'ಭಾಗ್ಯಲಕ್ಷ್ಮಿ' ಬಿಟ್ಟು 'ಆದಿಲಕ್ಷ್ಮಿ'ಗೆ ಎಂಟ್ರಿ ಕೊಟ್ಟ ನಟಿ ಆಶಾ ಅಯ್ಯನಾರ್​ : Adilakshmi Purana- ಏನಿದು ಸ್ಟೋರಿ?

Published : Nov 11, 2025, 10:23 PM IST

'ಭಾಗ್ಯಲಕ್ಷ್ಮಿ' ಸೀರಿಯಲ್‌ನಲ್ಲಿ ಪೂಜಾ ಪಾತ್ರಕ್ಕೆ ಬಣ್ಣ ಹಚ್ಚಿದ್ದ ನಟಿ ಆಶಾ ಅಯ್ಯನಾರ್, ಇದೀಗ 'ಆದಿಲಕ್ಷ್ಮಿ ಪುರಾಣ' ಸೀರಿಯಲ್ ಮೂಲಕ ಜೀ ಕನ್ನಡದಲ್ಲಿ ಲಕ್ಷ್ಮಿಯಾಗಿ ಕಾಣಿಸಿಕೊಂಡಿದ್ದಾರೆ.  ಲಕ್ಷ್ಮಿ ತನ್ನ ಪತಿ ಆದಿಯಿಂದ ತಿರಸ್ಕರಿಸಲ್ಪಟ್ಟಿದ್ದು, ಗಂಡನ ಮನವೊಲಿಸುವ ಸವಾಲನ್ನು ಎದುರಿಸಲಿದ್ದಾಳೆ.

PREV
16
ಪೂಜಾ ಈಗ ಲಕ್ಷ್ಮಿ

ಕಲರ್ಸ್​ ಕನ್ನಡದ ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ನಾಯಕಿ ಭಾಗ್ಯಳ ತಂಗಿಯಾಗಿ ಪೂಜಾ ಆಗಿ ನಟಿಸಿದ್ದ ನಟಿ ಆಶಾ ಅಯ್ಯನಾರ್​ ಏಕಾಏಕಿ ಸೀರಿಯಲ್​ ಬಿಟ್ಟು ಎಲ್ಲರಿಗೂ ಶಾಕ್​ ಕೊಟ್ಟಿದ್ದರು. ಅವರು ಬಿಗ್​ಬಾಸ್​ಗೆ ಹೋಗಲಿದ್ದಾರೆ ಎಂದೂ ಸುದ್ದಿಯಾಗಿತ್ತು.

26
ಸೀರಿಯಲ್​ ಬಿಟ್ಟಿದ್ದ ನಟಿ

ಆದರೆ, ಸೀರಿಯಲ್​ ಯಾಕೆ ಬಿಟ್ಟಿದ್ದು ಎನ್ನೋದನ್ನು ಮಾತ್ರ ಸೀಕ್ರೇಟ್​ ಆಗಿಯೇ ಇಟ್ಟಿದ್ದರು ನಟಿ. ಇದೀಗ ಕಲರ್ಸ್​ ಕನ್ನಡದಿಂದ ಜೀ ಕನ್ನಡಕ್ಕೆ ನಟಿ ಹಾರಿದ್ದಾರೆ. ಭಾಗ್ಯಲಕ್ಷ್ಮಿಯಲ್ಲಿ ಪೂಜಾ ಆಗಿದ್ದ ನಟಿ ಈಗ ಆದಿಲಕ್ಷ್ಮಿ ಪುರಾಣ ಸೀರಿಯಲ್​ನಲ್ಲಿ ಲಕ್ಷ್ಮಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಲೀಡ್​ ರೋಲ್​ ಇರುವ ಕಾರಣ, ಭಾಗ್ಯಲಕ್ಷ್ಮಿಯ ಸೈಡ್​ ರೋಲ್​​ ಬಿಟ್ಟಿರುವುದು ತಿಳಿಯುತ್ತದೆ.

36
ಲಕ್ಷ್ಮಿಯ ಎಂಟ್ರಿ

ಕಾಲೇಜಿನ ಫೆಸ್ಟಿವಲ್​ನಲ್ಲಿ ಆದಿಯ ರ್ಯಾಪ್​ ಸಾಂಗ್​ ನಡೆದಿರುತ್ತದೆ. ಅಲ್ಲಿಗೆ ಲಕ್ಷ್ಮಿಯ ಎಂಟ್ರಿಯಾಗುತ್ತದೆ. ಇದು ಕದ್ದಿರೋ ಹಾಡು. ಮೂಲ ಹಾಡು ಬೇರೆಯದ್ದೇ ಇದೆ ಎನ್ನುತ್ತಾಳೆ. ಆಗ ಸೀರಿಯಲ್​​ ವಿಲನ್​, ಇವಳೊಬ್ಬಳು ಹಳ್ಳಿ ಬಸ್​ ಹತ್ತಿಕೊಂಡು ಬಂದಿದ್ದಾಳೆ ಎಂದು ಮೂದಲಿಸುತ್ತಾಳೆ.

46
ಎಲ್ಲರಿಂದ ಚಪ್ಪಾಳೆ

ಬಳಿಕ ಲಕ್ಷ್ಮೀ ವೇದಿಕೆಯ ಮೇಲೆ ಹೋಗಿ ಮೂಲ ಹಾಡನ್ನು ಹಾಡಿದಾಗ ಎಲ್ಲರಿಂದಲೂ ಚಪ್ಪಾಳೆ ಬರುತ್ತದೆ. ಮನೆಗೆ ಬಂದು ಪೂರಿ ಹಾಕುವಾಗ, ಅತ್ತ ಒಬ್ಬಾತ ಅದು ಬೇಡ ಎಂದು ಸಿಟ್ಟಿನಿಂದ ಕೈಹಿಡಿದುಕೊಳ್ಳುತ್ತಾನೆ. ಅಲ್ಲಿಗೆ ಆದಿ ಮತ್ತು ಲಕ್ಷ್ಮೀ ಇಬ್ಬರೂ ದಂಪತಿ ಎನ್ನುವುದು ತಿಳಿಯುತ್ತದೆ.

56
ಹೆಂಡತಿಯಾಗಿ ನೋಡಲ್ಲ

ಅತಿ ಚಿಕ್ಕ ವಯಸ್ಸಿನವರಂತೆ ಕಾಣುವ ಆದಿಗೆ ಮದ್ವೆಯಾಗಿದ್ಯಾ ಎನ್ನೋದು ಈಗಿರುವ ಕುತೂಹಲ. ನಿನ್ನೆ ಕಾಲೇಜಿನಲ್ಲಿ ಇನ್​ಸಲ್ಟ್​ ಮಾಡಿ ಈಗ ನೈಸ್​ ಮಾಡುತ್ತಿದ್ದೀಯಾ ಎನ್ನುತ್ತಲೇ, ಆಕೆಗೆ ಬೈದು ರೀ ಗೀ ಹೇಳಬೇಡ. ನಿನ್ನನ್ನು ನಾನು ಎಂದಿಗೂ ಹೆಂಡತಿಯಾಗಿ ನೋಡಲು ಸಾಧ್ಯವೇ ಇಲ್ಲ ಎನ್ನುತ್ತಾ ಹೋಗುತ್ತಾನೆ.

66
ಇಲ್ಲೂ ಅದೇ ಕಥೆನಾ?

ಅಲ್ಲಿ ಲಕ್ಷ್ಮೀ ಅಳುತ್ತಾಳೆ. ಮಾವನಿಂದ ಕಾಯಬೇಕು ಎನ್ನುವ ತಾಳ್ಮೆ. ಒಟ್ಟಿನಲ್ಲಿ ಇಲ್ಲಿಯೂ ಗಂಡ-ಹೆಂಡತಿ ಆದರೂ ಒಟ್ಟಿಗೆ ಬಾಳ್ವೆ ನಡೆಸಲ್ಲ. ಗಂಡನನ್ನು ಒಲಿಸಿಕೊಳ್ಳಲು ಹೆಂಡತಿ ಜೀವನಪೂರ್ತಿ ಸವೆಸಬೇಕು ಎನ್ನುವ ಅರ್ಥದಲ್ಲಿಯೇ ಇನ್ನೊಂದು ಸೀರಿಯಲ್​ ಬಂದ ಹಾಗೆ ಕಾಣಿಸುತ್ತಿದೆ!

ಇದರ ಪ್ರೊಮೋ ನೋಡಿ ಇಲ್ಲಿ ಕ್ಲಿಕ್​ ಮಾಡಿ

Read more Photos on
click me!

Recommended Stories