Karna: ಏನಾಗ್ಬಾರ್ದು ಎಂದು ವೀಕ್ಷಕರು ಅಂದುಕೊಂಡಿದ್ರೋ ಅದೇ ಆಗೋಯ್ತು! ಕರ್ಣ-ನಿಧಿ ಒಂದಾಗೋದು ಇನ್ನು ಕನಸೇ

Published : Nov 07, 2025, 09:48 PM IST

ತಾನು ಗರ್ಭಿಣಿ ಎಂದು ತಿಳಿದು ಮಗುವನ್ನು ತೆಗೆಸಲು ನಿತ್ಯಾ ನಿರ್ಧರಿಸುತ್ತಾಳೆ. ಆದರೆ, ಅನಾಥ ಮಗುವಿನ ನೋವನ್ನರಿತ ಕರ್ಣ,  ಒಂದು ನಿರ್ಧಾರ ತೆಗೆದುಕೊಂಡು ನಿತ್ಯಾಗೆ ಆಘಾತ ನೀಡುತ್ತಾನೆ. ಈ ಬೆಳವಣಿಗೆಯು ಕರ್ಣ ಮತ್ತು ನಿಧಿ ಒಂದಾಗುವ ಅಭಿಮಾನಿಗಳ ಆಸೆಗೆ ತಣ್ಣೀರೆರಚಿದೆ.

PREV
17
ಗರ್ಭಿಣಿ ಎನ್ನುವ ಸತ್ಯ

ಕರ್ಣ ಸೀರಿಯಲ್​ (Karna Serial) ಇದೀಗ ರೋಚಕ ಹಂತ ತಲುಪಿದೆ. ತೇಜಸ್​ನನ್ನು ಹುಡುಕಿ ನಿತ್ಯಾ ಮತ್ತು ಕರ್ಣ ಚಿಕ್ಕಮಗಳೂರಿಗೆ ಬಂದರೂ ಆತ ಸಿಗಲೇ ಇಲ್ಲ. ಅದೇ ಇನ್ನೊಂದೆಡೆ, ತಾನು ಗರ್ಭಿಣಿ ಎನ್ನುವ ಸತ್ಯ ಕರ್ಣನಿಂದ ನಿತ್ಯಾಗೆ ತಿಳಿದಿದೆ.

27
ನೋವಿನ ಅನುಭವ

ಅಪ್ಪನ ಹೆಸರೇ ಇಲ್ಲದ ಈ ಮಗುವನ್ನು ಭೂಮಿಯ ಮೇಲೆ ತಂದರೆ ತಾನು ಏನೆಲ್ಲಾ ನೋವು ಅನುಭವಿಸಬೇಕು ಎಂದು ಅರಿತಿರೋ ನಿತ್ಯಾ ಆ ಮಗುವನ್ನು ತೆಗೆಸಲು ಹೋದಾಗ ಕರ್ಣ ಅದಕ್ಕೆ ಅಡ್ಡಿ ಬರುತ್ತಾನೆ. ಇದಕ್ಕೆ ಸಂಬಂಧಿಸಿದಂತೆ ಕರ್ಣ ಮತ್ತು ನಿತ್ಯಾನಡುವೆ ವಾಗ್ಯುದ್ಧವೇ ನಡೆದು ಹೋಗುತ್ತದೆ.

37
ಅನಾಥ ಮಗು

ನಾನು ಅನಾಥನಾಗಿ ಬೆಳೆದವನು, ಯಾವ ಮಗುವೂ ಅನಾಥವಾಗಿ ಬೆಳೆಯಬಾರದು ಎಂದು ಕರ್ಣ ಹೇಳಿದಾಗ, ಕರ್ಣ ಅನಾಥ ಎನ್ನುವ ಸತ್ಯ ತಿಳಿದು ನಿತ್ಯಾ ಶಾಕ್​ ಆಗುತ್ತಾಳೆ. ಆದರೆ, ನಾನು ಈ ಮಗುವನ್ನು ಭೂಮಿಗೆ ತಂದರೆ ತುಂಬಾ ಹಿಂಸೆ ಅನುಭವಿಸಬೇಕಾಗುತ್ತದೆ ಎನ್ನುತ್ತಾಳೆ.

47
ನಾನೇ ಅಪ್ಪ ಆಗುವೆ!

ಅಪ್ಪ ಯಾರು ಎನ್ನುವ ಕಾರಣಕ್ಕೆ ತಾನೇ ಈ ಹಿಂಸೆ ನಿಮಗೆ, ಹಾಗಿದ್ದರೆ ಅದಕ್ಕೆ ನಾನೇ ಅಪ್ಪ ಆಗುವೆ. ಅಪ್ಪ ಯಾರು ಎಂದು ಕೇಳಿದ್ರೆ ಕರ್ಣ ಎನ್ನಿ ಎನ್ನುತ್ತಾನೆ ಕರ್ಣ.

57
ನಿತ್ಯಾಗೆ ಶಾಕ್​

ಇದನ್ನು ಕೇಳಿ ನಿತ್ಯಾಗೆ ಶಾಕ್​ ಆಗುತ್ತದೆ. ಒಂದು ವೇಳೆ ಹಾಗೆ ಮಾಡಿದರೆ, ನಿಮ್ಮ ಜೀವನ ಹಾಳಾಗುತ್ತದೆ. ನಿಮ್ಮ ಕನಸು, ನಿಮ್ಮ ಆಸೆ ಎಲ್ಲವೂ ಮಣ್ಣುಪಾಲಾಗುತ್ತದೆ. ಈ ಮಗುವಿನಿಂದ ನಿಮ್ಮ ಲೈಫ್​ ಹಾಳು ಆಗಲು ನಾನು ಬಿಡುವುದಿಲ್ಲ ಎನ್ನುತ್ತಾಳೆ ನಿತ್ಯಾ.

67
ಕರ್ಣ ಜಗ್ಗುವುದಿಲ್ಲ

ಆದರೆ, ಇದ್ಯಾವುದಕ್ಕೂ ಕರ್ಣ ಜಗ್ಗುವುದಿಲ್ಲ. ಒಂದು ಮಗುವಿನ ಜೀವ ಉಳಿಯುವುದಾದರೆ ನಾನು ನನ್ನ ಎಲ್ಲ ಸುಖಗಳನ್ನೂ ಬದಿಗೊತ್ತುತ್ತೇನೆ. ನನಗೆ ಮಗುವಿನ ಜೀವ ಮುಖ್ಯ ಎನ್ನುತ್ತಾನೆ.

77
ಅಭಿಮಾನಿಗಳ ಆಸೆ ಹುಸಿ

ಅಲ್ಲಿಗೆ ಕರ್ಣ ಮತ್ತು ನಿಧಿ ಸದ್ಯದಲ್ಲಿಯೇ ಒಂದಾಗುತ್ತಾರೆ ಎನ್ನುವ ವೀಕ್ಷಕರ, ಅಭಿಮಾನಿಗಳ ಆಸೆ ಹುಸಿಯಾಗಿದೆ. ಯಾವುದು ಆಗಬಾರದು ಎಂದುಕೊಂಡಿದ್ದರೋ ಅದೇ ಆಗ್ತಿದೆ. ಈಗ ಆ ಮಗುವಿಗೆ ಕರ್ಣನೇ ಅಪ್ಪ ಆದರೆ ನಿಧಿ ಮತ್ತು ಕರ್ಣ ಒಂದಾಗಲು ಸಾಧ್ಯವಿಲ್ಲ ಎನ್ನುವುದು ವೀಕ್ಷಕರ ನೋವು.

ಸೀರಿಯಲ್​ ಪ್ರೊಮೋ ನೋಡಲು ಇದರ ಮೇಲೆ ಕ್ಲಿಕ್​ ಮಾಡಿ

Read more Photos on
click me!

Recommended Stories