದ ವೇಳೆಗೆ ನಾವು ಬಿಗ್ ಬಾಸ್ ಮನೆಯ ಬಾಗಿಲನ್ನು ಮುಚ್ಚುತ್ತಿದ್ದೇವೆ. ಪ್ರೀತಿ ಹಾಗೂ ಶುಭಹಾರೈಕೆ ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಬಿಗ್ ಬಾಸ್ 13ನೇ ಆವೃತ್ತಿಯಲ್ಲೂ ತಾವೇ ಹೋಸ್ಟ್ ಆಗಿ ಮುಂದುವರಿಯಲಿದ್ದಾರೆ ಅನ್ನೋ ಸುಳಿವನ್ನು ನೀಡಿದ್ದಾರೆ.

46
ಬಿಗ್ ಬಾಸ್ 12 ಫಿನಾಲೆ

100 ದಿನಗಳ ಬಿಗ್ ಬಾಸ್ ಪಯಣ ಇಂದಿನ ಅದ್ಧೂರಿ ಫಿನಾಲೆಯೊಂದಿಗೆ ಅಂತ್ಯಗೊಳ್ಳುತ್ತಿದೆ. ಗಿಲ್ಲಿ ಗೆಲ್ಲಬೇಕು ಎಂದು ಭಾರಿ ಪ್ರಮಾಣದಲ್ಲಿ ವೋಟಿಂಗ್ ನಡೆಯುತ್ತಿದೆ. ಇತ್ತ ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ರಘು ಹಾಗೂ ಧನುಷ್‌ಗೂ ಅಷ್ಟೇ ಪ್ರಮಾಣದ ವೋಟಿಂಗ್ ನಡೆಯುತ್ತಿದೆ. ಪ್ರಮುಖವಾಗಿ ಗಿಲ್ಲಿ, ರಕ್ಷಿತಾ ಶೆಟ್ಟಿ ಹಾಗೂ ಅಶ್ವಿನಿ ಗೌಡ ನಡುವೆ ತೀವ್ರ ಪೈಪೋಟಿಗಳು ಆರಂಭಗೊಂಡಿದೆ.

56
ಬಿಗ್ ಬಾಸ್ ಕ್ರೇಜ್

ಈ ಬಾರಿಯ ಬಿಗ್ ಬಾಸ್ ಕ್ರೇಜ್ ರಾಜ್ಯದಲ್ಲಿ ಮಾತ್ರವಲ್ಲ, ಇತರ ರಾಜ್ಯಗಳಲ್ಲೂ ಭಾರಿ ಸದ್ದು ಮಾಡುತ್ತಿದೆ. ಹಲೆವೆಡೆ ಸ್ಪರ್ಧಿಗಳ ಪರವಾಗಿ ಅನ್ನದಾನ, ದೇಗುಲಗಳಲ್ಲಿ ಪೂಜೆ ನಡೆಯುತ್ತಿದೆ. ಸ್ಪರ್ಧಿಗಳ ಊರುಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಎಲ್ಲೆಡೆ ಬಿಗ್ ಬಾಸ್ 12ರ ಚರ್ಚೆಗಳು ನಡೆಯುತ್ತಿದೆ.

66
ವಿವಾದಗಳಿಂದ ಕೂಡಿದ್ದ ಬಿಗ್ ಬಾಸ್ 12

ಈ ಬಾರಿಯ ಬಿಗ್ ಬಾಸ್ ಭಾರಿ ವಿವಾದಗಳಿಗೂ ಕಾರಣವಾಗಿತ್ತು. ಸರ್ಕಾರದಿಂದ ಅನುಮತಿ ವಿಚಾರದಲ್ಲಿ ಶುರುವಾದ ಜಟಾಪಟಿಯಲ್ಲಿ ಎರಡು ದಿನ ಬಿಗ್ ಬಾಸ್ ಮನೆಗೆ ಬೀಗ ಜಡಿಯಲಾಗಿತ್ತು. ಹಂತ ಹಂತದಲ್ಲೂ ಬಿಗ್ ಬಾಸ್ ವಿವಾದ ಹಾಗೂ ಟೀಕೆಗಳಿಗೆ ಗುರಿಯಾಗಿತ್ತು. ಹಲವು ಅಡತೆಡಗಳ ಬಳಿಕ ಇದೀಗ ಫಿನಾಲೆ ಹಂತಕ್ಕೆ ಬಂದಿದೆ.

ವಿವಾದಗಳಿಂದ ಕೂಡಿದ್ದ ಬಿಗ್ ಬಾಸ್ 12

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories