ಕೆಂಪು ತಂಡದ ನಾಯಕಿ ಅಶ್ವಿನಿ ಗೌಡ, ಕ್ಯಾಪ್ಟನ್ಸಿ ಟಾಸ್ಕ್‌ಗೆ ಅಭಿಷೇಕ್ ಅವರನ್ನು ಆಯ್ಕೆ ಮಾಡಿರುವುದು ಚರ್ಚೆಗೆ ಕಾರಣವಾಗಿದೆ. 'ಹನಿ ಹನಿ ಡ್ರಮ್ ಕಹಾನಿ' ಟಾಸ್ಕ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ರಕ್ಷಿತಾ ಶೆಟ್ಟಿಯನ್ನು ಕಡೆಗಣಿಸಲಾಗಿದೆ ಎಂದು ಧನುಷ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಂಪು ತಂಡದ ನಾಯಕಿಯಾಗಿರುವ ಅಶ್ವಿನಿ ಗೌಡ ತಮ್ಮ ತಂಡದಲ್ಲಿ ಆಟವಾಡಿದ ಅಭಿಷೇಕ್ ಮತ್ತು ಧ್ರುವಂತ್ ಅವರನ್ನು ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆ ಮಾಡಿದ್ದಾರೆ. ಕ್ಯಾಪ್ಟನ್ಸಿ ಆಟಕ್ಕೆ ಸದಸ್ಯರನ್ನು ಆಯ್ಕೆ ವೇಳೆ ಅಶ್ವಿನಿ ಗೌಡ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡ್ರಾ ಎಂಬ ಚರ್ಚೆಗಳು ಶುರುವಾಗಿವೆ. ಈ ಚರ್ಚೆಗೆ ಕಾರಣ ಧನುಷ್ ಆಡಿದ ಮಾತುಗಳು.
25
ಹನಿ ಹನಿ ಡ್ರಮ್ ಕಹಾನಿ ಟಾಸ್ಕ್
ಹನಿ ಹನಿ ಡ್ರಮ್ ಕಹಾನಿ ಟಾಸ್ಕ್‌ನಲ್ಲಿ ಅಶ್ವಿನಿ ಗೌಡ ತಂಡದ ಪರವಾಗಿ ರಕ್ಷಿತಾ ಶೆಟ್ಟಿ ಆಟವಾಡಿದ್ದರು. ಗುರಾಣಿ ಹಿಡಿದು ನಿಂತು ರಕ್ಷಿತಾ ಶೆಟ್ಟಿ, ಎದುರಾಳಿಗಳನ್ನು ತಡೆಯುವ ಕೆಲಸವನ್ನು ಮಾಡುತ್ತಾರೆ. ಅಷ್ಟೇ ಅಲ್ಲ ಎದುರಾಳಿಗಳ ಕೈಯಲ್ಲಿದ್ದ ಬಕೆಟ್ ಒಡೆದು ಹಾಕುತ್ತಾರೆ. ಇದರಿಂದ ಡ್ರಮ್‌ಗೆ ನೀರು ತುಂಬಿಸುವ ಪ್ರಕ್ರಿಯೆ ವಿಳಂಬವಾಗುವಂತೆ ನೋಡಿಕೊಳ್ಳುತ್ತಾರೆ. ಇದೇ ಆಟದ ವೇಳೆ ಕಾಲು ಜಾರಿ ರಕ್ಷಿತಾ ಬೀಳುತ್ತಾರೆ.
35
ರಕ್ಷಿತಾ ಶೆಟ್ಟಿ ಆಟ
ಆದ್ರೆ ರಕ್ಷಿತಾ ಶೆಟ್ಟಿ ಆಟಕ್ಕೆ ಸಾಸಿವೆ ಕಾಳಿನಷ್ಟು ಮೆಚ್ಚುಗೆ ಸಿಗುತ್ತದೆ. ಟಾಸ್ಕ್ ಮುಗಿಯುತ್ತಿದ್ದಂತೆ ರಕ್ಷಿತಾ ತನ್ನ ಪಾಡಿಗೆ ಉಳಿಯುತ್ತಾರೆ. ಹನಿ ಹನಿ ಡ್ರಮ್ ಕಹಾನಿ ವಿನ್ ಬಳಿಕ ಯಾವ ಆಟಗಾರರನ್ನು ಕ್ಯಾಪ್ಟನ್ಸಿ ಓಟಕ್ಕೆ ಅಯ್ಕೆ ಮಾಡುತ್ತೀರಿ ಎಂದು ಅಶ್ವಿನಿ ಗೌಡ ಅವರಿಗೆ ಬಿಗ್‌ಬಾಸ್ ಕೇಳುತ್ತಾರೆ. ತಮ್ಮದೇ ಕೆಲವೊಂದು ಕಾರಣಗಳನ್ನು ನೀಡಿ ಅಭಿಷೇಕ್ ಅವರನ್ನು ಆಯ್ಕೆ ಮಾಡುತ್ತಾರೆ.
ಈ ಹಿಂದಿನ ವಾರದಲ್ಲಿ ಅಭಿಷೇಕ್ ಅವರನ್ನು ನಾಮಿನೇಟ್ ಮಾಡಲು ಅಶ್ವಿನಿ ಗೌಡ ಮುಂದಾಗಿರುತ್ತಾರೆ. ಆದ್ರೆ ಈ ಬಾರಿ ಅಭಿಷೇಕ್ ಅವರನ್ನು ಅಶ್ವಿನಿ ಗೌಡ ಕ್ಯಾಪ್ಟನ್ಸಿ ಆಟಕ್ಕೆ ಆಯ್ಕೆ ಮಾಡಿದ್ದಾರೆ. ಈ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಕ್ಯಾಪ್ಟನ್ಸಿ ಆಟಕ್ಕೆ ರಕ್ಷಿತಾ ಹೆಸರು ಸೂಕ್ತವಾಗಿತ್ತು ಎಂದು ಸ್ಪಂದನಾ ಮುಂದೆ ಧನುಷ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.
ಈ ಆಟದಲ್ಲಿ ಅಭಿಷೇಕ್ ಜೊತೆ ಧನುಷ್ ಸಹ ಡ್ರಮ್ ಹೊತ್ತುಕೊಂಡಿರುತ್ತಾರೆ. ಈ ಟಾಸ್ಕ್‌ನಲ್ಲಿ ಅಭಿಷೇಕ್ ಅವರಿಗಿಂತ ರಕ್ಷಿತಾ ತುಂಬಾ ಆಕ್ರಮಣಕಾರಿಯಾಗಿ ಆಟವಾಡಿರೋದನ್ನು ಧನುಷ್ ಗಮನಿಸಿದ್ದಾರೆ. ಇನ್ನು ವಂಶದ ಕುಡಿ ಅಂತಾ ಕರೆಯುವ ಗಿಲ್ಲಿ ನಟ ಎರಡೂ ಟಾಸ್ಕ್‌ಗಳಲ್ಲಿ ರಕ್ಷಿತಾ ಶೆಟ್ಟಿಯನ್ನು ಆಯ್ಕೆ ಮಾಡಿಕೊಳ್ಳದಿರೋದರ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.