Amruthadhaare: ಅಲೆಲೆ... ಶಕುನಿ ಮಾಮಾನ್ನೇ ಯಾಮಾರಿಸಿದ್ಲು ಲೇಡಿ ಕೇಡಿ- ಜೈದೇವ್​ನನ್ನೇ ಮೀರಿಸಿದ ದಿಯಾ!

Published : Apr 06, 2026, 07:43 PM IST

ಅಮೃತಧಾರೆ ಧಾರಾವಾಹಿಯಲ್ಲಿ, ಗೌತಮ್ ಇರುವ ಜಾಗ ಪತ್ತೆಹಚ್ಚಲು ದಿಯಾ ಖತರ್ನಾಕ್ ಪ್ಲ್ಯಾನ್ ಮಾಡಿದ್ದಾಳೆ. ಶಕುನಿ ಮಾಮಾನನ್ನು ಬಳಸಿಕೊಂಡು ಜಿಪಿಎಸ್ ಮೂಲಕ ಎಲ್ಲರನ್ನೂ ಟ್ರ್ಯಾಕ್ ಮಾಡುತ್ತಿದ್ದಾಳೆ. ದಿಯಾಳ ಈ ಕುತಂತ್ರದಿಂದ ಪತಿ ಜೈದೇವ್​ ಕೂಡ ಅಚ್ಚರಿಗೊಂಡಿದ್ದಾನೆ.

PREV
16
ಟೂರ್​ ಮೂಡ್​ನಲ್ಲಿ ಎಲ್ಲಾ ಜೋಡಿ

ಅಮೃತಧಾರೆಯಲ್ಲಿ ಸದ್ಯ ಜೈದೇವನ ಪತ್ನಿ ದಿಯಾ ಖತರ್ನಾಕ್​ ಪ್ಲ್ಯಾನ್​ ಮಾಡಿದ್ದಾಳೆ. ಇವಳ ಹಿಂದಿರೋ ಉದ್ದೇಶ ತಿಳಿದು ವೀಕ್ಷಕರಷ್ಟೇ ಅಲ್ಲದೇ ಜೈದೇವನೂ ಸುಸ್ತಾಗಿ ಹೋಗಿದ್ದಾನೆ. ಅಷ್ಟಕ್ಕೂ ಮಲ್ಲಿ, ಸುನಿಲ್​ ಹನಿಮೂನ್​ಗೆ ಹೋಗಿದ್ದಾರೆ. ಅವರ ಜೊತೆ ಗೌತಮ್​-ಭೂಮಿಕಾ, ಆನಂದ್​-ಅಪರ್ಣಾ ಅಷ್ಟೇ ಅಲ್ಲದೇ ಶಕುನಿ ಮಾಮಾ ಕೂಡ ಟೂರ್​ಗೆ ಹೋಗಿದ್ದಾರೆ.

26
ಶಕುನಿ ಮಾಮಾ ಕಿಡ್​ನ್ಯಾಪ್​

ಶಕುನಿ ಮಾಮಾ ಗೌತಮ್ ಪರವಾಗಿ ಕೆಲಸ ಮಾಡ್ತಿರೋದು ಗೊತ್ತಾಗಿ, ಅವನನ್ನು ಕಿಡ್​ನ್ಯಾಪ್​ ಮಾಡಿಸಿದ್ದ ಜೈದೇವ. ಆದರೆ ದಿಯಾ ಬಂದು ಆತನನ್ನು ಬಿಡಿಸಿದ್ದಾಳೆ. ಜೈದೇವ್​ ಕೆಟ್ಟವನು, ನಾನು ನಿಮ್ಮ ಪರ ಎಂದೆಲ್ಲಾ ನಂಬಿಸಿದ್ದಾಳೆ.

36
ಗೌತಮ್​ ಬಳಿ ಶಕುನಿ ಮಾಮಾ

ಆದರೆ, ಆಕೆ ಮಾಡಿದ್ದ ಪ್ಲ್ಯಾನೇ ಬೇರೆ. ಶಕುನಿ ಮಾಮಾನ್ನು ಬಿಟ್ಟರೆ, ಅವನು ನೇರವಾಗಿ ಗೌತಮ್​ ಬಳಿ ಹೋಗ್ತಾನೆ ಎನ್ನುವುದು ತಿಳಿದಿದ್ದರಿಂದಲೇ ಮೊಬೈಲ್​ಗೆ ಜಿಪಿಎಸ್ ಹಾಕಿ ಕಳುಹಿಸಿದ್ದಾಳೆ.

46
ಜೈದೇವ್​ಗೆ ಪ್ಲ್ಯಾನ್​

ತನ್ನ ಪ್ಲ್ಯಾನ್​ ಅನ್ನು ಜೈದೇವ್​ಗೆ ಹೇಳಿದ್ದಾಳೆ ದಿಯಾ. ಎಲ್ಲರೂ ಎಲ್ಲಿಗೆ ಕಣ್ಣು ತಪ್ಪಿಸಿ ಹೋದರು ಎಂದು ಅರಿಯದ ಜೈದೇವ್​ ಚಿಂತಾಕ್ರಾಂತನಾಗಿ ಕುಳಿತಿದ್ದ. ಆದರೆ ದಿಯಾ ಬಂದು ತಮ್ಮಪ್ಲ್ಯಾನ್​ ಹೇಳಿದ್ದಾಳೆ.

56
ಶಕುನಿ ಮಾಮಾಗೆ ಕಾಲ್​

ಕೊನೆಗೆ ಶಕುನಿ ಮಾಮಾಗೆ ಕಾಲ್​ ಮಾಡಿ ಎಲ್ಲಿದ್ದೀರಿ ಎಂದು ಕೇಳಿ ಎಲ್ಲಾ ವಿಷಯ ತಿಳಿದುಕೊಂಡಿದ್ದಾಳೆ. ಶಕುನಿ ಮಾಮಾಗೆ ದಿಯಾಳ ಕುತಂತ್ರ ಗೊತ್ತಾಯ್ತಾ, ಇಲ್ವಾ, ಅವನು ನಿಜ ಹೇಳಿದ್ನಾ ಅಥ್ವಾ ದಿಯಾಳ ಕುತಂತ್ರ ತಿಳಿದು ಸುಳ್ಳು ಹೇಳಿದ್ನಾ ಎನ್ನೋದು ಈಗಿರುವ ಕುತೂಹಲ.

66
ಜೈದೇವ್​ನನ್ನೂ ಮೀರಿಸಿದ್ಲು

ಆದರೂ ಸದ್ಯಕ್ಕಂತೂ ದಿಯಾ ಶಕುನಿ ಮಾಮಾಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ, ಕೇಡಿ ಜೆಡಿಯ ಪತ್ನಿಯಾಗಿ ಅವನನ್ನೂ ಮೀರಿಸಿದ್ದಾಳೆ. ​

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories