ಹೆಂಡ್ತಿಗೆ ಅವಮಾನ ಮಾಡಲು ರೆಡಿಯಾಗಿದ್ದ ತಾಂಡವ್’ಗೆ ಮುಖಭಂಗ…ನಟಿ ಶ್ರೀದೇವಿಯ ಇಂಗ್ಲಿಷ್ ವಿಂಗ್ಲಿಷ್ ಸಿನಿಮಾ ನೆನಪಿಸಿದ ಭಾಗ್ಯ!

First Published | Nov 4, 2024, 3:44 PM IST

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಎಲ್ಲರೆದುರು ಭಾಗ್ಯಳನ್ನು ಅವಮಾನ ಮಾಡಲು ತಯಾರಾಗಿದ್ದ ತಾಂಡವ್ ಗೆ ಇದೀಗ ಮುಖಭಂಗವಾಗಿದೆ. ಯಾಕಂದ್ರೆ ಭಾಗ್ಯ ಅವಮಾನವನ್ನ ಆತ್ಮವಿಶ್ವಾಸದಿಂದ ಗೆದ್ದಿದ್ದಾಳೆ. 
 

ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯಳನ್ನು ಸಾಧ್ಯವಾದಷ್ಟು ಎಲ್ಲಾರೆದುರು ಕೀಳಾಗಿ ತೋರಿಸೋದಕ್ಕೆ ತಾಂಡವ್ ಏನೆಲ್ಲಾ ಸಾಧ್ಯಾನೋ ಅದನ್ನೆಲ್ಲಾ ಮಾಡ್ತಾನೆ. ಆದ್ರೆ ಮತ್ತೆ ಮತ್ತೆ ಸೋಲುತ್ತಾ ಎಲ್ಲರೆದುರು ಭಾಗ್ಯಗೆ ಗೆಲುವಾಗುತ್ತಾ ಹೋಗುತ್ತೆ. ಸದ್ಯ ತಾಂಡವ್ ಮನೆಯಲ್ಲಿ ಪಾರ್ಟಿ ನಡೆಯುತ್ತಿದ್ದು, ಅಲ್ಲಿವರೆಗೂ ತುಂಬಾನೆ ಒಳ್ಳೆಯವನಂತೆ ನಟಿಸುತ್ತಿದ್ದ ತಾಂಡವ್ ಭಾಗ್ಯಳಿಗೆ ಮಿನಿ ಡ್ರೆಸ್ ಕೊಟ್ಟು ಅದನ್ನ ಧರಿಸುವಂತೆ ಹೇಳಿದ್ದಾನೆ. ಆಕೆ ಅದನ್ನೇ ಧರಿಸಿಕೊಂಡು ಬರ್ತಾಳೆ, ಎಲ್ಲರೆದುರು ಮಾನ, ಮಾರ್ಯದೆ ಹೋಗುತ್ತೆ ಅಂತ ಕಾಯ್ತಿದ್ದ ತಾಂಡವ್ ಗೆ ಮುಖಭಂಗವಾಗಿದೆ. 
 

ಯಾಕಂದ್ರೆ ಸೀರೆಯುಟ್ಟು, ತಲೆಗೆ ಹೂಮುಡಿದು ಎಂದಿನಂತೆ ಬರುವ ಭಾಗ್ಯ. ತಾನು ಹೇಗಿದ್ದೇನೋ ಹಾಗೆಯೇ ತನ್ನನ್ನು ತೋರಿಸಿಕೊಳ್ಳೋಕೆ ಇಷ್ಟ ಅನ್ನೋದನ್ನ ತೋರಿಸಿದ್ದಾಳೆ. ಜೊತೆಗೆ ಭಾಗ್ಯಾಗೆ ಅವಮಾನ ಮಾಡಲೆಂದೇ ಮನೆಗೆ ಕೆಲವರನ್ನು ಕರೆದುಕೊಂಡು ಬಂದಿದ್ದ ತಾಂಡವ್ ಗೆ ಮತ್ತಷ್ಟು ಅವಮಾನ ಆಗಿದ್ದಂತು ಸುಳ್ಳಲ್ಲ. ಇನ್ನೊಂದೆಡೆ ಭಾಗ್ಯಳ ಬಳಿ ಇಂಗ್ಲಿಷ್ ನಲ್ಲಿ ಮಾತನಾಡಲು ಕೂಡ ಕೆಲವರಲ್ಲಿ ಕೇಳಿಕೊಂಡಿದ್ದ ತಾಂಡವ್. ಇಂಗ್ಲಿಷ್ ನಲ್ಲಿ ಮಾತಾಡಿದ್ರೆ, ಭಾಗ್ಯಾಗೆ ಏನು ಅರ್ಥಾನೆ ಆಗೋದಿಲ್ಲ, ಇದರಿಂದ ಮಾರ್ಯದೆ ಹೋಗುತ್ತೆ ಅಂತ ಕಾಯ್ತಿದ್ದ ತಾಂಡವ್ ಗೆ ಅಲ್ಲೂ ಕೂಡ ಸೋಲಾಗಿದೆ. 
 

Tap to resize

ಇಂಗ್ಲಿಷ್ ನಲ್ಲಿ ಮಾತನಾಡುತ್ತಾ, ಭಾಗ್ಯಳಿಗೆ ಬರ್ಗರ್ ಅಂದ್ರೆ ಏನು ಅಂತ ಗೊತ್ತಾ ಎಂದು ತಮಾಷೆ ಮಾಡುತ್ತಿದ್ದ ಹೆಂಗಸಿನ ಬಳಿ, ತನಗಾದ ಅವಮಾನವನ್ನೇ ಆತ್ಮವಿಶ್ವಾಸದಿಂದ ಗೆಲ್ಲುತ್ತಾ, ಇಂಗ್ಲಿಷ್ ನಲ್ಲೇ ಉತ್ತರ ಕೊಡುತ್ತಾಳೆ ಭಾಗ್ಯ. ಇಂಗ್ಲೀಷ್ ನಲ್ಲಿ ಒಂದು ಕೋಟ್ ಇದೆ, ಪುಸ್ತಕವನ್ನ ಅದರ ಕವರ್ ನೋಡಿ ಜಡ್ಜ್ ಮಾಡಬಾರದಂತೆ, ನಾನು ಈ ರೀತಿ ಡ್ರೆಸ್ ಮಾಡಿದ ಮಾತ್ರಕ್ಕೆ ನನಗೆ ಬರ್ಗರ್ ಮಾಡೊದಕ್ಕೆ ಸಾಧ್ಯ ಇಲ್ಲ ಅಂತ ನೀವು ಹೇಗೆ ಅಂದುಕೊಂಡ್ರಿ ಎಂದು ಪ್ರಶ್ನಿಸುತ್ತಾಳೆ ಭಾಗ್ಯ. ಇದನ್ನ ನೋಡಿ ತಾಂಡವ್ ಶಾಕ್ ಆಗ್ತಾನೆ. 
 

ಅದಕ್ಕೆ ಮಗಳು ತನ್ವಿ ನೀವು ನನ್ನ ಅಮ್ಮನ ಬಗ್ಗೆ ತಪ್ಪು ತಿಳ್ಕೊಂಡಿದ್ದೀರಿ, ನನ್ನ ಅಮ್ಮ ಕೇವಲ ಬೆಸ್ಟ್ ಅಮ್ಮ ಮಾತ್ರ ಅಲ್ಲ, ಈ ಊರಿನ ಫೈವ್ ಸ್ಟಾರ್ ಹೊಟೇಲ್ ನ ಬೆಸ್ಟ್ ಶೆಫ್ ಕೂಡ ಹೌದು ಎನ್ನುತ್ತಾಳೆ. ಇದನ್ನ ಕೇಳಿ ಬಂದಿರೋರಿಗೆ ಶಾಕ್ ಆಗುತ್ತೆ, ತಾಂಡವ್ ನಿಮಗೆ ಏನೂ ಗೊತ್ತಿಲ್ಲ, ಕಲಿತ್ತಿಲ್ಲ ಅಂದಿದ್ದಕ್ಕೆ ಹಾಗೆ ಕೇಳಿದ್ದು, ಎನ್ನುತ್ತಾ ಭಾಗ್ಯಳ ಬಳಿಯೇ ಸಾರಿ ಕೇಳ್ತಾರೆ. 
 

ಈ ದೃಶ್ಯವನ್ನ ನೋಡಿದ್ರೆ ನಟಿ ಶ್ರೀದೇವಿ ನಟಿಸಿರುವ ಸೂಪರ್ ಹಿಟ್ ಸಿನಿಮಾ ಇಂಗ್ಲಿಷ್ ವಿಂಗ್ಲಿಷ್ ನೆನಪಾಗುತ್ತೆ. ಈ ಸಿನಿಮಾದಲ್ಲಿ ಶ್ರೀದೇವಿ ಪತಿ ಯಾವಾಗ್ಲೂ ಆಕೆಗೆ ಇಂಗ್ಲಿಷ್ ಬರೋದಿಲ್ಲ, ಮನೆಕೆಲಸಕ್ಕಷ್ಟೇ ಸೀಮಿತ ಅನ್ನೋ ಥರ ನೋಡುವ ಮನುಷ್ಯ. ಆದರೆ ಒಂದು ದಿನ ಎಲ್ಲರೆದುರು ಶ್ರೀದೇವಿ ಇಂಗ್ಲೀಷ್ ನಲ್ಲಿ ಸ್ಪೀಚ್ ನೀಡೋದನ್ನ ನೋಡಿ ಗಂಡನಿಗೆ ಶಾಕ್ ಆಗುತ್ತೆ. ಈವಾಗ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಪಾತ್ರವೂ ಇಂಗ್ಲಿಷ್ ವಿಂಗ್ಲಿಷ್ ಸಿನಿಮಾದ ಶ್ರೀದೇವಿ ಪಾತ್ರಕ್ಕೂ ತುಂಬಾನೆ ಹೋಲಿಕೆ ಇದೆ ಅನಿಸುತ್ತೆ. 
 

ಇನ್ನು ಈ ದೃಶ್ಯವನ್ನು ನೋಡಿ ವೀಕ್ಷಕರಂತೂ ತುಂಬಾನೆ ಖುಷಿ ಆಗಿದ್ದಾರೆ. ಅವಮಾನ ಇದ್ದಕಡೆಸನ್ಮಾನ ಇದ್ದೇ ಇರುತ್ತೆ ಅನ್ನೋದಕ್ಕೆ ಭಾಗ್ಯ ಬೆಸ್ಟ್ ಉದಾಹರಣೆ. ತಾಂಡವನಿಜಕ್ಕೂ ಇಂಗು ತಿಂದಿರೋ ಮಂಗನೆ ಎಂದಿದ್ದಾರೆ. ಭಾಗ್ಯ ರಾಕ್ ತಾಂಡವ್ ಶಾಕ್, ನಮ್ಮ ಭಾಗ್ಯಕ್ಕಂಗೆ ಒಂದು ಅವಾರ್ಡ್ ಬರಲಿ, ಭಾಗ್ಯ ತುಂಬಾ ಚೆನ್ನಾಗಿ ಉತ್ತರ ಕೊಟ್ಟೆ ತಾಂಡವ್ ನಿನ್ನ ಮುಖ ಕ್ಕೆ ಆಯ್ತ ಮಂಗಳಾರತಿ ಅಂತಾನೂ ಪ್ರಶ್ನಿಸಿದ್ದಾರೆ. 
 

ಇನ್ನೂ ಕೆಲವರು ಭಾಗ್ಯ ಬಾಳಲ್ಲಿ ಒಬ್ಬ ಅತ್ತೆ ಮಗನ ಎಂಟ್ರಿಯಾಗಲಿ, ಆವಾಗ ಈ ಸೀರಿಯಲ್ ಇನ್ನೂ ಚೆನ್ನಾಗಿರುತ್ತೆ ಎಂದಿದ್ದಾರೆ. ಮತ್ತೆ ಕೆಲವರು ಈ ಸೀರಿಯಲ್ ಕಥೆ ತುಂಬಾನೆ ಚೆನ್ನಾಗಿದೆ. ಆದರೆ ಪ್ರತಿಬಾರಿ ಭಾಗ್ಯ ಗೆಲ್ಲೋದು, ತಾಂಡವ್ ಗೆ ಸೋಲಾಗೋದೇನೋ ಸರಿ, ಆದರೆ ಆ ತಾಂಡವ್ ಗೆ ಬುದ್ದಿ ಬರೋದು ಯಾವಾಗ? ತಾಂಡವ್ ಗೆ ಬುದ್ದಿ ಬರುವಂತಹ ಸೀನ್ ಕೂಡ ಇರಲಿ ಎಂದಿದ್ದಾರೆ ಜನ. 
 

Latest Videos

click me!