ಬ್ರಹ್ಮಗಂಟು ಸೀರಿಯಲ್‌ನಲ್ಲಿ ದೀಪಾಳೇ ದಿಶಾ ಎಂಬ ಸತ್ಯ ಯಾರಿಗೂ ತಿಳಿಯದಿದ್ದರೂ, ರೂಪಾ ಮಾತ್ರ ಕಂಪ್ಯೂಟರ್ ಸಹಾಯದಿಂದ ಈ ರಹಸ್ಯವನ್ನು ಪತ್ತೆಹಚ್ಚಿದ್ದಾಳೆ. ಇದೀಗ ತನ್ನ ತಂಗಿ ದೀಪಾಳ ವಿರುದ್ಧವೇ ಸೇಡು ತೀರಿಸಿಕೊಳ್ಳಲು ರೂಪಾ ಮುಂದಾಗಿದ್ದು, ಕಥೆಯಲ್ಲಿ ಹೊಸ ತಿರುವು ಮೂಡಿದೆ.
ಬ್ರಹ್ಮಗಂಟು (Brahmagantu) ಸೀರಿಯಲ್‌ನಲ್ಲಿ ಇದೀಗ ಭಾರಿ ಟ್ವಿಸ್ಟ್ ಸಿಕ್ಕಿದೆ. ದೀಪಾ ದಿಶಾ ಆಗಿ ಬದಲಾಗಿದ್ದೇನೋ ನಿಜ. ಆದರೆ ಆಕೆಯ ರೂಪ ಒಂದು ಬದಲಾಗಿದ್ದು ಬಿಟ್ಟರೆ ಆಕೆಯ ಹಾವ ಭಾವ, ಆಕೆಯ ಸ್ಟೈಲ್ , ಮಾತನಾಡುವ ರೀತಿ ಯಾವುದೂ ಚೇಂಜ್ ಆಗಿಲ್ಲ. ಹಾಗಿದ್ದರೂ ಯಾರೊಬ್ಬರಿಗೂ ಅವಳ ಮೇಲೆ ಡೌಟ್ ಬರುವುದಿಲ್ಲ!
27
ಸೀರಿಯಲ್‌ನಲ್ಲಿ ಸಾಧ್ಯ
ಪೆದ್ದು ಪೆದ್ದಾಗಿರೋ ದೀಪಾ ಹೈ ಫೈ ಇಂಗ್ಲಿಷ್ ಅನ್ನು ಕೆಲವೇ ದಿನಗಳಲ್ಲಿ ಕಲಿತು, ಕೆಲವೇ ದಿನಗಳಲ್ಲಿ ಮಾಡೆಲ್ ರೀತಿ ವರ್ತಿಸಿರೋದು ಕೂಡ ಆಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಆಗಿತ್ತು. ಆದರೆ ಸೀರಿಯಲ್‌ನಲ್ಲಿ ಎಲ್ಲವೂ ಸಾಧ್ಯ ಎಂದು ಸುಮ್ಮನಾಗಿದ್ದರು.
37
ದೀಪಾಳ ಗುಟ್ಟು ಗುಟ್ಟಾಗಿಯೇ ಇದೆ!
ದೀಪಾ ಹೈಫೈ ಇಂಗ್ಲಿಷ್ನಲ್ಲಿ ಮಾತನಾಡಲು ಸಾಧ್ಯವಿಲ್ಲದ ಕಾರಣ ಯಾರೊಬ್ಬರೂ ಅವಳೇ ದೀಪಾ ಎಂದು ಗುರುತಿಸುವುದು ಕಷ್ಟವೇ ಆಗಿರಬಹುದು. ಆದರೆ ಅದೆಷ್ಟೋ ಸಂದರ್ಭಗಳಲ್ಲಿ ದಿಶಾ ಆಗಿದ್ದವಳು ಎಡವಟ್ಟು ಮಾಡಿಕೊಂಡಾಗಲೂ ಆಕೆನೇ ದೀಪಾ ಎನ್ನುವುದು ಯಾರಿಗೂ ಗೊತ್ತಾಗುವುದಿಲ್ಲ.
ಅತ್ಯಂತ ಬುದ್ಧಿವಂತ ಎನ್ನಿಸಿರುವ ಸೌಂದರ್ಯನಿಗಾಗಲೀ, ಖುದ್ದು ಗಂಡ ಚಿರುಗೆ ಆಗಲಿ ಯಾರಿಗೂ ಇವಳು ದೀಪಾ ಅನ್ನುವ ಸಂದೇಹವೇ ಬರದೇ ಇರುವುದು ಮಾತ್ರ ಜಗತ್ತಿನ 8ನೇ ಅದ್ಭುತ ಎಂದು ಸೋಷಿಯಲ್ ಮೀಡಿಯಾದಲ್ಲಿ ತಮಾಷೆ ಮಾಡುತ್ತಲೇ ಸೀರಿಯಲ್ ಎಂಜಾಯ್ ಮಾಡುತ್ತಿದ್ದಾರೆ.
57
ಗೊತ್ತಾಗೋಯ್ತು ಸತ್ಯ
ಆದರೆ ಇದೀಗ ರೂಪಾಗೆ ದಿಶಾ ಅಸಲಿಯತ್ತು ಗೊತ್ತಾಗಿಬಿಟ್ಟಿದೆ. ಅರಿಶಿಣದ ರೆಮಿಡಿ ಹೇಳಿದ್ದ ದಿಶಾ ಬಗ್ಗೆ ಡೌಟ್ ಹುಟ್ಟಿ ಆಕೆಯ ಬ್ಯಾಗ್ ಕೂಡ ಚೆಕ್ ಮಾಡಿದ್ದಾಳೆ ದಿಶಾ. ಅಲ್ಲಿ ಕನ್ನಡಕದ ಖಾಲಿ ಡಬ್ಬ, ಹಲ್ಲಿನ ಕ್ಲಿಪ್ ಖಾಲಿ ಬಾಕ್ಸ್ ಸಿಕ್ಕಿದೆ. ಆದರೆ ಅವಳೇ ದೀಪಾ ಎನ್ನುವ ಸಂದೇಹ ಬರಲಿಲ್ಲ.
67
ಅಸಲಿಯತ್ತು ಬಯಲು
ಬಳಿಕ ಅವಳಿಗೆ ಡೌಟ್ ಬರಲು ಶುರುವಾಗಿದೆ. ತನ್ನನ್ನು ದಿಶಾ ಅಕ್ಕ ಎಂದ ಪರಿ, ತನ್ನನ್ನು ಹಲವಾರು ಸಮಯ ಸೇವ್ ಮಾಡಿರುವುದನ್ನೆಲ್ಲಾ ನೆನಪಿಸಿಕೊಂಡ ಅವಳಿಗೆ ದಿಶಾನೇ ದೀಪಾ ಎನ್ನುವ ಡೌಟೇ ಇಲ್ಲ. ಅದಕ್ಕಾಗಿ ಕಂಪ್ಯೂಟರ್ನಲ್ಲಿ ಎಐ ಮೂಲಕ ದೀಪಾಳ ಮಾಡರ್ನ್ ಲುಕ್ ಮಾಡಿದ್ದಾಳೆ. ಆಗ ಅವಳೇ ದಿಶಾ ಎನ್ನುವುದು ಗೊತ್ತಾಗಿದೆ.
77
ತಲೆ ಇರುವವಳು ಒಬ್ಬಳೇ
ಇದೀಗ ತನ್ನ ಆಟ ಶುರುವಿಟ್ಟುಕೊಂಡಿದ್ದಾಳೆ ರೂಪಾ. ದೀಪಾಳಿಗೆ ಬುದ್ಧಿ ಕಲಿಸುತ್ತೇನೆ ಎಂದಿದ್ದಾರೆ. ಇಷ್ಟೆಲ್ಲಾ ಹೆಲ್ಪ್ ಮಾಡಿರೋ ತಂಗಿ ವಿರುದ್ಧನೇ ಸೇಡು ತೀರಿಸಿಕೊಳ್ಳುವ ರೂಪಾ ವಿರುದ್ಧ ನೆಟ್ಟಿಗರು ಕಿಡಿ ಕಾರುತ್ತಿದ್ದರೂ, ಸುಲಭದಲ್ಲಿ ದೀಪಾ ಮತ್ತು ದಿಶಾ ಒಂದೇ ಎಂದು ಅರ್ಥ ಮಾಡಿಕೊಂಡದ್ದಕ್ಕೆ ಇವಳೊಬ್ಬಳೇ ಸೀರಿಯಲ್‌ನಲ್ಲಿ ತಲೆ ಇರುವವಳು ಎನ್ನುತ್ತಿದ್ದಾರೆ.