BBK 12: ಬಿಗ್ ಬಾಸ್ ಕನ್ನಡದಲ್ಲಿ ಅಶ್ವಿನಿ ಗೌಡ ಪತ್ರದ ವಿಷಯ ಬಂದಾಗ ತಮ್ಮ ಪತ್ರವನ್ನು ತ್ಯಾಗ ಮಾಡಿ ಜಾಹ್ನವಿಗೆ ಪತ್ರ ಸಿಗುವಂತೆ ಮಾಡಿ, ಕಣ್ಣೀರಿಟ್ಟರು. ಆದರೆ ವೀಕ್ಷಕರು ಮಾತ್ರ ಅಶ್ವಿನಿಯ ಕಣ್ಣೀರನ್ನು ನಂಬುತ್ತಲೇ ಇಲ್ಲ. ಬದಲಾಗಿ ಅವರು ಏನು ಹೇಳುತ್ತಿದ್ದಾರೆ ನೋಡಿ.
ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಸ್ಪರ್ಧಿಗಳ ಹೊಸ ಹೊಸ ಮುಖ ಅನಾವರಣ ಆಗುತ್ತೆ. ಇದೀಗ ಈ ವಾರದ ಇಮ್ಯೂನಿಟಿ ಮತ್ತು ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಅಶ್ವಿನಿ ಗೌಡ ತಮಗೆ ಬಂದ ಪತ್ರವನ್ನು ತ್ಯಾಗ ಮಾಡಿ, ಕಣ್ಣೀರಿಟ್ಟಿದ್ದಾರೆ.
26
ಜಾಹ್ನವಿಗಾಗಿ ಇಮ್ಯೂನಿಟಿ ತ್ಯಾಗ ಮಾಡಿದ ಅಶ್ವಿನಿ
ಅಶ್ವಿನಿ ಗೌಡ ಜಾಹ್ನವಿಗಾಗಿ ತಮ್ಮ ಮಗನ ಪತ್ರ ಹಾಗೂ ಇಮ್ಯೂನಿಟಿಯನ್ನ ತ್ಯಾಗ ಮಾಡೀದ್ದಾರೆ. ಈ ಕುರಿತಂತೆ ಮಾತನಾಡಿದ ಅಶ್ವಿನಿ ಗೌಡ ಒಬ್ಬ ತಾಯಿ ಎಷ್ಟು ಮುಖ್ಯನೋ, ತಂದೆ ಕೂಡ ಅಷ್ಟೇ ಮುಖ್ಯ ಆಗಿರ್ತಾರೆ. ನನಗೆ ಜಾಹ್ನವಿ ಅವರ ಜರ್ನಿ ಗೊತ್ತಿದೆ. ನಾನು ಅವರು ಒಂದೇ ದೋಣಿಯಲ್ಲಿ ಸಾಗುತ್ತಿದ್ದೇವೆ ಎಂದಿದ್ದಾರ ಅಶ್ವಿನಿ.
36
ಕಣ್ಣೀರಿಟ್ಟ ಅಶ್ವಿನಿ
ನನ್ನ ಮಗನಿಗೆ ಸಂಪೂರ್ಣವಾಗಿ ತಂದೆಯ ಪ್ರೀತಿ ಸಿಕ್ಕಿದೆ. ನನಗೆ ನನ್ನ ತಂದೆ ಬೇಕು ಅಂದರೂ ಕೂಡ ನನಗೆ ನನ್ನ ತಂದೆ ಸಿಗಲ್ಲ. ಆದರೆ, ಜಾಹ್ನವಿ ಮಗನಿಗೆ ತಂದೆಯಾಗಿ ತಾಯಿಯಾಗಿ ಜಾಹ್ನವಿ ನಿಂತಿದ್ದಾರೆ. ಅವರಿಗೆ ಈ ಪತ್ರ ಡಿಸರ್ವಿಂಗ್ ಅಂತ ನನಗೆ ಅನಿಸುತ್ತೆ. ಹಾಗಾಗಿ ಜಾಹ್ನವಿಗೆ ಪತ್ರವನ್ನ ಕೊಡೋದಾಗಿ ಹೇಳಿ ಕಣ್ಣೀರಿಟ್ಟರು.
ಅಶ್ವಿನಿ ಗೌಡ ಇಷ್ಟೇಲ್ಲಾ ಹೇಳಿ, ತ್ಯಾಗ ಮಾಡಿದರೂ ಸಹ ವೀಕ್ಷಕರಿಗೆ ಅಶ್ವಿನಿ ಗೌಡ ಮೇಲೆ ನಂಬಿಕೆ ಇಲ್ಲ. ಅಶ್ವಿನಿ ಗೌಡ ಕಣ್ಣಿರಿಟ್ಟಿದ್ದೆಲ್ಲಾ ಫೇಕ್ ಅಂತಿದ್ದಾರೆ ಜನ. ರಕ್ಷಿತಾಗೆ ಲೆಟರ್ ಸಿಗದಂತೆ ಮಾಡಿದ ನಿಮ್ಮ ಮೇಲೆ ನಮಗೆ ಯಾವುದೇ ಕನಿಕರ ಇಲ್ಲ ಎನ್ನುತ್ತಿದ್ದಾರೆ.
56
ಏನು ಹೇಳುತ್ತಿದ್ದಾರೆ ಜನ?
ಅಶ್ವಿನಿ ಗೌಡಾಗೆ ಜನ ನೀವು ಎಷ್ಟೇ ಡವ್ ಮಾಡಿದ್ರೂ ನಿಮ್ಮನ್ನು ನಾವು ನಂಬೋದಿಲ್ಲ. ನಿಮಗೆ ಓಟ್ ಕೊಡಲ್ಲ ಎನ್ನುತ್ತಿದ್ದಾರೆ. ಅಶ್ವಿನಿ ಮೈಂಡ್ ವಾಯ್ಸ್ ಈ ವಾರ ಕಿಚ್ಚನ ಚಪ್ಪಾಳೆ ನನಗೆ ಎಂದು ಟೃಓಲ್ ಮಾಡುತ್ತಿದ್ದಾರೆ ಜನ.
66
ನಿಜವಾಗ್ಲೂ ನಾಟಕ ಮಾಡಿದ್ರ ಅಶ್ವಿನಿ
ನಿಜವಾಗ್ಲೂ ಅಶ್ವಿನಿ ಅತ್ತಿದ್ದು ನಾಟಕಾನ ಎನ್ನುವ ಪ್ರಶ್ನೆ ಮೂಡಿದೆ. ಆದರೆ ಯಾರಿಗಾದರೂ ತಮ್ಮ ಮನೆಯಿಂದ ಪತ್ರ ಬರುವಾಗ ಯಾರಾದರೂ ಇಮೋಷನಲ್ ಆಗೋದು ಸಾಮಾನ್ಯ. ಹಾಗಾಗಿಯೇ ಅಶ್ವಿನಿಯವರು ಕೂಡ ಮಗನನ್ನು ನೆನಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ ಅಷ್ಟೇ.