Bigg Boss: ಸೂರಜ್ ಹೋದ್ಮೇಲೆ ಶುರುವಾಯ್ತು ರಾಶಿಕಾ ಎಂಟರ್‌ಟೈನ್‌ಮೆಂಟ್; ರಕ್ಷಿತಾ ಫುಲ್ ಸುಸ್ತು!

Published : Dec 30, 2025, 02:22 PM IST

ಬಿಗ್ ಬಾಸ್ ಫಿನಾಲೆ ಸಮೀಪಿಸುತ್ತಿದ್ದಂತೆ, ಸೂರಜ್ ಸಿಂಗ್ ಎಲಿಮಿನೇಟ್ ಆದ ಬಳಿಕ ನಟಿ ರಾಶಿಕಾ ತಮ್ಮ ಆಟದ ವೈಖರಿಯನ್ನು ಬದಲಿಸಿದ್ದಾರೆ. ಎಂಟರ್‌ಟೇನ್‌ಮೆಂಟ್ ಮಾಡುತ್ತಿಲ್ಲ ಎಂದು ನಾಮಿನೇಟ್ ಮಾಡಿದ ರಕ್ಷಿತಾ ಶೆಟ್ಟಿಗೆ ಕಚಗುಳಿ ಇಡುವ ಮೂಲಕ ತಿರುಗೇಟು ನೀಡಿದ್ದು, ಮನೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.

PREV
110

ಬಿಗ್ ಬಾಸ್ ಮನೆಯಲ್ಲಿ ಪಿನಾಲೆಗೆ 2 ವಾರಗಳು ಬಾಕಿ ಇರುವಾಗ ನಟಿ ರಾಶಿಕಾ ಫುಲ್ ಆಕ್ಟೀವ್ ಆಗಿದ್ದಾರೆ. ಅದರಲ್ಲಿಯೂ ಸೂರಜ್ ಸಿಂಗ್ ಜೊತೆಗೆ ಜೋಡಿಯಾಗಿ ಆಟವಾಡುತ್ತಿದ್ದ ರಾಶಿಕಾ, ಸೂರಜ್ ಎಲಿಮಿನೇಟ್ ಆದ ಬಳಿಕ ಅಸಲಿ ಆಟವನ್ನು ಆರಂಭಿಸಿದ್ದು, ಫುಲ್ ಎಂಟರ್‌ಟೇನ್‌ಮೆಂಟ್ ಮಾಡುತ್ತಿದ್ದಾಳೆ. ಆದರೆ, ರಾಶಿಕಾಳ ಎಂಟರ್‌ಟೇನ್‌ಮೆಂಟ್‌ಗೆ ರಕ್ಷಿತಾ ಸುಸ್ತು ಆಗಿದ್ದಾಳೆ.

210

ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ ಇನ್ನೇನು 2 ವಾರಗಳಷ್ಟೇ ಬಾಕಿಯಿವೆ. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದಿದ್ದ ಸೂರಜ್ ಸಿಂಗ್ ಉತ್ತಮವಾಗಿ ಆಟವಾಡುತ್ತಾ ಫಿನಾಲೆ ವಾರಕ್ಕೆ 2 ವಾರಗಳು ಇರುವಾಗ ಎಲಿಮಿನೇಟ್ ಆಗಿ ಕಳೆದ ವಾರವಷ್ಟೇ ಮನೆಯಿಂದ ಹೊರಗೆ ಹೋಗಿದ್ದಾರೆ.

310

ಆದರೆ, ಬಿಗ್ ಬಾಸ್ ಮನೆಯಲ್ಲಿ ನಟಿ ರಾಶಿಕಾ ಜೊತೆಗೆ ತುಂಬಾ ಆತ್ಮೀಯವಾಗಿದ್ದರು. ಹೀಗಾಗಿ, ಎಲ್ಲ ಸ್ಪರ್ಧಿಗಳು ಸೂರಜ್ ಸಿಂಗ್ ಹಾಗೂ ರಾಶಿಕಾ ಅವರಿಗೆ ಇಬ್ಬರೂ ಸಪೋರ್ಟ್ ಮೂಲಕ ಆಟವಾಡುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು.

410

ಇದಕ್ಕೆ ಕಿಚ್ಚನ ಪಂಚಾಯಿತಿಯಲ್ಲಿ ಸ್ವತಃ ಕಿಚ್ಚ ಸುದೀಪ್ ಅವರು ವಾರ್ನಿಂಗ್ ನೀಡಿದ್ದರು. ಇದಾದ ಬಳಿಕ ಎಚ್ಚೆತ್ತುಕೊಂಡರೂ ತಮ್ಮ ನಡುವಿನ ಆಯತ್ಮೀಯ ಸ್ನೇಹವನ್ನು ಮಾತ್ರ ಬಿಟ್ಟಿರಲಿಲ್ಲ. ಆದರೆ, ಈ ಇಬ್ಬರ ಪೈಕಿ ಯಾರೂ ಕೂಡ ಕಪ್ ಗೆದ್ದುಕೊಂಡು ಹೋಗುತ್ತಾರೆ ಎನ್ನುವ ಮಟ್ಟಕ್ಕೆ ಪ್ರಭಲ ಸ್ಪರ್ಧಿಯಾಗಿ ಅಂತೂ ಕಾಣಿಸಿಕೊಳ್ಳುತ್ತಿರಲಿಲ್ಲ.

510

ಸ್ವತಃ ವೀಕ್ಷಕರೇ ಇವರು ಜೋಡಿಯಾಗಿ ಆಟವಾಡುವುದನ್ನು ಬಿಟ್ಟು ಮನೆಯಲ್ಲಿ ತಮ್ಮ ಸ್ವಂತ ಸಾಮರ್ಥ್ಯ ತೋರಿಸುತ್ತಿಲ್ಲ ಎಂಬುದು ವೀಕ್ಷಕರ ವಾದವೂ ಆಗಿತ್ತು. ಹೀಗಾಗಿಯೇ ಓಟ್ ಮಾಡುವವರ ಸಂಖ್ಯೆ ಕುಸಿತವಾಗಿದ್ದು, ಈ ವಾರ ಸೂರಜ್ ಸಿಂಗ್ ಎಲಿಮಿನೇಟ್ ಆಗಿ ಹೊರಗೆ ಹೋಗಿದ್ದಾರೆ.

610

ಇದೀಗ ನಟಿ ರಾಶಿಕಾ ಅವರು ತಮಗೆ ಇನ್ನುಮೇಲೆ ಎಲಿಮಿನೇಟ್ ಆಗುವ ಭೀತಿ ಹೆಚ್ಚಾಗಿದೆ. ಆದ್ದರಿಂದ ಬಿಗ್ ಬಾಸ್ ಮನೆಯಲ್ಲಿ ಸೂರಜ್ ಸಿಂಗ್ ಹೊರಗೆ ಹೋದ ನಂತರ ಎಂಟರ್‌ಟೇನ್ಮೆಂಟ್ ಮಾಡುವುದಕ್ಕೆ ಮುಂದಾಗಿದ್ದಾಳೆ.

710

ಬಿಗ್ ಬಾಸ್ ಮನೆಯಲ್ಲಿ ಕೊನೆಯ ಎರಡು ವಾರಗಳು ಬಾಕಿ ಇರುವಾಗ ಎಲಿಮಿನೇಟ್‌ನಿಂದ ತಪ್ಪಿಸಿಕೊಂಡರೆ ಫಿನಾಲೆಗೆ ಲಗ್ಗೆ ಇಡುವುದು ಖಚಿತವಾಗುತ್ತದೆ. ಆದರೆ, ಫಿನಾಲೆ ಸನಿಹದಲ್ಲಿ ಎಲಿಮಿನೇಟ್‌ ಆಗುವುದಕ್ಕೆ ಯೂಟೂಬರ್ ರಕ್ಷಿತಾ ಶೆಟ್ಟಿ ರಾಶಿಕಾ ಅವರನ್ನು ನಾಮಿನೇಟ್ ಮಾಡಿದ್ದಾರೆ.

810

ಈ ವೇಳೆ ನೀವು ಮನೆಯಲ್ಲಿ ಎಂಟರ್‌ಟೇನ್‌ಮೆಂಟ್ ಮಾಡುತ್ತಿಲ್ಲ ಎಂಬ ಕಾರಣವನ್ನೂ ಕೇಳಿದ್ದಾರೆ. ಇದಕ್ಕೆ ಸ್ವಲ್ಪ ಕೋಡಗೊಂಡ ರಾಶಿಕಾ ಅವರು ನಾಮಿನೇಷನ್ ಪ್ರಕ್ರಿಯೆ ಮುಗಿದ ನಂತರ ರಕ್ಷಿತಾ ಬಳಿ ಬಂದು ನಾನು ಎಂಟರ್‌ಟೇನ್‌ಮೆಂಟ್ ಮಾಡುತ್ತಿಲ್ಲವಾ ಎಂದು ರೇಗಿಸಿದ್ದಾಳೆ.

910

ಜೊತೆಗೆ, ನಾನು ಇದೀಗ ಎಂಟರ್‌ಟೇನ್‌ಮೆಂಟ್ ಮಾಡ್ತೀನಿ ನೋಡ್ತಿರು ಎಂದು ರಕ್ಷಿತಾಗೆ ಕಚಗುಳಿ ಇಡುತ್ತಾ ಮನೆತುಂಬಾ ಓಡಾಡಿಸಿದ್ದಾರೆ. ಇದಕ್ಕೆ ಇದು ನೀವು ಮ್ಯಾನ್ ಹ್ಯಾಂಡ್ಲಿಂಗ್ ಮಾಡುತ್ತಿದ್ದೀರಿ ಎಂದು ವಾದ ಮಾಡಿದ್ದಾರೆ. ಆದರೆ, ಇದು ಮ್ಯಾನ್ ಹ್ಯಾಂಡ್ಲಿಂಗ್ ಅಂದರೆ ಹಲ್ಲೆ ಮಾಡೋದು, ನಾನು ಕಚಗುಳಿ ಇಡ್ತಾ ಎಂಟರ್‌ಟೇನ್‌ಮೆಂಟ್ ಮಾಡ್ತಿದ್ದೀನಿ ಎಂದು ನಗಾಡಿದ್ದಾರೆ.

1010

ಒಟ್ಟಾರೆಯಾಗಿ ಸೂರಜ್ ಮನೆಯಲ್ಲಿರುವವರೆಗೆ ಯಾರ ಜೊತೆಗೂ ಅಷ್ಟೊಂದು ಬೆರೆಯದ ರಾಶಿಕಾ ಇದೀಗ ರಕ್ಷಿತಾ ಸೇರಿದಂತೆ ಉಳಿದ ಸ್ಪರ್ಧಿಗಳ ಜೊತೆಗೆ ಹೆಚ್ಚಿನ ಒಡನಾಟ ಮಾಡುತ್ತಿರುವುದು ಕಂಡುಬರುತ್ತಿದೆ ಎಂದು ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories