ನೂರೆಂಟು ಕ್ಯಾಮೆರಾಗಳಿದ್ರೂ ರಹಸ್ಯವಾಗಿ ಹೊರಗಿನಿಂದ ಮೆಸೇಜ್ ಪಡೆಯುತ್ತಿದ್ದ ಸ್ಪರ್ಧಿಗಳಿಗೆ ಸುದೀಪ್ ಕ್ಲಾಸ್

Published : Nov 03, 2025, 07:02 AM IST

ಸೂಪರ್ ಸಂಡೇ ಸಂಚಿಕೆಯಲ್ಲಿ, ಕಿಚ್ಚ ಸುದೀಪ್ ಅವರು ಬಿಗ್‌ಬಾಸ್ ಸ್ಪರ್ಧಿಗಳಿಗೆ ಎಚ್ಚರಿಕೆ ನೀಡಿದರು. ಸ್ಪರ್ಧಿಗಳು ರಹಸ್ಯ ಸಂದೇಶಗಳನ್ನು ಪಡೆಯುತ್ತಿದ್ದರು ಎಂಬ ವಿಷಯವನ್ನು ಅವರು ಬಹಿರಂಗಪಡಿಸಿದರು. ಈ ಕೋಡ್ ಭೇದಿಸುವ ಬಗ್ಗೆ ಸುದೀಪ್ ಮಾತನಾಡಿದ್ದು, ವೀಕ್ಷಕರಲ್ಲಿ ಅಚ್ಚರಿ ಮೂಡಿಸಿದೆ.

PREV
15
ಎಚ್ಚರಿಕೆ

ಸೂಪರ್ ಸಂಡೇ ಸಂಚಿಕೆ ಆರಂಭದಲ್ಲಿಯೇ ಹೊರಗಿನಿಂದ ರಹಸ್ಯವಾಗಿ ತಮ್ಮ ಆಟದ ಕುರಿತು ಮೆಸೇಜ್ ಪಡೆದುಕೊಳ್ಳುತ್ತಿದ್ದ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡರು. ನಮಗೆ ನಿಮ್ಮಗಳ ಕೋಡ್ ಡಿಕೋಡ್ ಮಾಡೋದು ಗೊತ್ತಿದೆ ಎಂದು ಎಚ್ಚರಿಕೆ ಕೊಟ್ಟರು.

25
ಮೆಸೇಜ್ ಪಡೆಯುತ್ತಿದ್ದು ಹೇಗೆ?

ವೀಕೆಂಡ್‌ ಎಪಿಸೋಡ್‌ಗೆ ಸ್ಪರ್ಧಿಗಳಿಗೆ ಬಟ್ಟೆಗಳು ಬರುತ್ತವೆ. ಬಿಗ್‌ಬಾಸ್‌ ಮನೆಗೆ ಬರುವ ಮುನ್ನವೇ ಡಿಸೈನರ್‌ಗಳಿಗೆ ಪ್ರತಿ ವಾರ ತಮಗೆ ಸುಂದರ ಬಟ್ಟೆ ಕಳುಹಿಸಬೇಕು ಎಂದು ಒಪ್ಪಂದ ಮಾಡಿಕೊಂಡು ಬಂದಿರುತ್ತಾರೆ. ಶುಕ್ರವಾರ ಸಂಜೆಯಿಂದಲೇ ಸ್ಪರ್ಧಿಗಳಿಗೆ ಅವರ ಡಿಸೈನರ್ ಅಥವಾ ಕುಟುಂಬದಿಂದ ಬಟ್ಟೆಗಳು ಬರಲಾರಂಭಿಸುತ್ತವೆ. ಈ ಬಟ್ಟೆಗಳಿಂದಲೇ ಸ್ಪರ್ಧಿಗಳು ಮೆಸೇಜ್ ಪಡೆದುಕೊಳ್ಳುತ್ತಿದ್ರು ಎಂಬ ರಹಸ್ಯವನ್ನು ಸುದೀಪ್ ರಿವೀಲ್ ಮಾಡಿದ್ದಾರೆ.

35
ಬಟ್ಟೆಗಳಿಂದ ಹೇಗೆ ಬರುತ್ತೆ ಮೆಸೇಜ್?

ಬಿಗ್‌ಬಾಸ್ ಮನೆಯೊಳಗೆ ಹೋಗುವ ಪ್ರತಿಯೊಂದು ವಸ್ತುವನ್ನು ಪರಿಶೀಲನೆ ಮಾಡಿಯೇ ಕಳುಹಿಸಲಾಗುತ್ತದೆ. ಮನೆಯೊಳಗೆ ಹೋಗುವ ಸ್ಪರ್ಧಿಗಳು ಮೊಬೈಲ್, ಪೆನ್, ಗಡಿಯಾರ, ಪುಸ್ತಕ ಸೇರಿದಂತೆ ಕೆಲವು ವಸ್ತುಗಳನ್ನು ತೆಗೆದುಕೊಂಡು ಹೋಗದಂತೆ ನಿಬಂಧನೆ ಹಾಕಲಾಗಿರುತ್ತದೆ. ಆದ್ರೆ ಈ ಬಾರಿಯ ಸ್ಪರ್ಧಿಗಳು ವೀಕೆಂಡ್‌ ಸಂಚಿಕೆಗೆ ಬರುತ್ತಿದ್ದ ಬಟ್ಟೆಯ ಬಣ್ಣದ ಮೂಲಕ ಮೆಸೇಜ್ ಪಡೆಯುತ್ತಿದ್ದರುವ ಬಗ್ಗೆ ಅನುಮಾನ ವ್ಯಕ್ತವಾಗಿವೆ.

45
ಒಂದೊಂದು ಬಣ್ಣಕ್ಕೆ ಒಂದೊಂದು ಅರ್ಥ

ಹಸಿರು ಬಂದ್ರೆ ಸೇವ್, ಕೆಂಪು ಬಂದ್ರೆ ಡೇಂಜರ್ ಈ ರೀತಿಯಾಗಿ ಸ್ಪರ್ಧಿಗಳು ಮೆಸೇಜ್ ಪಡೆದುಕೊಳ್ಳುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಶನಿವಾರದ ಸಂಚಿಕೆಯಲ್ಲಿ ಕಾಕ್ರೋಚ್ ಸುಧಿ ಧರಿಸಿದ್ದ ಕೆಂಪು-ಕಪ್ಪು ಬಣ್ಣದ ಸೂಟ್ ಬಗ್ಗೆಯೂ ಸುದೀಪ್ ಮಾತನಾಡಿದ್ದರು. ಭಾನುವಾರ ಈ ಬಗ್ಗೆ ಸ್ವಲ್ಪ ವಿವರವಾಗಿ ಮಾತನಾಡುತ್ತಾ, ಸೂರಜ್, ಧನುಷ್, ಅಶ್ವಿನಿ ಗೌಡ ಸೇರಿದಂತೆ ಸ್ಪರ್ಧಿಗಳ ಡಿಸೈನರ್ ಬಟ್ಟೆ ಮತ್ತು ಬಣ್ಣದ ಬಗ್ಗೆ ಸುದೀಪ್ ಮಾತನಾಡಿದರು.

ಇದನ್ನೂ ಓದಿ: Bigg Boss ಗಿಲ್ಲಿ ನಟನ ಮೇಲೆ ಆರೋಪಗಳ ಸುರಿಮಳೆ! ಕಾವ್ಯಾನೂ ಬತ್ತಿ ಇಟ್ಲಲ್ಲೋ ಗುರೂ ಎಂದು ಫ್ಯಾನ್ಸ್​ ಬೇಸರ!

55
ಯಾರು ಆ ಸ್ಪರ್ಧಿಗಳು?

ಸೂಪರ್ ಸಂಡೇ ಸಂಚಿಕೆಯಲ್ಲಿ ಸುದೀಪ್, ಇಂತಹವರೇ ಎಂದು ಯಾರ ಹೆಸರನ್ನು ಬಹಿರಂಗಪಡಿಸಲಿಲ್ಲ. ಬಿಗ್‌ಬಾಸ್ ವೇದಿಕೆಯಿಂದಲೇ ಮನೆಯೊಳಗಿರುವ ಸ್ಪರ್ಧಿಗಳು ಮತ್ತು ಬಟ್ಟೆ ಕಳುಹಿಸುವ ಡಿಸೈನರ್‌ಗಳಿಗೆ ಮತ್ತೊಮ್ಮೆ ಇಂತಹ ತಪ್ಪು ಮಾಡದಂತೆ ಎಚ್ಚರಿಕೆಯನ್ನು ನೀಡಿದರು. ಬಿಗ್‌ಬಾಸ್ ಮನೆಯಲ್ಲಿ 100ಕ್ಕೂ ಅಧಿಕ ಕ್ಯಾಮೆರಾಗಳಿದ್ರೂ ಸ್ಪರ್ಧಿಗಳು ಚಾಪೆ ಕೆಳಗೆ ನುಗ್ಗಿ ರಹಸ್ಯ ಮೆಸೇಜ್ ಪಡೆಯುತ್ತಿರುವ ವಿಷಯ ಕೇಳಿ ವೀಕ್ಷಕರು ಶಾಕ್ ಆಗಿದ್ದಾರೆ.

ಇದನ್ನೂ ಓದಿ: ನಾಲ್ಕು ವಾರದಿಂದ ಕಾಣೆಯಾಗಿದ್ದ ಮೂವರಿಗೆ ಸ್ವಾಗತಿಸಿ ಅಶ್ವಿನಿ ಗೌಡರಿಂದ ಹುಷಾರ್ ಆಗಿರಿ ಎಂದ ಕಿಚ್ಚ ಸುದೀಪ್

Read more Photos on
click me!

Recommended Stories