Bhagyalakshmi ಸೀರಿಯಲ್ ತಂಡವು ಇದೀಗ ತಮ್ಮ ವೀಕ್ಷಕರಿಗೆ ಗುಡ್ ನ್ಯೂಸ್ ನೀಡಿದೆ. ಇನ್ನೇನು ಧಾರಾವಾಹಿ ಮುಕ್ತಾಯದ ಹಂತದಲ್ಲಿದೆ ಎನ್ನುವ ಸುದ್ದಿ, ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ನಡುವೆಯೇ, ಇದೀಗ ಸೀರಿಯಲ್ ತಂಡ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ಭಾಗ್ಯಲಕ್ಷ್ಮಿ’ . ಕೆಲವು ದಿನಗಳಿಂದ ಈ ಧಾರಾವಾಹಿ ಕೊನೆಯ ಹಂತವನ್ನು ತಲುಪಿದೆ. ಶೀಘ್ರದಲ್ಲಿ ಸೀರಿಯಲ್ ಮುಕ್ತಾಯವಾಗಲಿದೆ ಎನ್ನುವ ಸುದ್ದಿ ಹರಡಿದ್ದು. ಇದರ ಮಧ್ಯ ಸೀರಿಯಲ್ ತಂಡ ಗುಡ್ ನ್ಯೂಸ್ ನೀಡಿದೆ.
26
ಏನಾಗ್ತಿದೆ ಧಾರಾವಾಹಿಯಲ್ಲಿ?
ಗುಡ್ ನ್ಯೂಸ್ ಗೂ ಮುನ್ನ ಧಾರಾವಾಹಿಯಲ್ಲಿ ಈಗ ಸದ್ಯ ಏನಾಗುತ್ತಿದೆ ಅನ್ನೋದನ್ನು ನೋಡೋಣ. ಒಂದು ಕಡೆ ಆದಿಗೆ ಭಾಗ್ಯ ಮೇಲೆ ಲವ್ ಆಗಿದೆ. ತನ್ನ ಪ್ರೀತಿಯನ್ನು ಆದಿ ಭಾಗ್ಯ ಜೊತೆ ಹೇಳಿದ್ದೂ ಆಗಿದೆ. ಆದರೆ ಭಾಗ್ಯಳಿಗೆ ಆದಿಯನ್ನು ಜೀವನ ಸಂಗಾತಿಯಾಗಿ ಒಪ್ಪಿಕೊಳ್ಳಲು ಇಷ್ಟವಿಲ್ಲ. ಆದರೆ ಮಗನ ಮಾತಿನ ಬಳಿಕ ಭಾಗ್ಯ ಆದಿಯನ್ನು ಒಪ್ಪಿಕೊಂಡಂತಿದೆ.
36
ಭಾಗ್ಯ ಬಳಿ ಬೇಡಿಕೊಂಡ ಆದಿ ತಂದೆ
ಆದಿ ತಂದೆ ಮಗನ ನೋವನ್ನು ನೋಡಲಾರದೆ, ಭಾಗ್ಯಳ ಬಂದು, ನನ್ನ ಮಗನ ಪ್ರೀತಿಯನ್ನು ನೀನು ಒಪ್ಪಿಕೊಂಡಿರಲಿಲ್ಲ, ಆದ್ರೆ ಈಗ ನನಗೋಸ್ಕರ, ಒಂದು ಸುಳ್ಳು ಹೇಳು ಎಂದು ಕೇಳಿಕೊಂಡಿದ್ದಾರೆ. ಆದರೆ ಭಾಗ್ಯಳಿಗೆ ಇದೀಗ ನಿಜವಾಗಿಯೂ ಆದಿ ಮೇಲೆ ಪ್ರೀತಿಯಾಗಿದ್ದು, ತಾನು ಮನಸಾರೆ ಆದಿ ಪ್ರೀತಿಯನ್ನು ಒಪ್ಪಿಕೊಂಡಿದ್ದೇನೆ ಎಂದು ಮನಸಲ್ಲೇ ಹೇಳಿಕೊಳ್ಳುತ್ತಾಳೆ.
ಇನ್ನೇನು ಭಾಗ್ಯ ಮತ್ತು ಆದಿ ಒಂದಾಗಬೇಕು ಎನ್ನುವಾಗಲೇ, ತಾಂಡವ್ ಗೆ ಶ್ರೇಷ್ಠಾಳ ನಿಜವಾದ ಬಣ್ಣ ಗೊತ್ತಾಗಿ, ಭಾಗ್ಯ ಬಳಿ ಬಂದು ಅವಳ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಿದ್ದಾನೆ. ಶ್ರೇಷ್ಠಾ ಮಾಡಿದ್ದೆಲ್ಲಾ ಮೋಸದ ಆಟ ಅನ್ನೋದು ಗೊತ್ತಾಗಿ, ಈಗ ಬದಲಾಗಿರುವ ತಾಂಡವ್ ನನ್ನು ಭಾಗ್ಯ ಕ್ಷಮಿಸಿ ಮತ್ತೆ ಒಂದಾಗ್ತಾಳಾ ಭಾಗ್ಯ ಅನ್ನೋದನ್ನು ಕಾದು ನೋಡಬೇಕು.
56
ಕ್ಲೈಮಾಕ್ಸ್ ಆಗ್ತಿದ್ಯಾ?
ಬದಲಾದ ತಾಂಡವ್ ನನ್ನು ನೋಡಿ ಸೀರಿಯಲ್ ಮುಗಿಯಲಿದೆ ಎನ್ನುವ ಸುದ್ದಿ ಕೇಳಿ ಬಂದಿತ್ತು. ಆದರೆ, ಸೀರಿಯಲ್ ಮುಕ್ತಾಯ ಕಾಣೋದಿಲ್ಲ ಎಂದು ಸುದರ್ಶನ್ ರಂಗಪ್ರಸಾದ್ ಸಂದರ್ಶನ ಒಂದರಲ್ಲಿ ಹೇಳಿದ್ದಾಳೆ. ಇದನ್ನು ಕೇಳಿ ವೀಕ್ಷಕರಂತೂ ಖುಷಿಯಾಗಿದ್ದಾರೆ. ಜೊತೆಗೆ ತಾಂಡವ್ ನನ್ನು ನಂಬದಂತೆ ಹಾಗೂ ಆದಷ್ಟು ಬೇಗ ಭಾಗ್ಯ ಮತ್ತು ಆದಿಯನ್ನು ಒಂದು ಮಾಡುವಂತೆ ಕೇಳಿದ್ದಾರೆ ಜನ.
66
ಮತ್ತೊಬ್ಬ ‘ಅನುಪಮಾ’ ಆಗ್ತಾಳ ಭಾಗ್ಯ
ಇನ್ನು ಭಾಗ್ಯಲಕ್ಷ್ಮೀ ಸೀರಿಯಲ್ ಸದ್ಯ ಮುಕ್ತಾಯ ಕಾಣುತ್ತಿಲ್ಲ ಅಂದ್ರೆ, ಭಾಗ್ಯ ಕೂಡ ಮತ್ತೊಬ್ಬ ‘ಅನುಪಮಾ’ ಆಗಿ ಬದಲಾಗುತ್ತಾಳೆಯೇ ಎನ್ನುವ ಕುತೂಹಲ ಮೂಡಿದೆ. ಹಿಂದಿಯ ಅನುಪಮಾ ಧಾರಾವಾಹಿ, ಕನ್ನಡದಲ್ಲೂ ಮೂಡಿ ಬರುತ್ತಿದೆ. ಇದು ಸೇಮ್ ಭಾಗ್ಯ ಕಥೆಯಂತೆಯೇ ಇದೆ. ಆ ಧಾರಾವಾಹಿಯಲ್ಲಿ ಅನುಪಮಾ ಎರಡನೇ ಮದುವೆಯಾಗಿ, ನಂತರ ಎರಡನೇ ಗಂಡನಿಂದಲೂ ಬೇರೆಯಾಗುವ ಕಥೆ ಇದೆ. ಕನ್ನಡದಲ್ಲೂ ಹಾಗೇ ಆಗುತ್ತಾ? ಯಾವುದಕ್ಕೂ ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.