ಬಿಗ್ ಬಾಸ್ ಸೀನಸ್ 12 ಮುಗಿದಿದ್ದು, 13ಕ್ಕೆ ಈಗಿನಿಂದ್ಲೇ ತಯಾರಿ ಶುರುವಾಗಿದೆ. ಬಿಗ್ ಬಾಸ್ ಮನೆಗೆ ಹೋಗಲು ಪ್ರತಿಯೊಬ್ಬರೂ ಕನಸು ಕಾಣ್ತಿದ್ದಾರೆ. ರಘು ಪತ್ನಿ ಗ್ರೀಷ್ಮಾ ಒಂದು ಹೆಜ್ಜೆ ಮುಂದಿದ್ದು,ಪ್ರಾಕ್ಟೀಸ್ ಶುರು ಮಾಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada Season 12) ಯಶಸ್ವಿಯಾಗಿ ಮುಗಿದಿದೆ. ಸೀನಸ್ 13 ಬರೋಕೆ ಇನ್ನೊಂದಿಷ್ಟು ತಿಂಗಳು ಫ್ಯಾನ್ಸ್ ಕಾಯ್ಲೇಬೇಕು. ಆದ್ರೆ ಬಿಗ್ ಬಾಸ್ ಗೆ ಹೋಗಲು ಸೆಲೆಬ್ರಿಟಿಗಳು ಈಗಿನಿಂದ್ಲೇ ತಯಾರಿ ಶುರು ಮಾಡಿದ್ದಾರೆ. ಗಿಲ್ಲಿಗೆ ಬಿಗ್ ಬಾಸ್ 11 ಮುಗಿಯುತ್ತಿದ್ದಂತೆ 12ಕ್ಕೆ ಆಹ್ವಾನ ಸಿಕ್ಕಿತ್ತು. ಅದೇ ರೀತಿ ಈ ಬಾರಿ ಕೂಡ ಕಲರ್ಸ್ ಕನ್ನಡ ಒಂದಿಷ್ಟು ಸ್ಪರ್ಧಿಗಳನ್ನು ಈಗ್ಲೇ ಬುಕ್ ಮಾಡುವ ಸಾಧ್ಯತೆ ಇದೆ.
26
ಸ್ಪರ್ಧಿಗಳ ಪತ್ನಿಗಳ ಮೇಲೆ ಕಣ್ಣು?
ಬಿಗ್ ಬಾಸ್ ಮಾಜಿ ಸ್ಪರ್ಧಿಗಳ ಪತ್ನಿಯರ ಮೇಲೆ ಕಲರ್ಸ್ ಕನ್ನಡ ಒಂದು ಕಣ್ಣಿಟ್ಟಿರುತ್ತೆ. ತುಕಾಲಿ ಸಂತೋಷ್ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾಗಿ ಮನೆಯೊಳಗೆ ಪ್ರವೇಶ ಮಾಡಿದ್ದರು. ಬಿಗ್ ಬಾಸ್ ಸೀಸನ್ 11 ರಲ್ಲಿ ತುಕಾಲಿ ಸಂತೋಷ್ ಪತ್ನಿ ಮಾನಸಾ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದರು. ಬಿಗ್ ಬಾಸ್ ನಲ್ಲಿ ಇಂಥದ್ದು ನಡೆಯೋ ಸಾಧ್ಯತೆ ಹೆಚ್ಚು.
36
ಬಿಗ್ ಬಾಸ್ ಗೆ ಹೋಗ್ತಾರಾ ರಘು ಪತ್ನಿ ?
ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ, ಟಾಪ್ 5 ಸ್ಪರ್ಧಿ ರಘು ಕೋಟ್ಯಾಂತರ ಅಭಿಮಾನಿಗಳನ್ನು ಪಡೆಯೋದ್ರಲ್ಲಿ ಯಶಸ್ವಿಯಾಗಿದ್ದಾರೆ. ರಘು ಬಿಗ್ ಬಾಸ್ ಜರ್ನಿ ಮುಗಿದಿದೆ. ಈಗೇನಿದ್ರು ರಘು ಪತ್ನಿ ಸರದಿ. ರಘು ಪತ್ನಿ ಗ್ರೀಷ್ಮಾ ಅವರಿಗೆ ಬಿಗ್ ಬಾಸ್ ಗೆ ಹೋಗುವ ಮನಸ್ಸಿದ್ದಂತಿದೆ. ಬಿಗ್ ಬಾಸ್ ಗೆ ಗ್ರೀಷ್ಮಾ ಫಿಟ್ ಕೂಡ ಆಗ್ತಾರೆ.
ಬಿಗ್ ಬಾಸ್ ಶೋಗೆ ಯಾರಿಗೆ ಆಹ್ವಾನ ಬರುತ್ತೆ ಹೇಳೋಕೆ ಸಾಧ್ಯವಿಲ್ಲ. ರಘು ಪತ್ನಿ ಗ್ರೀಷ್ಮಾಗೆ ಬಿಗ್ ಬಾಸ್ ಮನೆ ಸೇರುವ ಅವಕಾಶ ಸಿಕ್ಕಿದ್ರೂ ಸಿಗ್ಬಹುದು. ಇದಕ್ಕೆ ಗ್ರೀಷ್ಮಾ ಈಗಿನಿಂದಲೇ ತಯಾರಿ ನಡೆಸಿದ್ದಾರೆ. ಜಿಮ್ ಕ್ಲೀನ್ ಮಾಡ್ತಾ ಗ್ರೀಷ್ಮಾ, ತಮಾಷೆ ಮಾಡಿದ್ದಾರೆ. ಮುಂದೆ ಬಿಗ್ ಬಾಸ್ ಮನೆಗೆ ಹೋಗೋಕೆ ಈಗಿನಿಂದ್ಲೇ ತಯಾರಿ ನಡೆಸ್ತಿದ್ದೇನೆ ಎಂದಿದ್ದಾರೆ.
56
ಗ್ರೀಷ್ಮಾಗೆ ಫ್ಯಾನ್ಸ್ ಸಲಹೆ
ಗ್ರೀಷ್ಮಾ ವಿಡಿಯೋ ನೋಡಿದ ಫಾಲೋವರ್ಸ್, ಅವರ ಆಪ್ತರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಬಿಗ್ ಬಾಸ್ ಗೆ ಹೋದ್ರೆ ನಮ್ಮ ಸಪೋರ್ಟ್ ನಿಮಗೆ ಎಂದಿದ್ದಾರೆ. ಮತ್ತೆ ಕೆಲವರು ಬಿಗ್ ಬಾಸ್ ಗೆ ಹೋಗ್ಬೇಡಿ, ಅಲ್ಲಿ ತಮಾಷೆಗೆ ಮಾತ್ರ ವಾಲ್ಯೂ ಇರೋದು, ನೀವು ಸಿನಿಮಾದಲ್ಲಿ ಆಕ್ಟ್ ಮಾಡಿ ಎಂದಿದ್ದಾರೆ. ಇನ್ನು ಕೆಲವರು ಗ್ರೀಷ್ಮಾ ಅವರನ್ನು ಸಪ್ತಮಿ ಗೌಡ ಅವರಿಗೆ ಹೋಲಿಕೆ ಮಾಡಿದ್ದಾರೆ. ಗ್ರೀಷ್ಮಾ ಅವರಿಗೆ ಸಿನಿಮಾಗೆ ಹೋಗುವ ಕ್ವಾಲಿಟಿ ಇದೆ, ತುಂಬಾ ಸುಂದರವಾಗಿದ್ದಾರೆ ಎನ್ನುವ ಕಮೆಂಟ್ಸ್ ಬಂದಿದೆ.
66
ಮಾಡೆಲ್ ಗ್ರೀಷ್ಮಾ
ಬಿಗ್ ಬಾಸ್ ಮನೆಗೆ ರಘು ಹೋಗ್ತಿದ್ದಂತೆ ಅವರ ಪತ್ನಿ ಕೂಡ ಮತ್ತಷ್ಟು ಪ್ರಸಿದ್ಧಿಗೆ ಬಂದ್ರು. ರಘು ಹಿನ್ನಲೆ ಹುಡುಕಿದಾಗ ಸಿಕ್ಕಿದ್ದು ಸುಂದರವಾಗಿರುವ ಅವರ ಪತ್ನಿ ಗ್ರೀಷ್ಮಾ. ಯಾವ ಹೀರೋಯಿನ್ ಗೂ ಕಮ್ಮಿ ಇಲ್ಲದ ಗ್ರೀಷ್ಮಾ, ಬಿಗ್ ಬಾಸ್ ಮನೆಗೆ ಬಂದಾಗ ಅವರ ಫ್ಯಾನ್ಸ್ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಮೂಲತಃ ಮಾಡೆಲ್ ಆಗಿರುವ ಗ್ರೀಷ್ಮಾ, ಪತಿ ಜಿಮ್ ನಲ್ಲಿ ಟ್ರೈನರ್ ಕೂಡ ಹೌದು . ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಗಳಲ್ಲಿ ಗ್ರೀಷ್ಮಾ ಕಾಣಿಸಿಕೊಳ್ತಾರೆ. ಗ್ರೀಷ್ಮಾ ಅವರು ಬಿಗ್ ಬಾಸ್ ಗೆ ಹೋಗುವ ಬಹುತೇಕ ಎಲ್ಲ ಕ್ವಾಲಿಟಿ ಹೊಂದಿದ್ದಾರೆ. ಸುಂದರವಾಗಿರುವ ಜೊತೆಗೆ ಟಾಸ್ಕ್ ನಲ್ಲಿಯೂ ಉತ್ತಮ ಪ್ರದರ್ಶನ ತೋರಿಸೋ ಸಾಧ್ಯತೆ ಇದೆ. ಅದೇನೇ ಇರಲಿ, ಈಗ ರಘು ಜೊತೆ ಗ್ರೀಷ್ಮಾ ಅವರಿಗೂ ಒಂದಿಷ್ಟು ಸಿನಿಮಾ, ಸೀರಿಯಲ್ ಆಫರ್ ಬರುವ ಸಾಧ್ಯತೆ ಹೆಚ್ಚಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.