Bigg Boss Kannada: ವಂಶದ ಕುಡಿ ರಕ್ಷಿತಾ ಡೆಡಿಕೇಷನ್ ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಕ್ರು ಸ್ಪರ್ಧಿಗಳು

Published : Dec 03, 2025, 03:18 PM IST

BBK 12 : ಈ ಬಾರಿ ಬಿಗ್ ಬಾಸ್ ಮನೆಯ ಅಟ್ರ್ಯಾಕ್ಷನ್ ರಕ್ಷಿತಾ ಹಾಗೂ ಗಿಲ್ಲಿ. ರಕ್ಷಿತಾ ಮುಗ್ದತೆ ಹಾಗೂ ಗಿಲ್ಲಿ ತಮಾಷೆ ಎಲ್ಲರನ್ನು ಸೆಳೆದಿದೆ. ಈಗ ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಕಾಣ್ತಿಲ್ಲ ಅಂತ ಗಿಲ್ಲಿ ಹುಡುಕಾಟ ನಡೆಸಿದ್ದಾರೆ. ಕೊನೆಗೆ ರಕ್ಷಿತಾ ಸಿಕ್ಕಿದ್ದು ಎಲ್ಲಿ, ಹೇಳಿದ್ದೇನು?

PREV
16
ಮನೆಯಲ್ಲಿಲ್ಲ ರಕ್ಷಿತಾ!

ವಂಶದ ಕುಡಿ ರಕ್ಷಿತಾ ಹಾಗೂ ಗಿಲ್ಲಿ ನಟನ ಮಧ್ಯೆ ವಿಶೇಷ ಬಾಂಡಿಂಗ್ ಇದೆ. ನಾಮಿನೇಷನ್ ನಲ್ಲಿ ಮಾಳು ಹಿಂದಿದ್ದ ಚೂರಿ ತೆಗೆದು ಗಿಲ್ಲಿಗೆ ಹಾಕಿದ್ರೂ, ಗಿಲ್ಲಿ ತನ್ನ ಚೂರಿ ತೆಗೆದು ರಕ್ಷಿತಾಗೆ ಹಾಕಿದ್ರೂ ನಾಮಿನೇಷನ್ ಮುಗಿದ್ಮೇಲೆ ಇಬ್ಬರೂ ಒಂದೇ. ಅಕ್ಕಪಕ್ಕ ಕುಳಿತು ಒಂದಿಷ್ಟು ವಿಷ್ಯಗಳನ್ನು ಮಾತನಾಡಿಕೊಂಡ ರಕ್ಷಿತಾ ಮೇಲೆ ಗಿಲ್ಲಿಗೆ ವಿಶೇಷ ಅಕ್ಕರೆ. ರಕ್ಷಿತಾ ಮನೆಯಲ್ಲಿ ಕಾಣ್ತಿಲ್ಲ ಅಂತ ಗಿಲ್ಲಿ ಹುಡುಕಾಟ ಶುರು ಮಾಡಿದ್ರು.

26
ರಕ್ಷಿತಾ ಹುಡುಕಿದ ಗಿಲ್ಲಿ

ರಕ್ಷಿತಾ ಮನೆಯಲ್ಲಿ ಎಲ್ಲೂ ಕಾಣ್ತಿರಲಿಲ್ಲ. ಗಿಲ್ಲಿ ರಕ್ಷಿತಾ ಹುಡುಕುವ ಪ್ರಯತ್ನ ಮಾಡಿದ್ದಾರೆ. ಮನೆಯ ಕ್ಯಾಪ್ಟನ್ ಧನುಷ್ ಗೆ, ರಕ್ಷಿತಾ ಎಲ್ಲಿ, ಮನೆಯಲ್ಲಿ ಎಲ್ಲೂ ಕಾಣ್ತಿಲ್ಲ ಅಂತ ಗಿಲ್ಲಿ ಕೇಳಿದ್ದಾರೆ. ಅಷ್ಟೇ ಅಲ್ಲ, ಕನ್ಫೆಷನ್ ರೂಮಿನಲ್ಲಿದ್ದಾರಾ ಅಂತ ಅಲ್ಲಿ ಕೂಡ ಗಿಲ್ಲಿ ನೋಡ್ತಾರೆ. ಅದ್ರ ಬಾಗಿಲು ಹಾಕಿದ್ರಿಂದ ರಕ್ಷಿತಾ ಮತ್ತೆಲ್ಲಿದ್ದಾರೆ ಅಂತ ಎಲ್ಲರೂ ಹುಡುಕಾಟ ಶುರು ಮಾಡ್ತಾರೆ.

36
ರಕ್ಷಿತಾ ಹೋಗಿದ್ದು ಎಲ್ಲಿಗೆ?

ಕನ್ಫೆಷನ್ ರೂಮಿನಲ್ಲಿ ರೆಡ್ ಲೈಟ್ ಇದೆ. ಸೋ ಅಲ್ಲಿಲ್ಲ ಅಂತ ಗಿಲ್ಲಿ ಹೇಳ್ತಿರುವಾಗ್ಲೇ ಮನೆಯವರೆಲ್ಲ ರಕ್ಷಿತಾರನ್ನು ಹುಡುಕಿದ್ದಾರೆ. ಧನುಷ್, ಚೇಂಜಿಂಗ್ ರೂಮ್ ಬಳಿ ಬಂದು ಚೆಕ್ ಮಾಡ್ತಾರೆ. ಬಾಗಲು ಬಡಿತಿದ್ದಂತೆ ರಕ್ಷಿತಾ ರಿಯಾಕ್ಟ್ ಮಾಡ್ತಾರೆ.ಧನುಷ್, ಅಲ್ಲೇನು ಮಾಡ್ತಿದ್ದೀರಾ ಅಂತ ರಕ್ಷಿತಾ ಅವರನ್ನು ಕೇಳಿದಾಗ ಡ್ರೆಸ್ ಚೇಂಜ್ ಮಾಡ್ತಿದ್ದೇನೆ ಅಂತ ರಕ್ಷಿತಾ ಹೇಳ್ತಾರೆ. ಈಗ್ಯಾಕೆ ಅನ್ನೋ ಧನುಷ್ ಪ್ರಶ್ನೆಗೆ, ಟಾಸ್ಕ್ ಕೊಡ್ತಾರಲ್ವ ಅದಕ್ಕೆ ಅಂತ ರಕ್ಷಿತಾ ಹೇಳ್ತಾರೆ.

46
ರಕ್ಷಿತಾ ಮಾತಿಗೆ ಬಿದ್ದು ಬಿದ್ದು ನಕ್ಕ ಸ್ಪರ್ಧಿಗಳು

ಬಿಗ್ ಬಾಸ್ ಇನ್ನೂ ಟಾಸ್ಕೇ ನೀಡಿಲ್ಲ. ಯಾವ ಟಾಸ್ಕ್ ಬರುತ್ತೆ ಅಂತ ಯಾರಿಗೂ ಗೊತ್ತಿಲ್ಲ. ಆಗ್ಲೇ ರಕ್ಷಿತಾ ಡ್ರೆಸ್ ಬದಲಿಸೋಕೆ ಹೋಗಿದ್ದಾರೆ. ಇದನ್ನು ಕೇಳಿದ ಗಿಲ್ಲಿ, ರಕ್ಷಿತಾ ಡೆಡಿಕೇಷನ್ ನೋಡಿ. ಟಾಸ್ಕ್ ಯಾವ್ದು ಅಂತ ಗೊತ್ತಿಲ್ದೆ ಇವರು ಹೇಗೆ ಡ್ರೆಸ್ ಚೇಂಜ್ ಮಾಡ್ತಾರೆ ಅಂತ ಹಾಸ್ಯ ಮಾಡಿದ್ದಾರೆ. ಮನೆಯವರೆಲ್ಲ ರಕ್ಷಿತಾ ವರ್ತನೆ ನೋಡಿ ನಕ್ಕಿದ್ದಾರೆ.

56
ನಿಜವಾಗ್ಲೂ ಡ್ರೆಸ್ ಬದಲಿಸಿದ್ರಾ ರಕ್ಷಿತಾ?

ಡ್ರೆಸ್ಸಿಂಗ್ ರೂಮಿಗೆ ಹೋಗಿದ್ದ ರಕ್ಷಿತಾ ಹೊರಗೆ ಬರ್ತಿದ್ದಂತೆ ಎಲ್ಲರೂ ಅವರನ್ನು ನೋಡಿದ್ದಾರೆ. ನಿಜವಾಗ್ಲೂ ಡ್ರೆಸ್ ಬದಲಾಗಿದೆಯಾ ಎಂಬ ಅನುಮಾನ ಸ್ಪರ್ಧಿಗಳಿಗೆ ಬಂದಿದೆ. 

66
ಡ್ರೆಸ್ಸಿಂಗ್ ರೂಮಿನಲ್ಲಿ ಮಲಗಿದ್ರು ರಕ್ಷಿತಾ !?

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಆಗ್ತಿದ್ದಂತೆ ಜನರ ಕಮೆಂಟ್ ಶುರುವಾಗಿದೆ. ಅನೇಕರು ರಕ್ಷಿತಾ ಡ್ರೆಸ್ಸಿಂಗ್ ರೂಮಿಗೆ ಹೋಗಿದ್ದು ಬಟ್ಟೆ ಬದಲಿಸೋಕಲ್ಲ, ನಿದ್ರೆ ಮಾಡೋಕೆ ಎಂದಿದ್ದಾರೆ. ಮತ್ತೆ ಕೆಲವರು ಪಾಪಾ ಹೊಟ್ಟೆ ನೋವಿತ್ತು ಅನ್ನಿಸುತ್ತೆ, ಅಲ್ಲಿಗೆ ಹೋಗಿದ್ರು ಅಂತ ಕಮೆಂಟ್ ಮಾಡಿದ್ದಾರೆ. ರಕ್ಷಿತಾ ಹಾಗೂ ಗಿಲ್ಲಿ ಫ್ಯಾನ್ಸ್ ಮಧ್ಯೆ ಇದೇ ಕಾರಣಕ್ಕೆ ಮಾತಿನ ಯುದ್ಧ ಕೂಡ ನಡೆದಿದೆ. ರಕ್ಷಿತಾ ಮಲಗಿಲ್ಲ ಅಂತ ಕೆಲ ಫ್ಯಾನ್ಸ್ ಹೇಳಿದ್ರೆ ಮತ್ತೆ ಕೆಲವರು ಗಿಲ್ಲಿ ತಮಾಷೆ ಅತಿಯಾಯ್ತು ಅಂತ ಕಮೆಂಟ್ ಮಾಡಿದ್ದಾರೆ.

Read more Photos on
click me!

Recommended Stories