Karna Serial: ನಿತ್ಯಾ ಮೈಮೇಲೆ ಹಲ್ಲಿ ಎಸೆದ ನಿಧಿ, ನಮ್ರತಾ ರಿಯಾಕ್ಷನ್ ಗೆ ಬಿದ್ದು ಬಿದ್ದು ನಕ್ಕ Bhavya Gowda

Published : Jan 14, 2026, 02:50 PM IST

ಕರ್ಣ ಸೀರಿಯಲ್ ನಲ್ಲಿ ನಿಧಿ ಹಾಗೂ ನಿತ್ಯಾ ಹೇಗಿರ್ತಾರೆ ಅನ್ನೋದು ನಿಮಗೆ ಗೊತ್ತು. ಸೀರಿಯಲ್ ಮುಗಿದ ಮೇಲೆ ಏನೆಲ್ಲ ತಮಾಷೆ ಮಾಡ್ತಾರೆ ಗೊತ್ತಾ? ಭವ್ಯ ಗೌಡ, ನಮ್ರತಾ ಕಾಲೆಳೆದು ತಮಾಷೆ ಮಾಡಿದ್ದಾರೆ.

PREV
17
ಕರ್ಣ ಸೀರಿಯಲ್

ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಕರ್ಣ ಸೀರಿಯಲ್ ಮತ್ತೊಂದು ತಿರುವು ಪಡೆದಿದೆ. ಕರ್ಣ, ನಿತ್ಯಾ ಹಾಗೂ ತೇಜಸ್ ಮದುವೆ ಮಾಡಿಸ್ತಿದ್ದಾನೆ. ತಾಳಿ ಹಿಡಿದಿರುವ ತೇಜಸ್, ನಿತ್ಯಾ ಕೊರಳಿಗೆ ತಾಳಿ ಕಟ್ಟಲು ಹಿಂದೆ ಮುಂದೆ ನೋಡ್ತಿದ್ದಾನೆ. ಈ ಮಧ್ಯೆ ಮದುವೆ ನಡೆಯೋದಿಲ್ಲ ಅಂತ ಕರ್ಣನ ತಂದೆ ಹೇಳಿದ್ದು, ಮುಂದೆನಾಗುತ್ತೆ ಎನ್ನುವ ಕುತೂಹಲ ವೀಕ್ಷಕರಲ್ಲಿದೆ.

27
ಬೆಸ್ಟ್ ಸಹೋದರಿಯರು

ಕರ್ಣ ಸೀರಿಯಲ್ ನಲ್ಲಿ ಅಕ್ಕ – ತಂಗಿ ನಿತ್ಯಾ ಹಾಗೂ ನಿಧಿ ಬಾಂಡಿಂಗ್ ಚೆನ್ನಾಗಿದೆ. ಇಬ್ಬರು ಪರಸ್ಪರ ಯಾವ ತ್ಯಾಗಕ್ಕೆ ಕೂಡ ಸಿದ್ಧ. ನಿತ್ಯಾ ಹಾಗೂ ನಿಧಿ ಜೋಡಿ ಫ್ಯಾನ್ಸ್ ಗೆ ಆರಂಭದಿಂದಲೂ ಇಷ್ಟವಾಗಿದೆ. ಅವರ ಪ್ರೀತಿ, ತ್ಯಾಗ ನೋಡಿ, ನಮಗೂ ಇಂಥ ಸಹೋದರಿಯರು ಇರ್ಬೇಕಿತ್ತು ಅಂತ ಅನೇಕರು ಅಂದ್ಕೊಂಡಿದ್ದಾರೆ.

37
ತೆರೆ ಹಿಂದೆಯೂ ಬೆಸ್ಟ್ ಜೋಡಿ

ತೆರೆ ಹಿಂದೆಯೂ ನಿತ್ಯಾ ಹಾಗೂ ನಿಧಿ ಬಾಂಡಿಂಗ್ ಚೆನ್ನಾಗಿದೆ. ನಿತ್ಯಾ ಪಾತ್ರಕ್ಕೆ ನಮ್ರತಾ ಗೌಡ ಜೀವ ತುಂಬಿದ್ದಾರೆ. ಇನ್ನು ನಿಧಿ ಪಾತ್ರಕ್ಕೆ ಭವ್ಯಾ ಗೌಡ ಜೀವ ತುಂಬಿದ್ದಾರೆ. ಇಬ್ಬರೂ ತಮ್ಮ ಪಾತ್ರದಲ್ಲಿ ಮಾತ್ರವಲ್ಲ ಪಾತ್ರದ ಹೊರಗೂ ಬೆಸ್ಟ್ ಫ್ರೆಂಡ್ಸ್ ನಂತಿದ್ದಾರೆ.

47
ನಮ್ರತಾ ಗೌಡ ಮೇಲೆ ಹಲ್ಲಿ ಹಾಕಿದ ಭವ್ಯ

ಶೂಟಿಂಗ್ ಬ್ರೇಕ್ ನಲ್ಲಿ ಕಲಾವಿದರು ಏನು ಮಾಡ್ತಾರೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಫ್ಯಾನ್ಸ್ ಗಿದ್ದೇ ಇರುತ್ತೆ. ಈಗ ನಮ್ರತಾ ಜೊತೆ ತಮಾಷೆ ಮಾಡಿದ ವಿಡಿಯೋವನ್ನು ಭವ್ಯಾ ಗೌಡ ಹಂಚಿಕೊಂಡಿದ್ದಾರೆ. ಕಾರ್ ಹತ್ತಿರ ನಮ್ರತಾ ನಿಂತಿದ್ರು. ನಕಲಿ ಹಲ್ಲಿಯನ್ನು ಹಿಡಿದುಕೊಂಡ ಭವ್ಯಾ, ರಿಯಾಕ್ಷನ್ ನೋಡಿ ಅಂತ ನಮ್ರತಾ ಹೆಗಲ ಮೇಲೆ ಹಾಕಿ, ಹಲ್ಲಿ ತೋರಿಸಿದ್ದಾರೆ. ಇದನ್ನು ನೋಡಿ ಕಿರುಚಿಕೊಂಡ ನಮ್ರತಾ ನಂತ್ರ ಹುಸಿ ಮುನಿಸು ತೋರಿಸಿದ್ದಾರೆ.

57
ಅಭಿಮಾನಿಗಳ ಕಮೆಂಟ್

ಕರ್ಣ ಸೀರಿಯಲ್ ಶುರುವಾಗಿ ಇಷ್ಟು ದಿನವಾದ್ರೂ ನಮ್ರತಾ ಹಾಗೂ ಭವ್ಯ ಗೌಡ, ಶೂಟಿಂಗ್ ಬಿಡುವಿನಲ್ಲಿ ಹೇಗಿರ್ತಾರೆ ಎನ್ನುವ ವಿಡಿಯೋ ಪೋಸ್ಟ್ ಮಾಡಿರಲಿಲ್ಲ. ಇದ್ರಿಂದ ಫ್ಯಾನ್ಸ್ ಗೆ ಸ್ವಲ್ಪ ಬೇಸರವಾಗಿತ್ತು. ಆದ್ರೀಗ ಖುಷಿಯಾಗಿದ್ದಾರೆ. ನಿಮ್ಮಿಬ್ಬರನ್ನು ಹೀಗೆ ನೋಡೋದು ತುಂಬಾ ಖುಷಿ. ಆಗಾಗ ಇಂಥ ವಿಡಿಯೋಗಳನ್ನು ಪೋಸ್ಟ್ ಮಾಡ್ತಿರಿ ಎಂದಿದ್ದಾರೆ. ಸೀರಿಯಲ್ ನೋಡೋಕೆ ಯಾಕೋ ಬೋರ್ ಆಗ್ತಿದೆ, ನಿಮ್ಮ ಬಿಟಿಎಸ್ ಎಂಜಾಯ್ ಮಾಡ್ತೇವೆ, ಪೋಸ್ಟ್ ಮಾಡೋದನ್ನು ನಿಲ್ಲಿಸಬೇಡಿ ಅಂತ ಭವ್ಯ ಗೌಡಗೆ ವೀಕ್ಷಕರು ವಿನಂತಿ ಮಾಡಿದ್ದಾರೆ.

67
ನಮ್ರತಾ ಗೌಡ

ಕರ್ಣ ಸೀರಿಯಲ್ ನಲ್ಲಿ ನಿಧಿ ಹಾಗೂ ಕರ್ಣನ ಪ್ರೀತಿಗೆ ನಿತ್ಯಾ ಅಡ್ಡಿಯಾಗ್ತಿದ್ದಾರೆ ಎನ್ನುವ ಕಾರಣಕ್ಕೆ ನಮ್ರತಾ ಟ್ರೋಲ್ ಆಗಿದ್ರು. ಅದ್ರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ನಮ್ರತಾ ಈಗ ತಮ್ಮ ಕೆಲ್ಸವನ್ನು ಮಾಡ್ಕೊಂಡು ಹೋಗ್ತಿದ್ದಾರೆ. ಕರ್ಣ ಸೀರಿಯಲ್ ನಲ್ಲಿ ಬ್ಯುಸಿ ಇರುವ ನಮ್ರತಾ, ಮದುವೆ ಹುಡುಗಿಯಂತೆ ಸೀರೆಯುಟ್ಟು ಫೋಟೋಕ್ಕೆ ಫೋಸ್ ನೀಡಿದ್ದಾರೆ. ಅವರ ಫೋಟೋ ನೋಡಿದ ವೀಕ್ಷಕರು ಮದುವೆಗೆ ಸಿದ್ಧತೆಯಾ ಅಂತ ಪ್ರಶ್ನೆ ಮಾಡಿದ್ರು. ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಜೊತೆ ನಮ್ರತಾ ಹೆಸರು ಥಳುಕು ಹಾಕಿಕೊಂಡಿದ್ದು, ಇತ್ತೀಚಿಗೆ ಮತ್ತೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು ಸಾಕಷ್ಟು ಸುದ್ದಿ ಮಾಡಿತ್ತು.

77
ಭವ್ಯ ಗೌಡ

ಬಿಗ್ ಬಾಸ್ 11ರಲ್ಲಿ ಉತ್ತಮ ಆಟ ಪ್ರದರ್ಶಿಸಿದ್ದ ಭವ್ಯ ಗೌಡ ನಿಧಿಯಾಗಿ ಮಿಂಚುತ್ತಿದ್ದಾರೆ. ನಿಧಿ ಹಾಗೂ ಕರ್ಣನ ಪ್ರೀತಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇನ್ನಷ್ಟು ಇಂಥ ಸೀನ್ ಬರಲಿ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಸೀರಿಯಲ್ ಜೊತೆ ಡಾನ್ಸ್ ಕರ್ನಾಟಕ ಡಾನ್ಸ್ ರಿಯಾಲಿಟಿ ಶೋನಲ್ಲಿ ಭವ್ಯ ಕಾಣಿಸಿಕೊಳ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories