'ನೇಣು ಹಾಕ್ಕೊಂಡು ಸಾ*ಯಿ ಅಂತ ನಾನು ಅಪ್ಪನಿಗೆ ಹೇಳಿದ 5 ದಿನಕ್ಕೆ ತೀರಿಕೊಂಡ್ರು': Bhumika Deshpande

Published : Aug 21, 2025, 07:03 PM IST

ಭೂಮಿಕಾ ದೇಶಪಾಂಡೆಗೆ ತಂದೆ ಕಂಡರೆ ತುಂಬ ಇಷ್ಟ. ತಂದೆಗೂ ಮಗಳ ಕಂಡರೆ ತುಂಬ ಇಷ್ಟ. ಆದರೆ ಅವರು ಸಾ*ಯುವ ಐದು ದಿನ ಭೂಮಿಕಾರೇ ತಂದೆಗೆ “ನೇಣು ಹಾಕಿಕೊಂಡು ಸಾಯಿ” ಅಂತ ಹೇಳಿದ್ದರಂತೆ. 

PREV
15

'ನ್ಯೂಸೋ ನ್ಯೂಸು' ಯುಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಭೂಮಿಕಾ ದೇಶಪಾಂಡೆ ಅವರು ವೈಯಕ್ತಿಕ ಜೀವನದ ಏರಿಳಿತದ ಬಗ್ಗೆ ಮಾತನಾಡಿದ್ದಾರೆ. ಭೂಮಿಕಾ ದೇಶಪಾಂಡೆ ಮನೆಯಲ್ಲಿ ಇಲ್ಲ ಅಂದ್ರೆ ಅವರ ತಂದೆ ಮಗಳ ಫೋಟೋ ನೋಡಿ ದಿನವನ್ನು ಶುರು ಮಾಡುತ್ತಿದ್ದರಂತೆ. ಮಗಳನ್ನು ಕಂಡರೆ ಅವರಿಗೆ ಅಷ್ಟು ಇಷ್ಟವಂತೆ.

25

“ಆರ್ಥಿಕ ನಷ್ಟ, ತಾಯಿ ಜೊತೆ ಜಗಳ ಎಂದು ಭೂಮಿಕಾ ತಂದೆ ಕುಡಿಯಲು ಆರಂಭಿಸಿದ್ದರು. ಎಂದಿಗೂ ಕುಡಿಯದೆ ಇರೋರು ಬೆಳಗ್ಗೆಯಿಂದ ರಾತ್ರಿಯವರೆಗೂ ಕೂಡ ಕುಡಿಯುತ್ತಿದ್ದರು. ಎಂದಿಗೂ ಕುಡಿಯದೆ ಇರೋರು, ಆ ಥರ ಕುಡಿಯಲು ಆರಂಭಿಸಿದ್ರೆ ದೇಹ ತಡೆದುಕೊಳ್ಳೋದಿಲ್ಲ” ಎಂದು ಭೂಮಿಕಾ ಹೇಳಿದ್ದರು.

35

“ನಾನು ಬಾಲಿಗೆ ಟ್ರಿಪ್‌ಗೆ ಹೋಗಿದ್ದೆ. ಆಗ ಅಪ್ಪ ಫೋನ್‌ ಮಾಡಿದ್ದರು. ಮನೆಯಲ್ಲಿ ಕುಡಿಯೋ ತಂದೆ ಇದ್ದಾಗ ಹೊರಗಡೆ ಜನರು ಕೆಟ್ಟದಾಗಿ ನೋಡುತ್ತಾರೆ. ಹೀಗಾಗಿ ನನಗೆ ಸಾಕಾಗಿ ಹೋಗಿತ್ತು. ನೀನು ಈ ಥರ ಕುಡಿದು ಟಾರ್ಚರ್‌ ಕೊಡೋ ಬದಲು, ನೇಣು ಹಾಕಿಕೊಂಡು ಸಾ*ಯಿ. ನಾವು ಎಲ್ಲಿಯಾದ್ರೂ ಹೊರಗಡೆ ಹೋಗಿ ಬದುಕ್ತೀವಿ ಎಂದು ನಾನು ಹೇಳಿದ್ದೆ” ಎಂದಿದ್ದಾರೆ ಭೂಮಿಕಾ ದೇಶಪಾಂಡೆ.

45

“ನಾನು ಫೋನ್‌ ಮಾಡಿ ಐದು ದಿನ ಆಗಿತ್ತು. ಆಗ ನನಗೆ ಅಪ್ಪ ಇಲ್ಲ ಅಂತ ಫೋನ್‌ ಬಂತು. ಹೃದಯಾಘಾತ ಆಗಿತ್ತು. ಯಾಕಾದರೂ ನಾನು ಅಂದು ಅಪ್ಪನಿಗೆ ಈ ಥರ ಮಾತು ಹೇಳಿದೆ ಅಂತ ಈಗಲೂ ಪಶ್ಚಾತ್ತಾಪ ಪಡುತ್ತಿದ್ದೇನೆ. ಈ ನೋವು ಸಾಯೋ ತನಕ ಇರುತ್ತದೆ. ಹೀಗಾಗಿ ಯಾರಿಗೂ ನಾನು ಹಾಳಾಗಿ ಹೋಗು, ಸಾಯಿರಿ ಅಂತ ಬೈಯ್ಯೋದಿಲ್ಲ” ಎಂದಿದ್ದಾರೆ ಭೂಮಿಕಾ.

55

“ನಾನು ಬಾಲಿಯಿಂದ ಬರೋವರೆಗೂ ಅಪ್ಪನ ದೇಹ ಇಟ್ಟಿದ್ದರು. ಅವರು ತೀರಿಕೊಂಡಾಗ ಪ್ಯಾಂಟ್‌ ಜೇಬಿನಲ್ಲಿ ನನ್ನ ಫೋಟೋ ಇತ್ತು. ಹೃದಯಾಘಾತ ಆಗಿ ಅಪ್ಪ ತೀರಿಕೊಂಡರು. ಪುನೀತ್‌ ರಾಜ್‌ಕುಮಾರ್‌ ತೀರಿಕೊಂಡಾಗ ಅವರ ಮಗಳು ಕೂಡ ವಿದೇಶದಿಂದ ಬಂದಿದ್ದರು. ಇದು ನನಗೆ ರಿಲೇಟ್‌ ಆಗತ್ತೆ” ಎಂದಿದ್ದಾರೆ ಭೂಮಿಕಾ.

Read more Photos on
click me!

Recommended Stories