Lakshmi Nivasa Serial: ಜಯಂತ್​ ಕಥೆ ಮುಗಿಸಲು ಬಂದ ಪ್ರೇತಾತ್ಮ! ಮಧ್ಯರಾತ್ರಿ ಬೆಚ್ಚಿಬಿದ್ದ ಸೈಕೋ

Published : Feb 03, 2026, 02:08 PM IST

ಲಕ್ಷ್ಮೀ ನಿವಾಸದಲ್ಲಿ ಲಲಿತಾಳನ್ನು ಕೊಂದಿರುವ ಜಯಂತ್, ಸಾಕ್ಷ್ಯ ನಾಶವಾಗಿದೆ ಎಂದು ಭಾವಿಸಿದ್ದಾನೆ. ಆದರೆ, ಮಾಡಿದ ತಪ್ಪಿನ ಗಿಲ್ಟ್‌ನಿಂದಾಗಿ ಅವನಿಗೆ ಲಲಿತಾಳ ಪ್ರೇತಾತ್ಮ ಕಾಡುತ್ತಿದ್ದು, ಈ ಭಯದಿಂದ ತನ್ನ ತಪ್ಪನ್ನು ಒಪ್ಪಿಕೊಳ್ಳುವನೇ ಎಂಬ ಪ್ರಶ್ನೆ ಮೂಡಿದೆ.

PREV
16
ನೆಮ್ಮದಿ ಇಲ್ಲದ ಬದುಕು

ಲಕ್ಷ್ಮೀ ನಿವಾಸದಲ್ಲಿ ಸದ್ಯ ಲಲಿತಾಳನ್ನು ಸಾವಿನ ಬಾಯಿಗೆ ನೂಕಿರುವ ಜೈಯಂತ್​ಗೆ ನೆಮ್ಮದಿ ಇಲ್ಲದಾಗಿದೆ. ಇದಾಗಲೇ ಸಂತೋಷ್​ ಈ ವಿಡಿಯೋ ರೆಕಾರ್ಡ್​ ಮಾಡಿಕೊಂಡು ಜಯಂತ್​ಗೆ ಬ್ಲ್ಯಾಕ್​ಮೇಲ್​ ಮಾಡಿ ದುಡ್ಡನ್ನು ವಸೂಲಿ ಮಾಡಿಯಾಗಿದೆ.

26
ಜಯಂತ್​ಗೆ ಪ್ರೇತಾತ್ಮದ ಆಟ

ಈಗ ಅದರ ಸಾಕ್ಷ್ಯಾಧಾರಗಳೆಲ್ಲವೂ ನಾಶವಾಗಿದೆ ಎನ್ನುವ ಸಂತೋಷದಲ್ಲಿ ಜಯಂತ್​ ಇದ್ದರೂ, ಪ್ರೇತಾತ್ಮ ಅವನನ್ನು ಬದುಕಲು ಬಿಡುತ್ತಿಲ್ಲ. ಲಲಿತಾನನ್ನು ಸಾಯಿಸಿದ ನಿನ್ನನ್ನು ನಾನು ಸಾಯಿಸುತ್ತೇನೆ ಎಂದು ಆತ್ಮವೊಂದು ಮಧ್ಯರಾತ್ರಿ ಜಯಂತ್​ಗೆ ಬಂದು ಕಾಟ ಕೊಟ್ಟಿದೆ.

36
ಅಚಾನಕ್​ ಘಟನೆ

ಇದನ್ನು ನೋಡಿ ಜಯಂತ್​ ಬೆಚ್ಚಿ ಬಿದ್ದಿದ್ದಾನೆ. ಅಷ್ಟಕ್ಕೂ ಯಾವುದೇ ಅಪರಾಧ ಕಾರ್ಯ ಎಸಗಿದಾಗ, ಹವ್ಯಾಸಿ ಅಪರಾಧಿಗಳಿಗೆ ಇದು ದೊಡ್ಡ ವಿಷಯವಾಗುವುದಿಲ್ಲ. ಅವರಿಗೆ ಇವೆಲ್ಲಾ ಮಾಮೂಲು ಆಗಿರುತ್ತದೆ. ಆದರೆ ಅಚಾನಕ್​ ಆಗಿ ಅಪರಾಧ ಸಂಭವಿಸಿದರೆ ಅದು ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿರುತ್ತದೆ.

46
ಜಯಂತ್​ಗೆ ಗಿಲ್ಟ್​

ಅದರಲ್ಲಿಯೂ ಒಬ್ಬರ ಪ್ರಾಣ ತೆಗೆಯುವುದು ಎಂದರೆ ಸುಲಭದ ಮಾತಲ್ಲ. ಅದೇ ಗಿಲ್ಟ್​ ಜಯಂತ್​ನನ್ನು ಕಾಡುತ್ತಿದೆ. ಇದೇ ಕಾರಣಕ್ಕೆ ಪ್ರೇತಾತ್ಮ ಬಂದ ರೀತಿಯಲ್ಲಿ ಅವನಿಗೆ ಕಾಣಿಸಿದೆ.

56
ಪ್ರೇತಾತ್ಮದ ಬಗ್ಗೆ ಶಾಂತಮ್ಮ

ಮಲಗಲು ಆಗದೇ ಶಾಂತಮ್ಮನಿಗೆ ಪ್ರೇತಾತ್ಮ ಇರೋದು ನಿಜನಾ ಎಂದು ಪ್ರಶ್ನಿಸಿದಾಗ, ಆಕೆ ಹೌದು. ಯಾವುದಾದರೂ ಆತ್ಮಕ್ಕೆ ನೆಮ್ಮದಿ ಸಿಗದಾಗ ಹೀಗೆ ಬರುತ್ತದೆ ಎಂದಿದ್ದಾಳೆ.

66
ತಪ್ಪು ಒಪ್ಪಿಕೊಳ್ತಾನಾ

ಇದನ್ನು ಕೇಳಿದಾಗಲಂತೂ ಜಯಂತ್​ ಬೆಚ್ಚಿಬಿದ್ದಿದ್ದಾನೆ. ಈಗ ಮಾಡಿರೋ ತಪ್ಪನ್ನು ಒಪ್ಪಿಕೊಳ್ತಾನಾ ಸೈಕೊ?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories