Big Boss 15- ಕ್ಯಾಮೆರಾ ಮುಂದೆಯೇ ಪತಿ ರಿತೇಶ್ ಜೊತೆ ರಾಖಿ ಸಾವಂತ್ ರೊಮ್ಯಾನ್ಸ್‌!

First Published | Dec 17, 2021, 9:45 PM IST

ಇತ್ತೀಚಿನ ದಿನಗಳಲ್ಲಿ ಸಲ್ಮಾನ್ ಖಾನ್ ಅವರ ಬಿಗ್ ಬಾಸ್ 15 (Big Boss 15) ಶೋನಲ್ಲಿ ಬಹಳಷ್ಟು ಅಪ್ಡೇಟ್‌ಗಳನ್ನು ಕಾಣಬಹುದು. ಕಾರ್ಯಕ್ರಮದ ಟಾಸ್ಕ್‌ನಲ್ಲಿ ಸ್ಪರ್ಧಿಗಳು ಜಗಳ ಮತ್ತು ಪರಸ್ಪರ ನಿಂದನೆಗಳು ಸಾಮಾನ್ಯ. ಅಂದಹಾಗೆ, ಶೋ ಕೂಡ ನಿಧಾನವಾಗಿ ಅದರ ಅಂತಿಮ ಹಂತದ ಕಡೆ ಸಾಗುತ್ತಿದೆ. ಈಗ ಎಲ್ಲಾ ಸ್ಪರ್ಧಿಗಳು ಫಿನಾಲೆಗೆ ತಲುಪಲ ಪೈಪೋಟಿ ನಡೆಸುತ್ತಿದ್ದಾರೆ. ಅಂದಹಾಗೆ  ರಾಖಿ ಸಾವಂತ್ (Rakhi Sawant) ಫೈನಲ್ ತಲುಪಿದ ಮೊದಲ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶೋನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿರುವ ರಾಖಿ ಯಾವಾಗಲೂ ಚರ್ಚೆಯಲ್ಲಿರುತ್ತಾರೆ. ಇಷ್ಟೇ ಅಲ್ಲ, ತನ್ನನ್ನು ತಾನು ಲೈಮ್‌ಲೈಟ್‌ನಲ್ಲಿ ತರಲು ಏನು ಬೇಕಾದರೂ ಮಾಡುತ್ತಾರೆ. ಕಳೆದ ಸಂಚಿಕೆಯಲ್ಲಿ ಅವರು ಕ್ಯಾಮರಾ ಮುಂದೆ ಮಿತಿ ಮೀರಿದ್ದರು. ರಾಖಿ ಸಾವಂತ್ ಏನು ಮಾಡಿದರು ಗೊತ್ತಾ? ವಿವರಕ್ಕಾಗಿ  ಕೆಳಗೆ ಓದಿ.
 

ಬಿಗ್‌ ಬಾಸ್‌ 15ರ ಸ್ಪರ್ಧಿ ರಾಖಿ ಸಾವಂತ್ ಶೋನಲ್ಲಿ ಏನಾದರೂ ಮಾಡುತ್ತಲೇ ಇರುತ್ತಾರೆ ಮತ್ತು ಅದರಿಂದಲೇ ಸಾಕಷ್ಟು ಚರ್ಚೆಯಲ್ಲಿರುತ್ತಾರೆ. ಕಳೆದ ಸಂಚಿಕೆಯಲ್ಲಿ  ರಾಖಿ ತನ್ನ ಪತಿ ರಿತೇಶ್‌ನ ಮಡಿಲಲ್ಲಿ ಕುಳಿತು ರೊಮ್ಯಾನ್ಸ್ ಮಾಡಿದ್ದಾರೆ. ಇದನ್ನೆಲ್ಲ ನೋಡಿ ಅವರ ಮುಂದೆ ಕುಳಿತಿದ್ದ ದೇವೋಲೀನಾ ಭಟ್ಟಾಚಾರ್ಜಿ ಸಂಪೂರ್ಣ ಶಾಕ್‌ ಆಗಿದ್ದರು. 

ಇಷ್ಟೇ ಅಲ್ಲ, ಒಂದು ಸಂಚಿಕೆಯಲ್ಲಿ ರಿತೇಶ್ ಎಲ್ಲರ ಮುಂದೆ ರಾಖಿ ಸಾವಂತ್‌ಗೆ ಮುತ್ತಿಟ್ಟಿದ್ದರು. ಪತಿಯ ಈ ಹಠಾತ್ ಕೃತ್ಯದಿಂದ ಆರಂಭದಲ್ಲಿ ಆಘಾತಕ್ಕೊಳಗಾದ ರಾಖಿ ನಂತರ ನಾಚಿಕೆಯಿಂದ ಕೆಂಪಾಗಿದ್ದರು.

Tap to resize

ಅದೇ ಸಮಯದಲ್ಲಿ, ಕಳೆದ ಸಂಚಿಕೆಯಲ್ಲಿ, ರಾಖಿ ಸಾವಂತ್ ಅವರ ಪತಿ ಅವರ ಮೇಲೆ ಕೋಪಗೊಂಡು ಎಲ್ಲರ ಮುಂದೆ ಅವರನ್ನು ಬೈಯಲು ಪ್ರಾರಂಭಿಸಿದರು. ರಾಖಿ ಇದನ್ನು ಶಮಿತಾ ಶೆಟ್ಟಿಗೆ  ಈ ರೀತಿಯ ವರ್ತನೆಯನ್ನು ಅವಳು ಸಹಿಸುವುದಿಲ್ಲ ಮತ್ತು ಒಳಗಿನಿಂದ ಹೃದಯಕ್ಕೆ ನೋವಾಗುತ್ತಿದೆ ಎಂದು ಹೇಳುತ್ತಾರೆ. 

ಕಳೆದ ರಾತ್ರಿಯ ಸಂಚಿಕೆಯಲ್ಲಿ ರಶ್ಮಿ ದೇಸಾಯಿ ಮತ್ತು ಉಮರ್ ರಿಯಾಜ್ ನಡುವಿನ ಆತ್ಮೀಯತೆ ಹೆಚ್ಚಾಗುತ್ತಿದೆ. ಇದೀಗ ಇವರಿಬ್ಬರ ಲವ್ ಸ್ಟೋರಿ ಬಗ್ಗೆ ಬಿಗ್‌ ಬಾಸ್‌ ಮನೆಯ ಇತರರು  ಕೂಡ ಮಾತನಾಡಲು ಶುರು ಮಾಡಿದ್ದಾರೆ. ಇದೇ ವೇಳೆ ರಶ್ಮಿ ಅವರು ಉಮರ್ ನನ್ನು ಇಷ್ಟಪಡಲು ಆರಂಭಿಸಿರುವುದಾಗಿ ಘೋಷಿಸಿದ್ದಾರೆ.

ಇತ್ತೀಚಿನ ಸಂಚಿಕೆಯಲ್ಲಿ, ರಶ್ಮಿ ದೇಸಾಯಿ ಕರಣ್ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್ ನಡುವೆ ಬಿರುಕು ಮೂಡಿಸಲು ಪ್ರಯತ್ನಿಸಿದರು. ಕರಣ್ ಜೊತೆ ಮಾತನಾಡಿದರೆ ತೇಜಸ್ವಿಗೆ ಸಮಸ್ಯೆ ಇದೆ ಎಂದು ಕೂಡ ರಶ್ಮಿ ಹೇಳಿದ್ದಾರೆ.

ಉಮರ್ ರಿಯಾಜ್ ಕಾರಣಕ್ಕೆ ಬಿಗ್‌ ಬಾಸ್‌  ಕುಟುಂಬದ ವರು ರಶ್ಮಿ ದೇಸಾಯಿ ಅವರನ್ನು ಟಾರ್ಗೆಟ್ ಮಾಡಲು ಆರಂಭಿಸಿದ್ದಾರೆ. ಇತ್ತೀಚೆಗೆ, ದೇವೋಲೀನಾ ರಶ್ಮಿಯನ್ನು ಆರೋಪಿಸಿದರು ಮತ್ತು ಸೀಸನ್ 13 ರಲ್ಲಿ ಸಿದ್ಧಾರ್ಥ್
ಶುಕ್ಲಾ ಅವರ ಹಿಂದೆ ರಶ್ಮಿ ದೇಸಾಯಿ ಇದ್ದರು  ಎಂದುದೇವೋಲೀನಾ  ಹೇಳಿದರು. 

ಬಿಗ್ ಬಾಸ್ 13 ರಲ್ಲೂ ರಶ್ಮಿ ದೇಸಾಯಿ ಅವರ ಲವ್ ಸ್ಟೋರಿ ಗದ್ದಲ ಸೃಷ್ಟಿಸಿತ್ತು. ರಶ್ಮಿ ಅವರ ಬಾಯ್ ಫ್ರೆಂಡ್ ಅರ್ಹಾನ್ ಖಾನ್ ಆಗಮನವು ಕಾರ್ಯಕ್ರಮದಲ್ಲಿ ತಲ್ಲಣ ಮೂಡಿಸಿತ್ತು. ಇಷ್ಟೇ ಅಲ್ಲ, ಕಾರ್ಯಕ್ರಮದ ನಿರೂಪಕ ಸಲ್ಮಾನ್ ಖಾನ್, ಅರ್ಹಾನ್ ಈಗಾಗಲೇ ಮದುವೆಯಾಗಿದ್ದಾರೆ ಎಂದು ರಶ್ಮಿಯ ಮುಂದೆ ಬಹಿರಂಗಪಡಿಸಿದ್ದರು, ನಂತರ ಇಬ್ಬರೂ ಬ್ರೇಕಪ್ ಆಗಿದ್ದರು.

ಕೆಲವು ದಿನಗಳ ಹಿಂದೆ ಈ ಶೋ ವಿಸ್ತರಿಸಲಾಗುವುದು ಮತ್ತು ಫೆಬ್ರವರಿವರೆಗೆ ಎಳೆಯಲಾಗುತ್ತದೆ ಎಂಬ ಸುದ್ದಿ ಇತ್ತು. ಆದರೆ ಈಗ ಬರುತ್ತಿರುವ ಇತ್ತೀಚಿನ ಮಾಹಿತಿಯ ಪ್ರಕಾರ ಸಲ್ಮಾನ್ ಖಾನ್ ಅವರ ಬಿಗ್ ಬಾಸ್ 15 ಶೋ ಜನವರಿಯಲ್ಲಿ ಮುಕ್ತಾಯವಾಗಲಿದೆ.

ಇತ್ತೀಚೆಗಷ್ಟೇ, ಕಾರ್ಯಕ್ರಮದ ಅಂತಿಮ ಭಾಗ ಯಾವಾಗ ನಡೆಯಲಿದೆ ಎಂದು ಖಬ್ರಿ ಟ್ವೀಟ್ ಮಾಡಿದ್ದಾರೆ. ಅವರ ಪ್ರಕಾರ, ಬಿಗ್ ಬಾಸ್ 15 ರ ಅಂತಿಮ ದಿನಾಂಕವನ್ನು ಜನವರಿ 22-23 ರಂದು ಇರಿಸಲಾಗಿದೆ. ತಯಾರಕರು ಈ ಗೇಮ್‌ ಶೋ  ವಿಸ್ತರಿಸದಿದ್ದರೆ, ಜನವರಿ ತಿಂಗಳಿನಲ್ಲಿಯೇ ಫಿನಾಲೆ ನಡೆಯಲಿದೆ.

Latest Videos

click me!