ಬಿಗ್ ಬಾಸ್ ಫಿನಾಲೆ ಹತ್ತಿರವಾಗುತ್ತಿದ್ದಂತೆ, ಸ್ಪರ್ಧಿಗಳಿಗೆ ಹೊಸ ಕ್ಯಾಪ್ಟೆನ್ಸಿ ಟಾಸ್ಕ್ ನೀಡಲಾಗಿದೆ. ರಿಂಗ್ ಆಟದಲ್ಲಿ ರಘು ಮತ್ತು ಅಶ್ವಿನಿ ಗೌಡ ಗೆದ್ದರೂ, ಒಂದು ಜೋಡಿ ಕ್ಯಾಪ್ಟೆನ್ಸಿ ರೇಸ್‌ನಿಂದ ಹೊರಬೀಳಲಿದೆ ಎಂದು ಬಿಗ್ ಬಾಸ್ ಘೋಷಿಸಿದ್ದು, ಕುತೂಹಲ ಹೆಚ್ಚಿಸಿದೆ.
Bigg Bossನಲ್ಲಿ ಇನ್ನೇನು ಫಿನಾಲೆ ಹತ್ತಿರದಲ್ಲಿದೆ. ಇದಾಗಲೇ ಕೆಲವು ಸ್ಪರ್ಧಿಗಳು ಮನೆಯಿಂದ ಹೊರಕ್ಕೆ ಬಂದಿದ್ದು, ಗೆಲ್ಲುವವರು, ಸೋಲುವವರು ಯಾರು ಎನ್ನುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಶುರುವಾಗಿದೆ.
26
ಗೆಲ್ಲುವವರ ಲೆಕ್ಕಾಚಾರ ಶುರು
ಇದರ ನಡುವೆಯೇ, ಫೈನಲಿಸ್ಟ್ ಎಂದುಕೊಂಡಿದ್ದ ಜಾನ್ವಿ ಕೂಡ ಹೊರಕ್ಕೆ ಬಂದಿದ್ದಾರೆ. ಸದ್ಯ ಟಾಪ್ ಲಿಸ್ಟ್ನಲ್ಲಿ ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಕಾವ್ಯಾ ಶೈವ ಸೇರಿಂದಂತೆ ಕೆಲವರು ಇದ್ದಾರೆ. ಯಾರು ಗೆಲ್ಲುವವರು ಎನ್ನುವ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ.
36
ಯಾವ ಜೋಡಿಗೆ ಗೇಟ್‌ಪಾಸ್?
ಇದರ ಬೆನ್ನಲ್ಲೇ ಈಗ ಇನ್ನೊಂದು ಟಾಸ್ಕ್ ಸ್ಪರ್ಧಿಗಳಿಗೆ ನೀಡಲಾಗಿದೆ. ಅದರಲ್ಲಿ ಜೋಡಿ ಮಾಡಲಾಗಿದೆ. ಇದು ಕ್ಯಾಪ್ಟೆನ್ಸಿ ಟಾಸ್ಕ್ ಆಗಿದೆ. ಕ್ಯಾಪ್ಟೆನ್ಸಿ ಟಾಸ್ಕ್‌ನಿಂದ ಯಾವ ಜೋಡಿಗೆ ಗೇಟ್‌ಪಾಸ್ ಎನ್ನುವ ಶೀರ್ಷಿಕೆಯಲ್ಲಿ ಈ ಪ್ರೊಮೊ ಹಂಚಿಕೊಳ್ಳಲಾಗಿದೆ.
ಇದರಲ್ಲಿ, ರಿಂಗ್ಗಳನ್ನು ಮೇಲಿನಿಂದ ಇಳಿಬಿಡಲಾಗಿದೆ. ಈ ರಿಂಗ್ಗಳನ್ನು ಭುಜ ಅಥವಾ ಕುತ್ತಿಗೆಯಲ್ಲಿ ಕ್ಯಾಚ್ ಮಾಡುವ ಟಾಸ್ಕ್ ಇದೆ. ಯಾರು ಹೆಚ್ಚು ಕ್ಯಾಚ್ ಮಾಡುತ್ತಾರೋ ಅವರು ವಿನ್ನರ್ ಎಂದು ಅನೌನ್ಸ್ ಮಾಡಲಾಗಿದೆ.
56
ರಘು ಮತ್ತು ಅಶ್ವಿನಿ ಗೌಡ
ಆಟದ ಬಳಿಕ ರಘು ಮತ್ತು ಅಶ್ವಿನಿ ಗೌಡ ಅವರು ಈ ಟಾಸ್ಕ್ ಅನ್ನು ಗೆದ್ದಿರುವುದಾಗಿ ಘೋಷಿಸಲಾಗಿದೆ. ಇದೀಗ ಇದರಲ್ಲಿ ಒಂದು ಜೋಡಿಯನ್ನು ಹೊರಕ್ಕೆ ಇಡಲಾಗುವುದು ಎಂದು ಬಿಗ್ಬಾಸ್ ಹೇಳಿದೆ.
66
ಹೊರಕ್ಕೆ ಹೋಗುವವರು ಯಾರು?
ಈ ಜೋಡಿಗಳಲ್ಲಿ ಒಂದು ಜೋಡಿ ಕ್ಯಾಪ್ಟೆನ್ಸಿ ಟಾಸ್ಕ್‌ನಿಂದ ಹೊರಕ್ಕೆ ಹೋಗಲಿದೆ ಎನ್ನುವ ದನಿ ಬಂದಿದ್ದು, ಹೊರಕ್ಕೆ ಹೋಗುವವರು ಯಾರು ಎನ್ನುವ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ.