Bigg Boss Season 11: ಮೋಕ್ಷಿತಾ- ತ್ರಿವಿಕ್ರಂ ಮಧ್ಯೆ ಮತ್ತೆ ಕಿಡಿ ಹಚ್ಚಿ..ಆಟ ನೋಡ್ತಿದ್ದಾರ ಬಿಗ್ ಬಾಸ್!

First Published | Nov 4, 2024, 1:35 PM IST

ಬಿಗ್ ಬಾಸ್ ಮನೆಯಲ್ಲಿ ಈಗಾಗಲೇ ಮೋಕ್ಷಿತಾ- ತ್ರಿವಿಕ್ರಂ  ನಡುವೆ ಈಗಾಗಲೇ ಜಗಳ ಆರಂಭವಾಗಿದೆ. ಇದೀಗ ಮತ್ತೊಮ್ಮೆ ಇಬ್ಬರ ಮಧ್ಯ ಕಿಡಿ ಹಚ್ಚಿ, ಆಟ ನೋಡ್ತಿದ್ದಾರೆ ಬಿಗ್ ಬಾಸ್. 
 

ಬಿಗ್ ಬಾಸ್ ಸೀಸನ್ 11 (Bigg Boss Season 11) ಜಗಳದಿಂದಲೇ ಜನಪ್ರಿಯತೆ ಪಡೆದಿದೆ. ಇತ್ತೀಚಿನ ದಿನಗಳಲ್ಲಿ ತ್ರಿವಿಕ್ರಮ್ ಮತ್ತು ಮೋಕ್ಷಿತಾ ಪೈ ನಡುವೆ ಭಾರಿ ಮಾತಿನ ಗುದ್ದಾಟ ನಡೆಯುತ್ತಿದೆ. ಇದೀಗ ಬಿಗ್ ಬಾಸ್ ವಿಡಿಯೋ ಒಂದನ್ನು ಶೇರ್ ಮಾಡುವ ಮೂಲಕ ಇಬ್ಬರ ನಡುವಿನ ಜಗಳಕ್ಕೆ ತುಪ್ಪ ಸುರಿದಂತಿದೆ. 
 

ಬಿಗ್ ಬಾಸ್ ಮನೆಯ ಒಳಗೆ ಒಬ್ಬರಿಗೊಬ್ಬರು ಹಿಂದಿನಿಂದ ಅದೆಷ್ಟೋ ವಿಷ್ಯಗಳನ್ನ ಮಾತನಾಡ್ತಾರೆ, ಆದರೆ ಹಿಂದೆಯಿಂದ ಏನ್ ಮಾತಾಡ್ತಾರೆ ಅನ್ನೋದು ಯಾರಿಗೂ ಗೊತ್ತಾಗೋದೆ ಇಲ್ಲ. ಇದೀಗ ಬಿಗ್ ಬಾಸ್ ಮನೆಮಂದಿಯನ್ನೆಲ್ಲಾ ಒಟ್ಟಿಗೆ ಕೂರಿಸಿ, ಮನೆಮಂದಿ ಒಬ್ಬರ ಬಗ್ಗೆ ಇನ್ನೊಬ್ಬರು ಹಿಂದಿನಿಂದ ಏನು ಮಾತನಾಡಿದ್ದಾರೆ ಅನ್ನೋದನ್ನ ತೋರಿಸಿದ್ದಾರೆ. 
 

Tap to resize

ಇದೀಗ ಈ ವಿಡಿಯೋ ಮನೆ ಮಂದಿ ನಡುವೆ ಜಗಳ ಶುರುವಾಗೋದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ ಕೆಲವರು ಕೆಲವು ಸ್ಪರ್ಧಿಗಳ ಬಗ್ಗೆ ಹಿಂದಿನಿಂದ ಕೆಟ್ಟದಾಗಿ ಮಾತನಾಡಿದ್ದು, ಅದನು ತೋರಿಸುವ ಮೂಲಕ ಬಿಗ್ ಬಾಸ್ ಮನೆ ಮಂದಿ ನಡುವೆ ಮತ್ತೆ ಕಿಚ್ಚು ಹಚ್ಚಿದ್ದಾರೆ. 
 

ಒಂದು ವಿಡಿಯೋ ತುಣುಕಿನಲ್ಲಿ ಐಶ್ವರ್ಯ ಅವರು ಶಿಶಿರ್ ಅವರ ಬಳಿ ಮಾತನಾಡುತ್ತಾ, ಕಣ್ಣಿಗೆ ಕಾಣಿಸ್ತಾ ಇದೆ ಅವಳಿಗೆ ಎಷ್ಟು ಹೊಟ್ಟೆ ಕಿಚ್ಚು ಇದೆ ಅನ್ನೋದನ್ನ ಹೇಳಿದ್ದಾರೆ. ಇದು ಭವ್ಯಾ ಅವರ ಕುರಿಯಾಗಿಯೇ ಹೇಳಿರುವ ಮಾತುಗಳು ಅನಿಸುತ್ತಿದೆ. 
 

ಇನ್ನು ಒಂದು ತುಣುಕಿನಲ್ಲಿ ತ್ರಿವಿಕ್ರಂ (Trivikram) ತಮ್ಮ ಗುಂಪಿನಲ್ಲಿ ಮಾತನಾಡುತ್ತಾ ಒಂದು ಹಕ್ಕಿ ಜೊತೆ ಇನ್ನೊಂದು ಹಕ್ಕಿ ಫ್ರೀ ಅಂದಿದ್ದಾರೆ. ಇದು ಗೌತಮಿ, ಮೋಕ್ಷಿತಾ ಮತ್ತು ಮಂಜು ಬಗ್ಗೆ ಹೇಳಿರುವ ಮಾತುಗಳಾಗಿವೆ. ಇದನ್ನ ಕೇಳಿ ಮೋಕ್ಷಿತಾ ತ್ರಿವಿಕ್ರಂ ಮೇಲೆ ಸಿಕ್ಕಾಪಟ್ಟೆ ಕಿಡಿ ಕಾರಿದ್ದಾರೆ. 
 

ಅಕ್ಕ ತಂಗಿಯರ ಜೊತೆ ಬೆಳೆದೋರು ಹಕ್ಕಿ ಅಂತ ಮಾತಾಡ್ತಾರ ಯಾರಾದ್ರೂ? ಇದು ಅವರ ತನ ಏನು ಅನ್ನೋದನ್ನು ತೋರಿಸುತ್ತೆ ಎಂದಿದ್ದಾರೆ. ಅತಿ ವಿನಯಂ ದೂರ್ತ ಲಕ್ಷಣಂ ಅಂತಾರಲ್ಲ ಇದು ಅದೇ ಆಗಿದ್ದು ಅಂತಾನೂ ಹೇಳಿದ್ದಾರೆ ಮೋಕ್ಷಿತಾ (Mokshitha Pai). 

ಅಷ್ಟೇ ಅಲ್ಲ ತಾನು ತ್ರಿವಿಕ್ರಂಗೆ ಗೋಮುಖ ವ್ಯಾಘ್ರ ಅಂತ ಕೊಟ್ಟೆ ಅದಕ್ಕೆ ನಾನೇನು ರಿಗ್ರೆಟ್ ಮಾಡಲ್ಲ ಅಂತಾರೆ. ಇನ್ನೊಂದು ಕಡೆ ತ್ರಿವಿಕ್ರಂ ಚಪ್ಪಾಳೆ ತಟ್ಟುತ್ತಾ, ನನಗೆ ಗೋಮುಖ ವ್ಯಾಘ್ರ ಅಂತಾರೆ. ಇಷ್ಟು ದಿನ ಹಾಗೆ ಇರ್ಲಿಲ್ಲ, ಆದ್ರೆ ಇನ್ನು ಮುಂದೆ ಹಾಗೆ ಇರ್ತೀನಿ ಎಂದಿದ್ದಾರೆ. ಇದಲ್ಲದೇ ಮತ್ತೊಂದಿಷ್ಟು ಮಂದಿಯ ವಿಡಿಯೋ ಕೂಡ ಪ್ಲೇ ಆಗಿದೆ. ಇನ್ನು ಏನೇನು ಜಗಳ ಕಾದಿದೆಯೋ ಕಾದು ನೋಡಬೇಕು. 
 

Latest Videos

click me!