ಅಂಕಿತಾ ಲೋಖಂಡೆ ವಿಕ್ಕಿ ಜೈನ್ ಹೆಸರಿನಲ್ಲಿ ಮೆಹಂದಿ ಹಾಕಿಸಿಕೊಂಡ ಅವರು ಸಖತ್ ಆಗಿ ಡ್ಯಾನ್ಸ್‌ಗೆ ಸ್ಟೆಪ್ಸ್ ಹಾಕಿದ್ದಾರೆ. ಅವರು ವಿಕ್ಕಿ ಜೈನ್ ಅವರೊಂದಿಗೆ ಅನೇಕ ಹಾಡುಗಳಲ್ಲಿ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಈ ಸಮಯದ ಅವರ ಪೋಟೋ ಹಾಗೂ ವಿಡಿಯೋಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ.
ಮೆಹಂದಿ ಕಾರ್ಯಕ್ರಮದ ಫೋಟೋಗಳನ್ನು ಅಂಕಿತಾ ಲೋಖಂಡೆ ಅವರು Instagram ನ ಅಧಿಕೃತ ಖಾತೆಯಲ್ಲಿ ಸುಂದರವಾದ ಶೀರ್ಷಿಕೆಗಳೊಂದಿಗೆ ಹಂಚಿಕೊಂಡಿದ್ದಾರೆ. ಅಂಕಿತಾ ಖುಷಿ ನೋಡಿ ಅಭಿಮಾನಿಗಳು ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ. ವಧು-ವರರ ಮೇಲೆ ಅಪಾರ ಪ್ರೀತಿ ಸುರಿಸುತ್ತಿದ್ದಾರೆ.
'ನಾವಿಬ್ಬರೂ ಹಂಚಿಕೊಳ್ಳುವ ಪ್ರೀತಿಯು ನಮ್ಮ ಮೆಹಂದಿಯನ್ನು ಸುಂದರ ಮತ್ತು ಸ್ಮರಣೀಯವಾಗಿಸಿದೆ' ಎಂದು ಪೋಟೋಗೆ ನಟಿ ಅಕಿಂತಾ ಲೋಖಂಡೆ ಕ್ಯಾಪ್ಷನ್ ನೀಡಿದ್ದಾರೆ. ಇನ್ನೊಂದು ಫೋಟೋದಲ್ಲಿ, ವಿಕ್ಕಿ ತನ್ನ ಭಾವಿ ಪತ್ನಿ ಅಂಕಿತಾರನ್ನು ಎತ್ತಿಕೊಂಡು ಡ್ಯಾನ್ಸ್ ಮಾಡುತ್ತಿದ್ದಾರೆ.
ಮದುವೆಯ ತಯಾರಿಯಲ್ಲಿ ಅಂಕಿತಾ ಕಾಲಿಗೆ ನೋವು ಮಾಡಿಕೊಂಡಿ ಮತ್ತು ಅವರನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು. ನಂತರ ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿ ಅವರನ್ನು ಡಿಸ್ಚಾರ್ಜ್ ಮಾಡಿದ್ದರು. ಈ ಘಟನೆ ಕಳೆದ ವಾರದಲ್ಲಿ ನೆಡೆದಿತ್ತು.
ಅಂಕಿತಾರ ಕಾಲು ಇನ್ನೂ ಪೂರ್ತಿ ಗುಣವಾಗಿಲ್ಲ ಮತ್ತು ಇನ್ನೂ ಅವರಿಗೆ ಕಾಲಿನಲ್ಲಿ ನೋವು ಇದೆ.ಆದರೂ ಕಾಲಿಗೆ ಬ್ಯಾಂಡೇಜ್ ಕಟ್ಟಿಕೊಂಡು ಡ್ಯಾನ್ಸ್ ಮಾಡಿದ್ದಾರೆ. ಅವರ ತಮ್ಮ ಮದುವೆಯ ಯಾವ ಖುಷಿಯನ್ನು ತಪ್ಪಿಸಿಕೊಳ್ಳಲು ತಯಾರಿಲ್ಲ.
ಅಂಕಿತಾ ಲೋಖಂಡೆ ಅವರ ಮೆಹಂದಿ ಸಮಾರಂಭಕ್ಕೆ ಟಿವಿ ಲೋಕದ ಹಲವು ತಾರೆಯರು ಆಗಮಿಸಿದ್ದರು. ಸೃಷ್ಟಿ ರೋಡ್ (Srishty Rode) ಕೂಡ ತಮ್ಮ ಸ್ನೇಹಿತೆ ಅಂಕಿತಾರ ಖುಷಿಯಲ್ಲಿ ಸೇರಿಕೊಂಡಿದ್ದರು.
ಈ ವೇಳೆ ಸೃಷ್ಟಿ ರೋಡ್ ಅವರು ವಧು-ವರರೊಂದಿಗೆ ಮೋಜು ಮಸ್ತಿ ಮಾಡುತ್ತಿರುವುದು ಕಂಡುಬಂದಿದೆ. ಸೃಷ್ಟಿ ತುಂಬಾ ಸೆಕ್ಸ್ ಆಫ್ ಶೋಸೋಲ್ಡರ್ ಲೆಹೆಂಗಾವನ್ನು ಧರಿಸಿದ್ದರು. ಇದರೊಂದಿಗೆ ಕಾಲಿಗೆ ಶೂ ಧರಿಸಿ ಹೆಜ್ಜೆ ಹಾಕಿದ್ದರು. ಸೃಷ್ಟಿಯ ಕಾಲಿಗೂ ಸಹ ಗಾಯವಾಗಿದೆ. ಆದರೂ ಫ್ರೆಂಡ್ ಮದುವೆಯಲ್ಲಿ ಬ್ಯಾಂಡೇಜ್ ಕಟ್ಟಿಕೊಂಡು ಕುಣಿದು ಕುಪ್ಪಳಿಸಿದರು.