BBK 12 Surashi : ಸೂರಜ್ ಸಿಂಗ್ ಹಾಗೂ ರಾಶಿಕಾ ಶೆಟ್ಟಿ ಕಮಿಟ್ ಆಗಿದ್ದಾರಾ? ಮನೆಯಿಂದ ಹೊರಗೆ ಬಂದ್ಮೇಲೂ ಒಟ್ಟಿಗೆ ಇರೋ ಪ್ಲಾನ್ ಇದ್ಯಾ? ರಾಶಿಕಾ ಮಾತು ಕೇಳಿದ್ರೆ ಈ ಅನುಮಾನ ಬರ್ತಿದೆ.
ಬಿಗ್ ಬಾಸ್ ಮನೆ ಜೋಡಿ ಹಕ್ಕಿ ರಾಶಿಕಾ ಹಾಗೂ ಸೂರಜ್. ಇಬ್ಬರು ಸದಾ ಒಟ್ಟಿಗಿರ್ತಾರೆ. ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಜೋಡಿಯಾಗಿ ಆಟ ಆಡಿದ್ರೂ ಕೊನೆ ಹಂತದವರೆಗೆ ತಲುಪೋಕೆ ಸಾಧ್ಯ ಆಗ್ಲಿಲ್ಲ. ಉತ್ತಮ ಆಟ ಪ್ರದರ್ಶನ ಮಾಡ್ತಿದ್ದ ಸೂರಜ್ ಹಾಗೂ ರಾಶಿಕಾಗೆ ಅಶ್ವಿನಿ ಗೌಡ ಹಾಗೂ ರಘು ವಿಲನ್ ಆದ್ರು. ಕ್ಯಾಪ್ಟನ್ಸಿ ಟಾಸ್ಕ್ ನಿಂದ ಅವರನ್ನು ಹೊರಗಿಟ್ರು.
28
ಬಿಗ್ ಬಾಸ್ ನಲ್ಲಿ ಒಂದಿಷ್ಟು ಜಾಗ ಇವರಿಗೆ ಫಿಕ್ಸ್
ಸೂರಜ್ ಹಾಗೂ ರಾಶಿಕಾ ಬೇರೆಯವರ ಜೊತೆ ಮಿಂಗಲ್ ಆಗಲ್ಲ ಎನ್ನುವ ಆರೋಪ ಇದೆ. ಕಿಚ್ಚ ಸುದೀಪ್ ಈಗಾಗ್ಲೇ ಎಚ್ಚರಿಕೆ ಕೂಡ ನೀಡಿದ್ದಾರೆ. ಇಷ್ಟಾದ್ರೂ ಅವರಿಬ್ಬರ ಫ್ರೆಂಡ್ ಶಿಪ್ ಕಟ್ ಆಗ್ಲಿಲ್ಲ. ಬಿಗ್ ಬಾಸ್ ಮನೆಯ ಕೆಲವೊಂದು ಜಾಗ ಅವರಿಗೆ ಸೀಮಿತ ಆಗಿದೆ. ನಿನ್ನೆ ಶೋನಲ್ಲಿ ಗಿಲ್ಲಿ ಹಾಗೂ ಕಾವ್ಯಾ ಆಜಾಗದಲ್ಲಿ ಕುಳಿತುಕೊಂಡಿದ್ದಲ್ದೆ ರಾಶಿಕಾ ಹಾಗೂ ಸೂರಜ್ ಕಾಲೆಳೆದಿದ್ದಾರೆ.
38
ಜಿಮ್ ವಿಷ್ಯಕ್ಕೆ ಇಬ್ಬರ ಮಧ್ಯೆ ಜಟಾಪಟಿ
ಒಟ್ಟಿಗೆ ಊಟ ಮಾಡ್ತಾರೆ, ಒಟ್ಟಿಗೆ ಟೀ ಹೀರ್ತಾರೆ, ಬಿಗ್ ಬಾಸ್ ಮನೆಯಲ್ಲಿ ಬೇರೆ ಪ್ರಪಂಚವನ್ನೇ ಇವರಿಬ್ಬರು ಸೃಷ್ಟಿ ಮಾಡ್ಕೊಂಡಿದ್ದಾರೆ ಎಂಬ ಆರೋಪ ಇದೆ. ವರ್ಕ್ ಔಟ್ ವೇಳೆ ರಾಶಿಕಾ, ಸೂರಜ್ ಕರೆದಿಲ್ಲ ಎನ್ನುವ ವಿಷ್ಯಕ್ಕೆ ಇಬ್ಬರ ಮಧ್ಯೆ ಮಾತಿನ ಜಟಾಪಟಿ ನಡೆದಿದೆ.
ನಾನು ವರ್ಕ್ ಔಟ್ ಮಾಡಲ್ಲ ಎನ್ನುತ್ಲೇ ರಾಶಿಕಾ ವರ್ಕ್ ಔಟ್ ಮಾಡಿದ್ದಾರೆ. ಇದನ್ನು ನೋಡಿದ ಸೂರಜ್ ಗೆ ಸ್ವಲ್ಪ ಬರ್ನ್ ಆಗಿದೆ. ಅದನ್ನು ಸೂರಜ್, ರಾಶಿಕಾಗೆ ಹೇಳಿದ್ದಾರೆ. ವರ್ಕ್ ಔಟ್ ಮಾಡಲ್ಲ ಅಂತ ಹೇಳಿ ಆಮೇಲೆ ವರ್ಕ್ ಔಟ್ ಮಾಡಿದ್ದೀರಿ. ನೋಡಿ ನನಗೆ ಹೇಗನ್ನಿಸ್ಬೇಡ ಅಂತ ಸೂರಜ್ ರಾಶಿಕಾರನ್ನು ಕೇಳಿದ್ದಾರೆ.
58
ಇನ್ಮುಂದೆ ವರ್ಕ್ ಔಟ್ ಗೆ ಕರಿತೇನೆ ಎಂದ ರಾಶಿಕಾ
ಸೂರಜ್ ಈ ಆರೋಪವನ್ನು ಕೂಲಾಗಿ ತೆಗೆದುಕೊಂಡ ರಾಶಿಕಾ, ಇನ್ಮುಂದೆ ನಾನು ವರ್ಷಕ್ ಔಟ್ ಮಾಡೋ ಮುನ್ನ ಕರೀತೇನೆ. ಸೂರಜ್, ವರ್ಕ್ ಔಟ್ ಮಾಡೋಣ ಬಾ ಅಂತೇನೆ. ಇಬ್ಬರೂ ವರ್ಕ್ ಔಟ್ ಮಾಡೋಣ ಎಂದಿದ್ದಾರೆ.
68
ಮನಸ್ಸಿನ ಮಾತು ಹೊರ ಹಾಕಿದ ರಾಶಿಕಾ
ರಾಶಿಕಾ ಮಾತು ಇಲ್ಲಿಗೆ ನಿಲ್ಲಲಿಲ್ಲ. ಹೇಳಿ ಕರೆಸಿಕೊಳ್ಳೋದು ಯಾಕೋ ಸರಿ ಅನ್ನಿಸಲ್ಲ ಅಂತ ಸೂರಜ್ ಹೇಳ್ತಿದ್ದಂತೆ, ಆಚೆ ಹೋದ್ಮೇಲೆ ನೀನೇ ಟ್ರೇನ್ ಮಾಡ್ಬೇಕು ಅಲ್ವಾ ಅಂತ ರಾಶಿಕಾ ಹೇಳಿದ್ದಾರೆ. ಇದಕ್ಕೆ ಸೂರಜ್ ಮುಗುಳ್ನಕ್ಕಿದ್ದಾರೆ.
78
ಮನೆಯಿಂದ ಹೊರಗೆ ಬಂದ್ಮೇಲೂ ಜೋಡಿ ಫಿಕ್ಸ್
ಈಗಾಗಲೇ ಸೂರಜ್, ರಾಶಿಕಾಗೆ ಪ್ರಪೋಸ್ ಮಾಡಿಯಾಗಿದೆ. ಅದಕ್ಕೆ ರಾಶಿಕಾ ಯಾವ್ದೆ ಉತ್ತರ ನೀಡಿರಲಿಲ್ಲ. ಈಗ ರಾಶಿಕಾ ಮಾತು ಕೇಳಿದ್ರೆ, ಇಬ್ಬರು ಕಮಿಟ್ ಆದಂತಿದೆ. ಮನೆಯಿಂದ ಹೊರಗೆ ಬಂದ್ಮೇಲೆ ಒಟ್ಟಿಗೆ ಜೀವನ ನಡೆಸುವ ಪ್ಲಾನ್ ಹಾಕಿದಂತಿದೆ.
88
ವೀಕ್ಷಕರಿಂದ ನಾಮಕರಣ
ಸೂರಜ್ ಹಾಗೂ ರಾಶಿಕಾ ಜೋಡಿಯನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಅವರಿಗೆ ಸೂರಾಶಿ ಅಂತ ನಾಮಕರಣ ಕೂಡ ಮಾಡಿಯಾಗಿದೆ. ಮತ್ತೆ ಕೆಲವರಿಗೆ ಇವ್ರ ಜೋಡಿ ಇಷ್ಟವಾಗ್ತಿಲ್ಲ. ಆದಷ್ಟು ಬೇಗ ರಾಶಿಕಾ ಹೊರಗೆ ಬರ್ಬೇಕು ಎನ್ನುತ್ತಿದ್ದಾರೆ ವೀಕ್ಷಕರು. ಈ ವಾರ ರಾಶಿಕಾ ಹಾಗೂ ಸೂರಜ್ ನಾಮಿನೇಟ್ ಆಗಿದ್ದು, ಯಾರು ಹೊರಗೆ ಬರ್ತಾರೆ ಕಾದು ನೋಡ್ಬೇಕಿದೆ.