ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ವಾರ ಎಲ್ಲಾ ಧಾರಾವಾಹಿಗಳಲ್ಲಿ ಮಹಾಸಂಚಿಕೆ ಪ್ರಸಾರವಾಗಿತ್ತು, ಹಾಗಾಗಿ ಪ್ರತಿ ಸೀರಿಯಲ್ ಒಂದು ಗಂಟೆಗಳ ಕಾಲ ಪ್ರಸಾರ ಕಂಡಿದ್ದು, ಇದರಿಂದ ಕಲರ್ಸ್ ವಾಹಿನಿಯ ಟಿ ಆರ್ ಪಿ ಕೂಡ ಹೆಚ್ಚಾಗಿದೆ.
26
ಇನ್ನು ವಿಶೇಷ ಏನೆಂದರೆ, ಇಲ್ಲಿವರೆಗೆ ಸುಮಾರಾಗಿ ಸಾಗುತ್ತಿದ್ದ ಭಾರ್ಗವಿ LLB ಸೀರಿಯಲ್ ಕಥೆಯಲ್ಲಿ ಊಹಿಸಲಾರದ ತಿರುವು ಪಡೆದುಕೊಂಡ ಪರಿಣಾಮ ಕಲರ್ಸ್ ಕನ್ನಡದ ಟಿಆರ್ಪಿ ಯಲ್ಲಿ ನಂಬರ್ 1 ಸ್ಥಾನಕ್ಕೇರಿದೆ. ಅದಕ್ಕಎ ಕಾರಣ ಭಾರ್ಗವಿ ಮತ್ತು ಅರ್ಜುನ್ ಮದುವೆ.
36
ಹೌದು ‘ಭಾರ್ಗವಿ LLB’ ಧಾರಾವಾಹಿಯಲ್ಲಿ ಕಳೆದ ವಾರ ಭಾರ್ಗವಿ - ಅರ್ಜುನ್ ಮದುವೆ ನೆರವೇರಿತು. ರೌಡಿಗಳಿಂದ ತಪ್ಪಿಸಿ ಸಾಮೂಹಿಕ ಮದುವೆ ನಡೆಯುವಲ್ಲಿ ಹೋಗಿ ಅಡಗಿಕೊಳ್ಳುವ ಭಾರ್ಗವಿ ಮತ್ತು ಅರ್ಜುನ್, ತಾವು ಮದುಮಕ್ಕಳಂತೆ ರೆಡಿಯಾಗಿರುತ್ತಾರೆ. ಕೊನೆಗೆ ಅರ್ಜುನ್ ಭಾರ್ಗವಿ ಕುತ್ತಿಗೆಗೆ ತಾಳಿ ಕಟ್ಟಿಯೇ ಬಿಟ್ಟ.
‘ಭಾರ್ಗವಿ LLB’ ಸೀರಿಯಲ್‌ನ ಮದುವೆಯ ಮಹಾಸಂಚಿಕೆಗೆ ಜನರಿಗೆ ಎಷ್ಟೊಂದು ಇಷ್ಟವಾಗಿತ್ತು ಅಂದರೆ, ಹೈಯೆಸ್ಟ್ ರೇಟಿಂಗ್ ಪಡೆದುಕೊಳ್ಳುವ ಮೂಲಕ ನಂಬರ್ 1 ಸ್ಥಾನಕ್ಕೆ ಏರಿದೆ. ಈ ಸೀರಿಯಲ್ ಗೆ 6.4 ಟಿವಿಆರ್ ಲಭಿಸಿದೆ.
56
ಭಾರ್ಗವಿ LLB ಧಾರಾವಾಹಿಯಲ್ಲಿ ಸದ್ಯದ ಸಂಚಿಕೆಯಲ್ಲಿ ಇಷ್ಟು ದಿನ ಭಾರ್ಗವಿ ಕಾಪಾಡಿಕೊಂಡು ಬಂದಿದ್ದ ಸಂಧ್ಯಾಳ ಕೊಲೆಯಾಗಿದೆ. ಸಂಧ್ಯಾಗೆ ನ್ಯಾಯ ಕೊಡಿಸುವಲ್ಲಿ ಭಾರ್ಗವಿ ಸೋತಿದ್ದಾರೆ. ಕೋರ್ಟ್ ಸೀನ್ ನಲ್ಲಿ ಭಾರ್ಗವಿ ಇಮೋಷನಲ್ ಡೈಲಾಗ್ ಗಳು ಜನರಿಗೆ ತಟ್ಟಿದೆ. ಜೆಪಿ ಪಾಟೀಲ್ ಗೆ ಜಯವಾಗಿದೆ. ಈ ಎಪಿಸೋಡ್ ಗಳನ್ನು ಜನ ಇಷ್ಟಪಟ್ಟಿದ್ದಾರೆ.
66
ಇನ್ನೂ ಬೇರೆ ಸಿರಿಯಲ್ ಗಳ ಬಗ್ಗೆ ಹೇಳೋದಾದರೆ ‘ಮುದ್ದು ಸೊಸೆ’ ಮಹಾಸಂಚಿಕೆಗೆ 5.1, ‘ನಂದಗೋಕುಲ’ ಮಹಾಸಂಚಿಕೆಗೆ 5.6, ‘ಭಾಗ್ಯಲಕ್ಷ್ಮೀ’ 5.3 ಟಿವಿಆರ್, ‘ನಿನಗಾಗಿ’ ಮಹಾಸಂಚಿಕೆಗೆ 4.6 ಟಿವಿಆರ್, ‘ಯಜಮಾನ’ ಮಹಾಸಂಚಿಕೆಗೆ 3.5 ಟಿವಿಆರ್ ಲಭಿಸಿದೆ.