BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!

Published : Dec 05, 2025, 01:17 PM IST

BBK 12: ಕನ್ನಡ ಕಿರುತೆರೆಯ ಮೂಲಕ ಜನಪ್ರಿಯತೆ ಗಳಿಸಿ, ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ನಟಿ ಸ್ಪಂದನಾ ಸೋಮಣ್ಣ, ಟಾಸ್ಕ್ ಅಂತ ಬಂದ್ರೆ ಎಲ್ಲಾದ್ರಲ್ಲೂ ವೀಕ್. ಆದರೆ ಈ ವಾರ ಕಾಲು ಮುರಿದ್ರೂ ಕೂಡ ಚೈತ್ರಾ ಕುಂದಾಪುರ ಆಟದಿಂದ ಅಭಿ ಜೊತೆ ಕ್ಯಾಪ್ಟನ್ ಆಗಿ ಬೀಗಿದ್ದಾರೆ ಸ್ಪಂದನಾ.

PREV
16
ಬಿಗ್ ಬಾಸ್ ಕನ್ನಡ

ಕನ್ನಡ ಬಿಗ್ ಬಾಸ್ ಸೀಸನ್ 12ರಲ್ಲಿ ಟಾಸ್ಕ್ ಗಳು ಭಾರಿ ಜೋರಾಗಿಯೇ ನಡೆಯುತ್ತಿದೆ. ಈ ವಾರ ಟಾಸ್ಕ್ ಗಳು ಜಂಟಿಯಾಗಿದ್ದವು. ಎಲ್ಲರೂ ಜಂಟಿಯಾಗಿಯೇ ಆಟವಾಡುತ್ತಿದ್ದರು. ಈ ಜಂಟಿ ಟಾಸ್ಕ್ ನಲ್ಲಿ ಗೆದ್ದು ಅಭಿಷೇಕ್ ಮತ್ತು ಸ್ಪಂದನಾ ಈ ವಾರದ ಜಂಟಿ ಕ್ಯಾಪ್ಟನ್ ಆಗಿದ್ದಾರೆ.

26
ಅಭಿಷೇಕ್-ಸ್ಪಂದನಾ ಕ್ಯಾಪ್ಟನ್

ನಿನ್ನೆಯ ಟಾಸ್ಕ್ ಹೀಗಿತ್ತು. ಮೊದಲ ಟಾಸ್ಕ್ ನಲ್ಲಿ ಅತಿ ಕಡಿಮೆ ಬಾಲ್ ಕಲೆಕ್ಟ್ ಮಾಡಿ ಗಿಲ್ಲಿ ಮತ್ತು ಕಾವ್ಯಾ ಕ್ಯಾಪ್ಟನ್ಸಿ ಟಾಸ್ಕ್ ನಿಂದ ಹೊರ ಬಿದ್ದರು. ಮಾಳು ನಿಪನಾಳ-ರಕ್ಷಿತಾ ಶೆಟ್ಟಿ, ರಘು-ಅಶ್ವಿನಿ ಗೌಡ, ಅಭಿಷೇಕ್-ಸ್ಪಂದನಾ ಸೋಮಣ್ಣ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಭಾಗವಹಿಸಿದ್ದರು.

36
ಸ್ಪಂದನಾ ಬದಲು ಟಾಸ್ಕ್ ಆಡಿದ ಚೈತ್ರಾ

ಸ್ಪಂದನಾ ಕಾಲಿಗೆ ಪೆಟ್ಟು ಬಿದ್ದುದರಿಂದ ಆಕೆಯ ಬದಲಾಗಿ ಚೈತ್ರಾ ಕುಂದಾಪುರ ಟಾಸ್ಕ್ ಆಡಿದರು. ಒಗಟು ಬಿಡಿಸಿ, ಬಂಧಿಯಾಗಿದ್ದ ಸದಸ್ಯರನ್ನು ಬಿಡಿಸುವ ಟಾಸ್ಕ್ ಇದಾಗಿತ್ತು. ಅಂತಿಮವಾಗಿ ಎಲ್ಲಾ ಒಗಟನ್ನು ವೇಗವಾಗಿ ಬಿಡಿಸಿ, ಉತ್ತಮ ತಂತ್ರಗಾರಿಕೆ ಬಳಸಿ, ಚೈತ್ರಾ ಕುಂದಾಪುರ ಅಭಿಷೇಕ್ ಅವರನ್ನು ಬಿಡಿಸಿ ಟಾಸ್ಕ್ ಗೆದ್ದರು.

46
ಮೊದಲ ಜಂಟಿ ಕ್ಯಾಪ್ಟನ್

ಈ ಮೂಲಕ ಅಭಿಷೇಕ್-ಸ್ಪಂದನಾ ಸೋಮಣ್ಣ ʻಬಿಗ್‌ ಬಾಸ್‌ʼ ಮನೆಯ ಮೊದಲ ಜಂಟಿ ಕ್ಯಾಪ್ಟನ್‌ ಆದರು. ಅಂದಹಾಗೆ ಅಭಿಷೇಕ್‌ ಇದೀಗ ಎರಡನೇ ಬಾರಿಗೆ ಮನೆಯ ಕ್ಯಾಪ್ಟನ್‌ ಆಗಿದ್ದಾರೆ. ಸ್ಪಂದನಾ ಸೋಮಣ್ಣ ಈ ಸೀಸನ್‌ನ ಮೊದಲ ಮಹಿಳಾ ಕ್ಯಾಪ್ಟನ್‌ ಆಗಿರುವುದು ವಿಶೇಷವಾಗಿದೆ.

56
ಸ್ಪಂದನಾ ಕಾಲಿಗೆ ಏನಾಗಿತ್ತು?

ಜಂಟಿಗಳ ಕಾಲಿಗೆ ಹಗ್ಗ ಕಟ್ಟಿ ಬಾಲ್ ಕಸಿಯುವ ಸ್ಪರ್ಧೆಯಲ್ಲಿ, ಸ್ಪಂದನಾ ಎಡವಿ ಕೆಳಗೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಸ್ಪಂದನಾ ಮೇಲೆ ಇತರ ಸ್ಪರ್ಧಿಗಳು ಸಹ ಬಿದ್ದಿದ್ದಾರೆ. ಸ್ಪಂದನಾ ಕಾಲು ನೋವು ಎಂದಾಗಲು ಕೇಳಿರಲಿಲ್ಲ. ನಂತರ ಸ್ಪಂದನಾರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆಕೆಗೆ ಕಾಲಿನ ಮೂಳೆ ಮುರಿತವಾಗಿದೆ. ಹಾಗಾಗಿ ಸ್ಪಂದನಾ ಬದಲು ಚೈತ್ರಾ ಆಡಿ ಗೆದ್ದರು.

66
ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್

ಯಾವುದೇ ಟಾಸ್ಕ್ ಗೆಲ್ಲದೇ ಕ್ಯಾಪ್ಟನ್ ಆಗಿರುವ ಸ್ಪಂದನಾ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದಾರೆ. ಉಳಿದ ಸ್ಪರ್ಧಿಗಳಿಗೆ ಹೋಲಿಕೆ ಮಾಡಿದರೆ, ಸ್ಪಂದನಾ ತುಂಬಾನೆ ಸಾಫ್ಟ್ ನೇಚರ್, ಹಾಗೂ ಟಾಸ್ಕ್ ಗಳಲ್ಲೂ ಉತ್ತಮ ಪ್ರದರ್ಶನ ನೀಡಿಯೇ ಇಲ್ಲ. ಅದರಲ್ಲೂ ಈ ವಾರ ಕಾಲು ಮುರಿದು ಆಟವೂ ಆಡದೇ ಇದೀಗ ಸುಲಭವಾಗಿ ಕ್ಯಾಪ್ಟನ್ ಆಗಿರುವುದಕ್ಕೆ ಜನ ಟ್ರೋಲ್ ಮಾಡುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories