ಬಿಗ್ ಬಾಸ್ ಜಾಲಿವುಡ್ ಸ್ಟುಡಿಯೋ ಮುಂದೆ ಜನಸಾಗರ, ಫ್ಯಾನ್ಸ್ ಚದುರಿಸಲು ಲಘು ಲಾಠಿ ಚಾರ್ಜ್

Published : Jan 18, 2026, 07:26 PM IST

ಬಿಗ್ ಬಾಸ್ ಜಾಲಿವುಡ್ ಸ್ಟುಡಿಯೋ ಮುಂದೆ ಜನಸಾಗರ ಹರಿದು ಬಂದಿದೆ. ಅಭಿಮಾನಿಗಳ ನಿಯಂತ್ರಿಸಲು ಪೊಲೀಸರು ಹರಸಹಾಸ ಪಡುತ್ತಿದ್ದಾರೆ. ಜಾಲಿವುಡ್ ಸ್ಟುಡಿಯೋ ಒಳಗೆ ನುಗ್ಗುವ ಪ್ರಯತ್ನಗಳು ನಡೆದಿದೆ. ಇದರ ನಡುವೆ ಲಾಠಿ ಚಾರ್ಜ್ ಮಾಡಲಾಗಿದೆ.

PREV
16
ಹಿಂದೆಂದೂ ಕಾಣದ ಬಿಗ್ ಬಾಸ್‌ ಕ್ರೇಜ್

ಬಿಗ್ ಬಾಸ್ 12ನೇ ಆವೃತ್ತಿ ಹಿಂದೆಂದೂ ಕಾಣದ ಕ್ರೇಜ್ ಪಡೆದುಕೊಂಡಿದೆ. ಫಿನಾಲೆ ಹಿನ್ನಲೆಯಲ್ಲಿ ಬಿಗ್ ಬಾಸ್ ನಡೆಯುವ ಜಾಲಿವುಡ್ ಸ್ಟುಡಿಯೋ ಮುಂಭಾಗ ಕಿಕ್ಕಿರಿದು ಅಭಿಮಾನಿಗಳು ಸೇರಿದ್ದಾರೆ. ಪೊಲೀಸ್ ಭದ್ರತೆ ಕೈಗೊಂಡಿದ್ದರು, ಜನಸಾಗರ ನಿಯಂತ್ರಣವೇ ಸವಾಲಾಗುತ್ತಿದೆ. ಕೆಲ ಅಭಿಮಾನಿಗಳು ಜಾಲಿವುಡ್ ಸ್ಟುಡಿಯೋಗೆ ನುಗ್ಗುವ ಪ್ರಯತ್ನವನ್ನೂ ಮಾಡಿದ್ದಾರೆ.

26
ಪೊಲೀಸರಿಂದ ಲಘು ಲಾಠಿ ಪ್ರಹಾರ

ಬಿಗ್ ಬಾಸ್ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋ ಹೊರಭಾಗದಲ್ಲಿ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜೈಕಾರ, ಘೋಷಣೆಗಳು ಮೊಳಗುತ್ತಿದೆ. ಪರಿಸ್ಥಿತಿ ನಿಯಂತ್ರಣ ಕೈಮೀರುತ್ತಿದ್ದಂತೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಶಿಸ್ತು ಮೀರದಂತೆ ಪೊಲೀಸರು ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

36
ಗೇಟ್ ಒಳಗೆ ನುಗ್ಗಲು ಪ್ರಯತ್ನ

ಕೆಲ ಅಭಿಮಾನಿಗಳು ಜಾಲಿವುಡ್ ಸ್ಟುಡಿಯೋ ಗೇಟ್ ಒಳಗೆ ನುಗ್ಗಲು ಯತ್ನಿಸಿದ ಕಾರಣ ಲಘು ಲಾಠಿ ಪ್ರಹಾರ ನಡೆದಿದೆ. ಸದ್ಯಕ್ಕೆ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಇದೇ ವೇಳ ಹೆಚ್ಚುವರಿ ಪೊಲೀಸ್ ಭದ್ರತೆ ಕೈಗೊಳ್ಳಾಗಿದೆ. ನೆಚ್ಚಿನ ಸ್ಪರ್ಧಿಗಳು ಗೆಲ್ಲಲು ಘೋಣೆಗಳು ಮೊಳಗುತ್ತಿದೆ. ಇದೇ ಮೊದಲ ಬಾರಿಗೆ ಬಿಗ್ ಬಾಸ್ ಈ ಮಟ್ಟಿನ ಕ್ರೇಜ್ ಪಡೆದುಕೊಂಡಿದೆ.

46
ಕಟೌಟ್‌ಗೆ ಹಾಲಿನ ಅಭಿಷೇಕ

ಬಿಗ್ ಬಾಸ್ ಫಿನಾಲೆ ಸ್ಪರ್ಧಿಗಳ ಪೋಸ್ಟರ್, ಬ್ಯಾನರ್ ಅಳವಡಿಸಲಾಗಿದೆ. ಆದರೆ ಗಿಲ್ಲಿ ನಟ ಹಾಗೂ ಕಾವ್ಯ ಕಟೌಟ್ ಇಡಲಾಗಿದೆ. ದೊಡ್ಡ ಹೂವಿನ ಹಾರಗಳನ್ನು ಹಾಕಲಾಗಿದೆ. ಗಿಲ್ಲಿ ಅಭಿಮಾನಿಗಳು ಕಟೌಟ್ ಮೇಲೆ ಹತ್ತಿ ಹಾಲಿನ ಅಭಿಷೇಕ ಮಾಡಿದ್ದಾರೆ. ಗಿಲ್ಲಿ ವಿನ್ನರ್ ಎಂದು ಘೋಷಣೆಗಳನ್ನು ಕೂಗುತ್ತಿದ್ದಾರೆ.

56
ಬಿಗ್ ಬಾಸ್ ಫಿನಾಲೆ

ಬಿಗ್ ಬಾಸ್ ಫಿನಾಲೆ ಆರಂಭಗೊಂಡಿದೆ. ಗಿಲ್ಲಿ ನಟ, ರಿಕ್ಷಿತಾ ಶೆಟ್ಟಿ, ಕಾವ್ಯ, ರಘು, ಅಶ್ವಿನಿ ಗೌಡ ಹಾಗೂ ಧನುಷ್ ಫಿನಾಲೆ ವೇದಿಕೆಯಲ್ಲಿದ್ದಾರೆ. ಈಗಾಗಲೇ ಸೋಶಿಯಲ್ ಮೀಡಿಯಾಗಳಲ್ಲಿ ಗಿಲ್ಲಿಗೆ ಗೆಲುವು, ಗಿಲ್ಲಿ ವಿನ್ನರ್ ಎಂದು ಹರಿದಾಡುತ್ತಿದೆ. ರಾಜ್ಯದೆಲ್ಲೆಡೆ ಬಿಗ್ ಬಾಸ್ ವಿನ್ನರ್ ಕುರಿತ ಚರ್ಚೆಗಳು ನಡೆಯುತ್ತಿದೆ.

66
ಬಿಗ್ ಬಾಸ್ ವಿನ್ನರ್ ಯಾರು?

ಬಿಗ್ ಬಾಸ್ ವಿನ್ನರ್ ಅಧಿಕೃತ ಘೋಷಣೆಯಾಗಿಲ್ಲ. ಆದರೆ ಸೋಶಿಯಲ್ ಮೀಡಿಯಾ, ಬಿಗ್ ಬಾಸ್ ಮಾಜಿ ಸ್ಪರ್ಧಿಗಳು ಗಿಲ್ಲಿ ವಿನ್ನರ್ ಎಂದು ಪೋಸ್ಟ್ ಮಾಡುತ್ತಿದ್ದಾರೆ. ಗಿಲ್ಲಿ ವಿನ್ನರ್, ರಕ್ಷಿತಾ ಶೆಟ್ಟಿ ರನ್ನರ್ ಅಪ್ ಎಂದು ಹೇಳಲಾಗುತ್ತಿದೆ. ಈ ಮಾಹಿತಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆಧರೆ ಅಧಿಕೃತ ಘೋಷಣೆ ಆಗಿಲ್ಲ.

ಬಿಗ್ ಬಾಸ್ ವಿನ್ನರ್ ಯಾರು?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories