ಭಾಗ್ಯಲಕ್ಷ್ಮಿ ಸೀರಿಯಲ್ ಮುಗಿಯುವುದಿಲ್ಲ ಎಂದು ನಟಿ ಸುಷ್ಮಾ ಸ್ಪಷ್ಟಪಡಿಸಿದ್ದಾರೆ. ಸದ್ಯದ ಕಥೆಯಲ್ಲಿ, ಶ್ರೇಷ್ಠಾ ಆತ್ಮಹತ್ಯೆಗೆ ಯತ್ನಿಸುತ್ತಿದ್ದರೆ, ಇನ್ನೊಂದೆಡೆ ಭಾಗ್ಯ ಮತ್ತು ಆದಿ ಅವರ ರೊಮ್ಯಾಂಟಿಕ್ ಡಾನ್ಸ್ ವಿಡಿಯೋ ವೈರಲ್ ಆಗಿದೆ. ಈ ಬೆಳವಣಿಗೆಯು ತಾಂಡವ್ ಭವಿಷ್ಯದ ಬಗ್ಗೆ ಕುತೂಹಲ ಮೂಡಿಸಿದೆ.
ಭಾಗ್ಯಲಕ್ಷ್ಮಿ ಸೀರಿಯಲ್ ಇನ್ನೇನು ಮುಗಿದೇ ಹೋಗತ್ತೆ ಎನ್ನುವಾಗಲೇ ಭಾಗ್ಯ ಪಾತ್ರಧಾರಿ ಸುಷ್ಮಾ ಕೆ. ರಾವ್ ಅವರು, ಸೀರಿಯಲ್ ಇಷ್ಟು ಬೇಗ ಮುಗಿಯಲ್ಲ ಎಂದು ಹೇಳಿಕೊಂಡಿದ್ದರು.
26
ಟ್ವಿಸ್ಟ್ ಮೇಲೆ ಟ್ವಿಸ್ಟ್
ಆದರೆ, ಇದೀಗ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸೀರಿಯಲ್‌ನಲ್ಲಿ ಸಿಗುತ್ತಿದೆ. ಮಗಳು ತನ್ವಿಯ ಒತ್ತಾಯದ ಮೇಲೆ ತಾಂಡವ್‌ನನ್ನು ಮನೆಗೆ ಕರೆದಿದ್ದಾಳೆ ಭಾಗ್ಯ. ಅಮ್ಮ ಸುನಂದಾಗೂ ಮಗಳು-ಅಳಿಯ ಒಂದಾಗಲಿ ಎನ್ನುವ ಆಸೆ.
36
ಸಾಯ್ತಾಳಾ ಶ್ರೇಷ್ಠಾ?
ಅದೇ ಇನ್ನೊಂದೆಡೆ, ಅವಮಾನದಿಂದ ಕೊತ ಕೊತ ಕುದಿಯುತ್ತಿರೋ ಶ್ರೇಷ್ಠಾ ಸಾಯಲು ಕಟ್ಟಡ ಏರಿದ್ದಾಳೆ. ಅಷ್ಟಕ್ಕೂ ಅವಳೇನು ಸಾಯಲ್ಲ ಎನ್ನುವುದೂ ಅಷ್ಟೇ ನಿಜ. ಆದರೆ ಸದ್ಯದ ಪ್ರೊಮೋ ನೋಡಿದಾಗ ಅವಳು ಸಾಯಲು ಹೊರಟಿದ್ದಾಳೆ.
ಅದರ ನಡುವೆಯೇ, ಭಾಗ್ಯ ಮತ್ತು ಆದಿ ಜೊತೆಯಲಿ... ಜೊತೆಯಾಗಿ ಹಿತವಾಗಿ...ಹಾಡಿಗೆ ರೊಮಾನ್ಸ್ ಮಾಡಿದ್ದು, ಅದರ ವಿಡಿಯೋ ಇದೀಗ ವೈರಲ್ ಆಗಿದೆ. ಇದನ್ನು ನೋಡಿದ್ರೆ ಸೀರಿಯಲ್‌ನಲ್ಲಿ ಆದಿ ಮತ್ತು ಭಾಗ್ಯಾ ಒಂದಾಗ್ತಾರಾ ಎನ್ನುವ ಪ್ರಶ್ನೆ ವೀಕ್ಷಕರನ್ನು ಕಾಡ್ತಿದೆ.
56
ತಮಾಷೆ ಮಾಡುವ ನಟಿ
ಅಷ್ಟಕ್ಕೂ ಭಾಗ್ಯ ಪಾತ್ರಧಾರಿ ಸುಷ್ಮಾ ಕೆ.ರಾವ್ ಅವರು ಸದಾ ತಮಾಷೆ ಮಾಡುತ್ತಲೇ ಇರುತ್ತಾರೆ. ಅದರಂತೆ ಆದಿ ಪಾತ್ರಧಾರಿಯಾಗಿರುವ ಹರೀಶ್ ರಾಜ್ ಕೂಡ ಡಾನ್ಸ್ ಮಾಡುವುದರಲ್ಲಿ ಮುಂದು. ಅದೇ ಕಾರಣಕ್ಕೆ ಇವರಿಬ್ಬರೂ ಸೇರಿ ಶೂಟಿಂಗ್ ಸೆಟ್‌ನಲ್ಲಿ ಈ ಹಾಡಿಗೆ ಸ್ಟೆಪ್ ಹಾಕುವುದನ್ನು ನೋಡಬಹುದಾಗಿದೆ.
66
ತಾಂಡವ್ ಕಥೆ ಗೋವಿಂದ
ಶೂಟಿಂಗ್ ಸೆಟ್‌ನಲ್ಲಿ ಅವರಿಬ್ಬರ ನಡುವೆ ಕ್ಯಾಮೆರಾಮನ್ ಬಂದು ತಮಾಷೆಗೆ ಡಿಸ್ಟರ್ಬ್ ಮಾಡುವುದನ್ನೂ ನೋಡಬಹುದು. ಇವರಿಬ್ಬರ ಡಾನ್ಸ್ ನೋಡಿದ ವೀಕ್ಷಕರು, ಶ್ರೇಷ್ಠಾ ಸತ್ತಳು, ಇವರಿಬ್ಬರು ರೊಮಾನ್ಸ್ ಮಾಡಿದರೆ ತಾಂಡವ್ ಕಥೆ ಗೋವಿಂದ ಅನ್ನುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.