“ನಾವಿಬ್ಬರೂ ದೂರ ಆಗಿದ್ದಕ್ಕೆ ಇಂದಿಗೂ ಬೇಜಾರಿದೆ. ಆದರೆ ಮೂವ್ ಆನ್ ಆಗಬೇಕಿತ್ತು. ಗಂಡನ ಪ್ರೀತಿ ಸಿಗದಿದ್ದರೂ ಕೂಡ, ತಂದೆ-ತಾಯಿ, ಅಣ್ಣ-ತಮ್ಮಂದಿರು, ಮನೆಯವರ ಪ್ರೀತಿ ಬೇಕಿತ್ತು, ನನಗೆ ಒಳ್ಳೆಯ ಕುಟುಂಬ, ಎಲ್ಲರೂ ಬೇಕಿತ್ತು. ಆ ಪ್ರೀತಿ ನನಗೆ ನಿಂಗರಾಜ್ ಅವರಲ್ಲಿ ಸಿಕ್ಕಿತು. ಮೂರು ವರ್ಷಗಳ ಕಾಲ ನನ್ನನ್ನು ಹಿಡಿಯೋರು ಇರಲಿಲ್ಲ. ಟೀಂ ಚೆನ್ನಾಗಿತ್ತು, ಹೀಗಾಗಿ ಬೇರೆ ಅವಕಾಶಗಳು ಸಿಕ್ಕರೂ ಕೂಡ ಹೋಗಲಿಲ್ಲ. ಆ ಟೀಂ ಇಲ್ಲ ಅಂತ ಅಂದಾಗ ತುಂಬ ಬೇಸರ ಆಯ್ತು” ಎಂದು ಭೂಮಿಕಾ ದೇಶಪಾಂಡೆ ಹೇಳಿದ್ದಾರೆ.