ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಸಮೀಪಿಸುತ್ತಿದ್ದಂತೆ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣ ಗೌಡರು ನಟ ಸುದೀಪ್ ಅವರನ್ನು ಭೇಟಿಯಾಗಿದ್ದಾರೆ. ಬಿಗ್‌ಬಾಸ್ ಸ್ಪರ್ಧಿ ಅಶ್ವಿನಿ ಗೌಡರ ಆಸೆಯಂತೆ ನಾರಾಯಣ ಗೌಡರು ಮನೆಗೆ ಪ್ರವೇಶಿಸುತ್ತಾರೆಯೇ ಎಂಬ ಕುತೂಹಲ ಸೃಷ್ಟಿಯಾಗಿದೆ.
ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ ಬೆರಳಣಿಕೆಯ ದಿನಗಳು ಉಳಿದಿದ್ದು, ಟ್ರೋಫಿ ಯಾರು ಗೆಲ್ತಾರೆ ಎಂಬುದರ ಬಗ್ಗೆ ತೀವ್ರ ಕುತೂಹಲ ಸೃಷ್ಟಿಯಾಗಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಸುದೀಪ್ ನಿವಾಸಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣ ಗೌಡರು ಭೇಟಿ ನೀಡಿರುವ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದೆ.
26
ನಾರಾಯಣ ಗೌಡರ ಶಿಷ್ಯೆ ಅಶ್ವಿನಿ ಗೌಡ
ಹೌದು, ಬಿಗ್‌ಬಾಸ್ ಮನೆಯಲ್ಲಿರೋ ಅಶ್ವಿನಿ ಗೌಡ ಸಹ ಕನ್ನಡ ಪರ ಹೋರಾಟದಲ್ಲಿ ಗುರುತಿಸಿಕೊಂಡಿದ್ದು, ನಾರಾಯಣ ಗೌಡರ ಶಿಷ್ಯೆಯಾಗಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ನಾರಾಯಣ ಗೌಡರನ್ನು ನೋಡಬೇಕು ಮತ್ತು ಅವರ ಅಶೀರ್ವಾದ ಪಡೆದುಕೊಳ್ಳಬೇಕು ಎಂದು ಅಶ್ವಿನಿ ಗೌಡ ಆಸೆ ವ್ಯಕ್ತಪಡಿಸಿದ್ದಾರೆ. ಇದೀಗ ಸುದೀಪ್ ಅವರನ್ನು ನಾರಾಯಣಗೌಡರು ಭೇಟಿಯಾಗಿದ್ದಾರೆ.
36
ಯಾಕೆ ಈ ಭೇಟಿ?
ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣ ಗೌಡ್ರು ತಮ್ಮ ಪುತ್ರನ ವಿವಾಹ ಮಹೋತ್ಸವದ ಆಮಂತ್ರಣ ಪತ್ರಿಕೆ ನೀಡಲು ಸುದೀಪ್ ನಿವಾಸಕ್ಕೆ ತೆರಳಿದ್ದಾರೆ. ಸುದೀಪ್ ಅವರನ್ನು ಭೇಟಿಯಾಗಿ ಕರೆಯೊಲೆ ನೀಡಿ ಮಗನ ಮದುವೆಗೆ ಆಹ್ವಾನಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ನಾರಾಯಣ ಗೌಡರು ಮತ್ತು ಸುದೀಪ್ ಭೇಟಿಯ ಫೋಟೋಗಳು ವೈರಲ್ ಆಗುತ್ತಿವೆ. ನಿಜವಾದ ವಿಷಯ ತಿಳಿಯದ ಕೆಲವರು ವಿವಿಧ ಶೀರ್ಷಿಕೆಯಡಿಯಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
56
ನಲ್ಲಿಮೂಳೆ ತಿಂದ ಗಿಲ್ಲಿ, ಮಗನೊಂದಿಗೆ ಈಜಾಡಿದ ರಘು
ಫಿನಾಲೆ ವಾರ ಆಗಿರೋದರಿಂದ ಸ್ಪರ್ಧಿಗಳಿಗೆ ಮೂರು ಆಸೆಗಳನ್ನು ಹೇಳಿಕೊಳ್ಳುವಂತೆ ಬಿಗ್‌ಬಾಸ್ ಸೂಚಿಸಿದ್ದರು. ಈಗಾಗಲೇ ರಘು ಮತ್ತು ಗಿಲ್ಲಿ ನಟ ಅವರ ಮೂರು ಆಸೆಗಳ ಪೈಕಿ ಒಂದನ್ನು ಈಡೇರಿಸಲಾಗಿದೆ. ಆಸೆಯಂತೆ ಈಜುಕೊಳದಲ್ಲಿ ಮಗನೊಂದಿಗೆ ರಘು ಸ್ವಿಮ್ ಮಾಡಿದ್ರೆ, ಆಸೆಯಂತೆ ನಲ್ಲಿಮೂಳೆ ತಿಂದು ಗಿಲ್ಲಿ ನಟ ನಿದ್ದೆ ಮಾಡಿದ್ದಾರೆ.
ಮನೆಗೆ ನಾರಾಯಣ ಗೌಡರು ಬಂದು ತಮ್ಮನ್ನು ಆಶೀರ್ವದಿಸಬೇಕು ಎಂದು ಅಶ್ವಿನಿ ಗೌಡ ಕೇಳಿಕೊಂಡಿದ್ದಾರೆ. ಅಶ್ವಿನಿ ಗೌಡ ಆಸೆಯಂತೆಯೇ ಬಿಗ್‌ಬಾಸ್ ಮನೆಗೆ ನಾರಾಯಣ ಗೌಡರು ಬರ್ತಾರಾ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.