ಕಿರುತೆರೆ ನಟಿ ನಂದಿನಿ ಸಾವು: ಮಗಳಿಗೆ ನಾನೇ ಮಹಾನಟಿ ಅಂತಿದ್ದೆ, ಸರ್ಕಾರಿ ಕೆಲಸದ ಬಗ್ಗೆ ಒತ್ತಡ ಹಾಕಿರಲಿಲ್ಲ- ತಾಯಿ

Published : Dec 30, 2025, 12:33 PM IST

ಕಿರುತೆರೆ ನಟಿ ನಂದಿನಿ ಅವರ ಆತ್ಮ*ಹತ್ಯೆ ಕುರಿತು ಅವರ ತಾಯಿ ಬಸವರಾಜೇಶ್ವರಿ ಕಣ್ಣೀರು ಹಾಕಿದ್ದಾರೆ. ಮಗಳಿಗೆ ಮುಂಗೋಪ ಜಾಸ್ತಿ ಇತ್ತು, ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ ಎಂದಿರುವ ಅವರು, ಸರ್ಕಾರಿ ಕೆಲಸದ ವಿಚಾರವಾಗಿ ಯಾವುದೇ ಒತ್ತಡವಿರಲಿಲ್ಲ ಎಂದಿದ್ದಾರೆ.

PREV
17

ವಿಜಯನಗರ (ಡಿ.30): ನನ್ನ ಮಗಳು ಹುಲಿ ಅಂತಿದ್ದೆ, ಬಂಗಾರ ಅಂತಿದ್ದೆ. ಅವಳಿಗೆ ಅಪ್ಪನ ನೌಕರಿಯನ್ನು ಮಾಡುವ ಸರ್ಕಾರಿ ಕೆಲಸದ ವಿಚಾರ ಎರಡು ವರ್ಷಕ್ಕೆ ಸತ್ತು ಹೋಗಿತ್ತು. ಹೀಗಾಗಿ, ನಾವು ಕೂಡ ಬೇಡ ಅಂತಾ ಬಿಟ್ಟಿದ್ದೆವು. ಕಳೆದ 20 ದಿನಗಳಿಂದ ನನ್ನ ಜೊತೆ ಮಾತುಕತೆ ಮಾಡಿರಲಿಲ್ಲ. ಅವಳಿಗೆ ಸಿಟ್ಟು ಕೋಪ ಜಾಸ್ತಿ ಇತ್ತು. ಅಚಾತುರ್ಯದಿಂದ ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ ಎಂದು ನಟಿ ನಂದಿನಿ ಅವರ ತಾಯಿ ಶಿಕ್ಷಕಿ ಬಸವರಾಜೇಶ್ವರಿ ಕಣ್ಣೀರು ಹಾಕಿದ್ದಾರೆ.

27

ಖ್ಯಾತ ಕಿರುತೆರೆ ನಟಿ ನಂದಿನಿ ಆತ್ಮ*ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಗಟೇರಿಯ ನಂದಿನಿ ನಿವಾಸದಲ್ಲಿ ನೀರವಮೌನ ಆವರಿಸಿದೆ. ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮ ಇದೀಗ ಊರಿನ ಪ್ರತಿಭೆಯನ್ನು ಕಳೆದುಕೊಂಡು ಮಮ್ಮಲ ಮರುಗುತ್ತಿದೆ. ಮಗಳ ನೆನೆದು ತಾಯಿ ಶಿಕ್ಷಕಿ ಬಸವರಾಜೇಶ್ವರಿ ಕಣ್ಣೀರು ಹಾಕುತ್ತಿದ್ದಾರೆ. ನನ್ನ ಮಗಳಿಗೆ ನಾನೇ ಮಹಾನಟಿ ಅಂತಾ ಬಿರುದು ಕೊಟ್ಟಿದ್ದೆ. ಬಳ್ಳಾರಿಯಲ್ಲಿ ಪಿಯುಸಿ ಮುಗಿಸಿ ಬಳಿಕ ಬೆಂಗಳೂರಿನ ಹೆಸರಘಟ್ಟ ಇಂಜಿನಿಯರಿಂಗ್ ಕಾಲೇಜಿಗೆ ತೆರಳಿದ್ದಳು.

37

ಬೆಂಗಳೂರಿನಲ್ಲಿ ಇದ್ದಾಗ ಆ್ಯಕ್ಟಿಂಗ್ ಕೋರ್ಸ್ ಮಾಡ್ತೀನಿ ಅಂದಳು, ಅದಕ್ಕೂ ವಿರೋಧ ಮಾಡಿರಲಿಲ್ಲ. ನಾನು ಶಿಕ್ಷಕಿಯಾಗಿದ್ದೆ, ನಮ್ಮ ಯಜಮಾನರು ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಅವರು ತೀರಿಕೊಂಡ ಬಳಿ ಅನುಕಂಪ ಆಧಾರಿತ ನೌಕರಿ ಮಾಡಲು ಹೇಳಿದಾಗ ಬೇಡ ಅಂದಳು. ಹೀಗಾಗಿ, ಅದನ್ನ ಅಲ್ಲಿಗೆ ಬಿಟ್ಟುಬಿಟ್ಟಿದ್ದೆವು. ಬಳಿಕ ಅವಳೇ ಮತ್ತೆ ಕೆಲಸ ಮಾಡ್ತೀನಿ ನೋಡಿ ಎಂದಾಗ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೆವು.

47

ಇದಾದ ಕೆಲವು ದಿನಗಳ ನಂತರ ಪುನಃ ಫೋನ್ ಮಾಡಿ ನನಗೆ ಧಾರಾವಾಹಿಯಲ್ಲಿ ಚೆನ್ನಾಗಿ ಅವಕಾಶಗಳು ಸಿಗುತ್ತಿವೆ, ಹೀಗಾಗಿ ಸರಕಾರಿ ಕೆಲಸ ಬೇಡ ಅಂದಳು. ಮಗಳಿಗೆ ಮುಂಗೋಪ ಜಾಸ್ತಿ ಇತ್ತು. ನಮ್ಮ ಮೇಲೆ ಸಿಟ್ಟು ಸಿಟ್ಟು ಮಾಡುತ್ತಿದ್ದಳು. ಆದರೆ, ಅವಳ ನಿರ್ಧಾರಕ್ಕೆ ನಾವೇನೂ ವಿರೋಧ ಮಾಡಿರಲಿಲ್ಲ. ಇದೀಗ ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ. ನನ್ನ ಮಗಳು ಬಂಗಾರ..., ಆಕೆಯ ಬಗ್ಗೆಯಾಗಲಿ ನಮ್ಮ ಬಗ್ಗೆ ಆಗಲಿ ಸುಳ್ಳು ಸುದ್ದಿ ಅಪಪ್ರಚಾರ ಮಾಡಬೇಡಿ ಎಂದು ತಾಯಿ ಬಸವರಾಜೇಶ್ವರಿ ಕಣ್ಣೀರಿಡುತ್ತಾ ಮನವಿ ಮಾಡಿದ್ದಾರೆ.

57

ನನ್ನ ಚಿಕ್ಕಮಗಳು ಮೈಸೂರು ಎಕ್ಸಾಂಗೆ ಹೋಗಿದ್ದಳು, ನಂದಿನಿ ಏನೋ ಮಾಡಿಕೊಂಡಿದ್ದಾಳೆ ಅಂದಾಗ ಜೀವಾನೆ ಒಡೆದುಹೋಯ್ತು. ಮಗಳು ಬ್ಯುಸಿ ಇರೋದ್ರಿಂದ ಭೇಟಿ ಆಗಲು ಆಗಿರಲಿಲ್ಲ, ಅವಳಿಗೆ ಫ್ರೀ ಇದ್ದಾಗ ಫೋನ್ ಮಾಡು ಎಂದಿದ್ದೆ. ಆದರೆ, ಸ್ಯೂಸೈಡ್ ಮಾಡಿಕೊಳ್ಳುವಂತಹ ನೋವು ಯಾರೂ ಕೊಟ್ಟಿಲ್ಲ. ಬೆಳಗ್ಗೆ 10.45ಗೆ ಪಿಜಿಗೆ ಬಂದಿದ್ದಾಳೆ, ಅರ್ಧ ಗಂಟೆ ಹೊತತಿನಲ್ಲಿ ಅಂದರೆ 11.15ಗೆ ಹೀಗೆ ಆಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

67

ನನ್ನ ಮಗಳ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಬೇಡಿ. ನನ್ನ ಮಗಳು ಹುಲಿ ಅಂತಿದ್ದೆ, ಬಂಗಾರ ಅಂತಿದ್ದೆ. ಅವಳಿಗೆ ಅಪ್ಪನ ನೌಕರಿಯನ್ನು ಮಾಡುವ ಸರ್ಕಾರಿ ಕೆಲಸದ ವಿಚಾರ ಎರಡು ವರ್ಷಕ್ಕೆ ಸತ್ತು ಹೋಗಿತ್ತು. ಹೀಗಾಗಿ, ನಾವು ಕೂಡ ಬೇಡ ಅಂತಾ ಬಿಟ್ಟಿದ್ದೆವು. ಆದರೆ, ಮಾಧ್ಯಮಗಳಲ್ಲಿ ಬೇರೆ ಬೇರೆ ಸುದ್ದಿ ಬರ್ತಿದೆ ಅದನ್ನ ನಿಲ್ಲಿಸಿ. ಪಿಯುಸಿ ಮುಗಿಸಿದಾಗ ಹೆಸರಘಟ್ಟ ಆರ್.ಆರ್.ಇಂಜಿನಿಯರಿಂಗ್ ಕಾಲೇಜಿನಲ್ಲಿ ಗವರ್ನಮೆಂಟ್ ಸೀಟ್ ಸಿಕ್ಕಿತ್ತು ಎಂದು ಮಾಹಿತಿ ನೀಡಿದರು.

77

ಮಗಳು ಬೆಂಗಳೂರಿನಲ್ಲಿದ್ದುಕೊಂಡು ನಟನೆ ಮಾಡುತ್ತಿರುವ ವೇಳೆ ಅಪ್ಪನ ನೌಕರಿಯ ಬಗ್ಗೆ ಮಾತನಾಡುತ್ತಾ ನಿನಗೆ ಕೆಲಸ ಇಷ್ಟವಿದ್ದರೆ ಮಾಡು, ಇಲ್ಲವೆಂದರೆ ಬಿಟ್ಟುಬಿಡು ಎಂದಿದ್ದೆ. ಈ ವೇಳೆ ನನ್ನ ನಂಬರ್ ಬ್ಲಾಕ್ ಮಾಡ್ತೀನಿ ಅಂದಿದ್ದಳು. ಇತ್ತೀಚೆಗೆ ಕಳೆದ 20 ದಿನಗಳಿಂದ ನನ್ನ ಜೊತೆ ಮಾತುಕತೆ ಮಾಡಿರಲಿಲ್ಲ. ಅವಳಿಗೆ ಸಿಟ್ಟು ಕೋಪ ಜಾಸ್ತಿ ಇತ್ತು. ಅಚಾತುರ್ಯದಿಂದ ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ. ಯಾವ ಪೋಷಕರಿಗೆ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಇರಲ್ಲ ಹೇಳಿ ಎಂದು ಗೋಳಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories