ಧಾರಾವಾಹಿಗಳಲ್ಲಿ ಮಂಚ ಮುರಿಯೋ ಸೀನ್‌ ಹೇಗೆ ಶೂಟ್‌ ಆಗತ್ತೆ? ನೀವು ಅಂದುಕೊಂಡಂತೆ ಏನೂ ಆಗಲ್ಲ! BTS Video

Published : Feb 03, 2026, 02:41 PM IST

Bed Broke In Kannada Serial: ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಕೆಲವು ದೃಶ್ಯಗಳು ನೈಜತೆಯಿಂದ ಕಾಣಿಸಿದರೂ ಕೂಡ, ಅದರ ಹಿಂದೆ ತಂತ್ರವಿರುತ್ತದೆ, ಸಾಮಾನ್ಯ ಜನರಿಗೆ ಇದು ಹೇಗೆ ಎಂಬ ಡೌಟ್‌ ಬರುವುದು. ಫಸ್ಟ್‌ ನೈಟ್‌ ಸಮಯದಲ್ಲೋ, ಇನ್ಯಾವುದೋ ಸಮಯದಲ್ಲಿ ಮಂಚ ಮುರಿಯುವ ಹಾಗೆ ತೋರಿಸುತ್ತಾರೆ. ಇದು ಹೇಗೆ? 

PREV
16
ಇಂಟಿಮಸಿ ಕೋಆರ್ಡಿನೇಟರ್

ಇತ್ತೀಚಿನ ದಿನಗಳಲ್ಲಿ ಇಂಟಿಮಸಿ ಕೋಆರ್ಡಿನೇಟರ್ ಪಾತ್ರ ಬಹಳ ಮುಖ್ಯವಾಗಿದೆ. ಫಸ್ಟ್‌ ನೈಟ್‌ ದೃಶ್ಯ ಇದ್ದಾಗ ಅಥವಾ ಇನ್ಯಾವುದೋ ದೃಶ್ಯವಿದ್ದಾರೆ ನಟ-ನಟಿಯರಿಗೆ ಆ ಸನ್ನಿವೇಶ ಹೇಗೆ ಇದೆ ಎಂದು ವಿವರಿಸುವುದು ಸುಲಭ ಇಲ್ಲ. ಕಲಾವಿದರಿಗೆ ಮುಜುಗರ ಆಗದಂತೆ ನೋಡಿಕೊಳ್ಳಬೇಕು. ಶೂಟಿಂಗ್ ವೇಳೆ ಕಲಾವಿದರಿಗೆ ಸಂಪೂರ್ಣ ಸುರಕ್ಷತೆ, ಸೌಕರ್ಯ ಕೊಡಬೇಕು.

26
'ಕ್ಲೋಸ್ಡ್ ಸೆಟ್' ವಿಧಾನ

ಫಸ್ಟ್‌ನೈಟ್ ದೃಶ್ಯಗಳನ್ನು ಶೂಟಿಂಗ್ ಮಾಡುವಾಗ, ಅಲ್ಲಿ ಅನಗತ್ಯ ಜನರಿಗೆ ಪ್ರವೇಶ ಇರೋದಿಲ್ಲ. ಕೇವಲ ನಿರ್ದೇಶಕರು, ಕ್ಯಾಮೆರಾಮನ್, ಅಗತ್ಯ ತಾಂತ್ರಿಕ ವರ್ಗದವರು ಅಲ್ಲಿರುತ್ತಾರೆ. ಇದರಿಂದ ಕಲಾವಿದರಿಗೆ ಮುಕ್ತವಾಗಿ ನಟಿಸಲು ಸಾಧ್ಯ ಆಗುವುದು.

36
ಕ್ಯಾಮೆರಾ ಆಂಗಲ್, ಟ್ರಿಕ್

ತೆರೆಯ ಮೇಲೆ ಕಲಾವಿದರು ತುಂಬಾ ಹತ್ತಿರ ಇದ್ದಾರೆ ಎಂದು ಕಾಣಿಸಿದರೂ ಕೂಡ ವಾಸ್ತವದಲ್ಲಿ, ಅಂತರ ಕಾಯ್ದುಕೊಂಡಿರುತ್ತಾರೆ. ಕ್ಯಾಮೆರಾವನ್ನು ಒಂದು ನಿರ್ದಿಷ್ಟ ಕೋನದಲ್ಲಿ ಇಡ್ತಾರೆ. ಆಗ ಅವರು ಪರಸ್ಪರ ಸ್ಪರ್ಶಿಸುತ್ತಿದ್ದಾರೆ ಎಂಬ ಭ್ರಮೆ ಮೂಡಿಸಲಾಗುವುದು. ಇದನ್ನು 'ಸಿಮ್ಯುಲೇಟೆಡ್ ಆಕ್ಟಿಂಗ್' ಎಂದು ಕರೆಯುತ್ತಾರೆ.

46
ಬಾಡಿ ಡಬಲ್ಸ್ ಮತ್ತು ಪ್ರಾಸ್ಥೆಟಿಕ್ಸ್

ಕೆಲವೊಮ್ಮೆ ಕಲಾವಿದರಿಗೆ ಫಸ್ಟ್‌ನೈಟ್ ದೃಶ್ಯಗಳಲ್ಲಿ ನಟಿಸಲು ಇಷ್ಟವಿಲ್ಲದಿದ್ದರೆ ಅಥವಾ ಹೆಚ್ಚು ಅಶ್ಲೀಲತೆ ಬೇಡ ಎಂದರೆ, ಅವರ ಬದಲಿಗೆ ಅವರನ್ನೇ ಹೋಲುವ ಕಿರಿಯ ಕಲಾವಿದರನ್ನು ಬಳಸಲಾಗುತ್ತದೆ. ದೇಹದ ಭಾಗಗಳನ್ನು ಮುಚ್ಚಲು ಚರ್ಮವನ್ನೇ ಹೋಲುವ ಬಣ್ಣದ ಬಟ್ಟೆಗಳನ್ನು ಬಳಸಲಾಗುತ್ತದೆ.

56
ಮುಜುಗರ ತಪ್ಪಿಸಲು ಏನು ಮಾಡ್ತಾರೆ?

ಕಲಾವಿದರ ನಡುವೆ ದೈಹಿಕ ತಪ್ಪಿಸಲು ದಿಂಬುಗಳು ಅಥವಾ ತೆಳುವಾದ ಸಿಲಿಕಾನ್ ಪದರಗಳನ್ನು ಬಳಸಲಾಗುವುದು. ಇದು ಕ್ಯಾಮೆರಾ ಕಣ್ಣಿಗೆ ಕಾಣಿಸಲ್ಲ.

66
ಮಂಚ ಮುರಿಯುವುದು ಹೇಗೆ?

ಕಲಾವಿದರು ಬಹುತೇಕರು ಮಂಚದ ಮೇಲೆ ಮಲಗಿರೋದಿಲ್ಲ, ಬದಲಾಗಿ ಒಂದಿಷ್ಟು ಶೀಟ್‌ ಹಾಕಿ, ಅದಕ್ಕೆ ಹಗ್ಗ ಕಟ್ಟಿರುತ್ತಾರೆ. ಆಮೇಲೆ ಅದರ ಮೇಲೆ ದಪ್ಪನೆಯ ಬೆಡ್‌ ಹಾಕಿರುತ್ತಾರೆ. ಆ ದಾರ ಎಳೆದಾಗ ಮಂಚ ಮುರಿಯುವ ಹಾಗೆ ಕಾಣುವುದು, ಅಸಲಿಗೆ ಮಂಚ ಮುರಿಯೋದಿಲ್ಲ. ರಿಯಲ್‌ ಆಗಿ ಮನೆಗಳಲ್ಲಿ ಮಂಚ ಮುರಿಯೋದನ್ನು ನೋಡಿದ್ದೀರಾ?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories