'ಭಾಗ್ಯಲಕ್ಷ್ಮಿ' ಮತ್ತು 'ಲಕ್ಷ್ಮೀ ನಿವಾಸ' ಧಾರಾವಾಹಿಗಳಲ್ಲಿ ನಾಯಕಿಯರಾದ ಭಾಗ್ಯ ಮತ್ತು ಜಾನು ತಮ್ಮ ಗಂಡಂದಿರಿಗೆ ತಿರುಗೇಟು ನೀಡಲು ಸಜ್ಜಾಗಿದ್ದಾರೆ. ಭಾಗ್ಯ ತಾಂಡವ್‌ನನ್ನು ಮದುವೆಯಾಗುವ ಮೂಲಕ ಮತ್ತು ಜಾನು ಜಯಂತ್‌ಗೆ ಅವನದೇ ರೀತಿಯಲ್ಲಿ ಪಾಠ ಕಲಿಸುವ ಮೂಲಕ, ದೊಡ್ಡ ಕಂಟಕವನ್ನು ತಂದೊಡ್ಡುತ್ತಿದ್ದಾರೆ.
ಎರಡು ಚಾನೆಲ್ಗಳು, ಎರಡು ವಿಭಿನ್ನ ಸ್ಟೋರಿಗಳು. ಆದರೂ ಇದೀಗ ಒಂದೇ ರೀತಿಯ ಕ್ಲೈಮ್ಯಾಕ್ಸ್. ಈ ಎರಡೂ ಸೀರಿಯಲ್ಗಳ ನಾಯಕರಿಗೆ ಕಾದಿದೆ ಮಾರಿಹಬ್ಬ. ಶುರುವಾಗಲಿದೆ ಭಾರಿ ಕಂಟಕ, ಹೆಣ್ಣು ಮನಸ್ಸು ಮಾಡಿದ್ರೆ ಏನು ಬೇಕಾದ್ರೂ ಮಾಡಿಯಾಳು ಎನ್ನೋದಕ್ಕೆ ಈ ಎರಡೂ ಸೀರಿಯಲ್ಗಳು ಒಂದೇ ಸಲ ಸಾಕ್ಷಿಯಾಗ್ತಿರೋದು ಕುತೂಹಲ.
27
ಎರಡು ಸೀರಿಯಲ್ಗಳ ವಿಶೇಷ
ಅದರಲ್ಲಿ ಒಂದು ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮಿ. ಇನ್ನೊಂದು ಜೀ ಕನ್ನಡದ ಲಕ್ಷ್ಮೀ ನಿವಾಸ. ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ಎಲ್ಲವೂ ಗೊತ್ತಿದ್ದೇ ತಾಂಡವ್‌ನನ್ನು ಮತ್ತೊಮ್ಮೆ ಮದುವೆಯಾಗಲು ಭಾಗ್ಯ ಒಪ್ಪಿಕೊಂಡಿದ್ದರೆ, ಲಕ್ಷ್ಮೀ ನಿವಾಸದಲ್ಲಿ, ಸೈಕೋ ಜಯಂತ್ನಿಗೆ ಅವನದ್ದೇ ಆದ ರೀತಿಯಲ್ಲಿ ತಿರುಗೇಟು ನೀಡಲು ಜಾನು ಮತ್ತೆ ಮನೆಗೆ ವಾಪಸ್ ಆಗಿದ್ದಾಳೆ.
37
ಭಾಗ್ಯಳಿಂದ ಕಾದಿದೆ ಮಾರಿಹಬ್ಬ
ಮೊದಲಿಗೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡೋಣ. ತಾಂಡವ್ ತಾನು ಒಳ್ಳೆಯವನಾಗಿದ್ದೇನೆ ಎಂದು ಎಲ್ಲರ ಎದುರೂ ಪೋಸ್ ಕೊಟ್ಟಿದ್ದಾನೆ. ಅಮ್ಮ ಕುಸುಮಾ ಮತ್ತು ಭಾಗ್ಯನಿಗೆ ಇವನು ಸರಿಯಾಗಲ್ಲ ಎಂದು ಗೊತ್ತಿದ್ದರೂ, ಅಮ್ಮ ಸುನಂದ ಮತ್ತು ಮಾವನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಅವಳ ಜವಾಬ್ದಾರಿ ಆಗಿದ್ದರಿಂದ ಮದುವೆಗೆ ಒಪ್ಪಿಗೆ ಸೂಚಿಸಿದ್ದಾಳೆ.
ತಮ್ಮ ಪ್ಲ್ಯಾನ್ ಸಕ್ಸಸ್ ಆಯ್ತು ಎಂದು ತಾಂಡವ್ ಮನಸ್ಸಿನಲ್ಲಿಯೇ ಖುಷಿ ಪಟ್ಟುಕೊಳ್ತಿದ್ದಾನೆ. ಆದರೆ, ತಾನು ಭಾಗ್ಯಳಿಗೆ ಮೋಸ ಮಾಡುವ ಉದ್ದೇಶದಿಂದ ಮದುವೆಯಾಗುತ್ತಿರುವುದಾಗಿ ಶ್ರೇಷ್ಠಾಳ ಎದುರು ಮಾತನಾಡಿದ್ದನ್ನು ಭಾಗ್ಯ ಕೇಳಿಸಿಕೊಂಡಿದ್ದಾಳೆ. ಆದ್ದರಿಂದ ಅವಳ ಉದ್ದೇಶವೇ ಬೇರೆ ಇದೆ.
57
ಕುಂಕುಮ ಇಟ್ಟುಕೊಳ್ಳಲು ನಕಾರ
ಮದುವೆಯ ಸಂದರ್ಭದಲ್ಲಿ ಕುಂಕುಮ ಇಡಲು ಬಂದಾಗ, ತಾಂಡವ್ನಿಂದ ಆಕೆ ಕುಂಕುಮ ಇಟ್ಟುಕೊಳ್ಳಲಿಲ್ಲ. ತಾಂಡವ್ ಕೊಟ್ಟಿರೋ ದುಬಾರಿ ಚಿನ್ನದ ಬಳೆಗಳ ಬದಲು ಆದಿ ಕೊಟ್ಟ ಹಸಿರು ಗಾಜಿನ ಬಳೆಗಳನ್ನೇ ತೊಟ್ಟುಕೊಂಡಿದ್ದಾಳೆ. ಮದುವೆಯಾಗುವ ಹಿಂದೆ ಅವಳ ಉದ್ದೇಶವೇ ಬೇರೆ ಇದೆ. ತಾಂಡವ್ಗೆ ಇನ್ನಿದೆ ಮಾರಿ ಹಬ್ಬ.
67
ಚಿನ್ನುಮರಿ ಈಗ ಮಹಾಮಾರಿ
ಅದೇ ಇನ್ನೊಂದೆಡೆ, ಲಕ್ಷ್ಮೀ ನಿವಾಸದ ಚಿನ್ನುಮರಿ ಈಗ ಮಹಾಮಾರಿ ಆಗಿದ್ದಾಳೆ. ಸೈಕೋ ಗಂಡ ಅತಿಯಾದ ಪ್ರೀತಿಯ ನೆಪದಲ್ಲಿ ತನಗೆ ಹೇಗೆಲ್ಲಾ ಟಾರ್ಚರ್ ಕೊಡುತ್ತಿದ್ದನೋ ಅದೇ ರೀತಿ ಅವಳು ಈಗ ಜಯಂತ್‌ಗೆ ಮಾಡುತ್ತಿದ್ದಾಳೆ. ಗುಲಾಬಿ ಹೂವಿನ ಬೊಕ್ಕೆ ನೀಡಿ ಅದರಲ್ಲಿ ಮುಳ್ಳು ಹಾಕಿ ರಕ್ತ ಬರಿಸೋವುದರಿಂದ ಹಿಡಿದು, ಹಾಲಿನಲ್ಲಿ ಜಿರಲೆ ಹಾಕಿ ಕುಡಿಸುವವರೆಗೆ ಎಲ್ಲವನ್ನೂ ಜಯಂತ್ಗೇ ವಾಪಸ್ ಮಾಡುತ್ತಿದ್ದಾಳೆ ಜಾಹ್ನವಿ.
77
ಸಿಕ್ಕಾಪಟ್ಟೆ ಮಜಾ ಬರ್ತಿದೆ
ಇದೀಗ ಈ ಎರಡೂ ಸೀರಿಯಲ್ ನೋಡುಗರಿಗೆ ಸಿಕ್ಕಾಪಟ್ಟೆ ಮಜಾ ಬರ್ತಿದೆ. ಸೀರಿಯಲ್ ವೀಕ್ಷಕರಲ್ಲಿ ಹೆಚ್ಚಿನ ವೀಕ್ಷಕರಾಗಿರುವ ಹೆಂಗಸರಿಗಂತೂ ಹಬ್ಬವೋ ಹಬ್ಬ. ಎರಡು ವಿಭಿನ್ನ ಸೀರಿಯಲ್ಗಳ ಕ್ಲೈಮ್ಯಾಕ್ಸ್ ನೋಡಲು ತುದಿಗಾಲಿನಲ್ಲಿ ನಿಂತಿರೋದು ಪ್ರೊಮೋಗಳಿಗೆ ಬರ್ತಿವೋ ಕಮೆಂಟ್ಸ್ ನೋಡಿಯೇ ತಿಳಿಯುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.