Photos: ದಾವಣಗೆರೆಯಲ್ಲಿ ನಡೆದ 'ಪದ್ಮಾವತಿ' ಕಲ್ಯಾಣ; ಕನ್ನಡ ಸೀರಿಯಲ್ ನಟಿ ದೀಪ್ತಿ ಮನ್ನೆ ಮದುವೆ ಸಂಭ್ರಮ

Published : Nov 07, 2025, 07:42 PM IST

‘ಪದ್ಮಾಪತಿ’ ಧಾರಾವಾಹಿಯಲ್ಲಿ ತುಳಸಿ ಎನ್ನುವ ಮುಗ್ಧೆ, ಸಂಪ್ರದಾಯಸ್ಥೆ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ದೀಪ್ತಿ ಮನ್ನೆ ಅವರು ಕೆಲ ವರ್ಷಗಳಿಂದ ತೆಲುಗು ಕಿರುತೆರೆಯಲ್ಲಿ ಬ್ಯುಸಿ ಆಗಿದ್ದಾರೆ. ಈಗ ತವರೂರಿನಲ್ಲಿ ಮದುವೆಯಾಗಿದ್ದಾರೆ. 

PREV
110
ಸಾಮ್ರಾಟ್‌, ತುಳಸಿ ಜೋಡಿ

ಪದ್ಮಾವತಿ ಧಾರಾವಾಹಿಯಲ್ಲಿ ತುಳಸಿ ಪಾತ್ರ ಅನೇಕರಿಗೆ ಇಷ್ಟ ಆಗಿತ್ತು. ಈ ಸೀರಿಯಲ್‌ನಲ್ಲಿ ಮಾಟ ಮಂತ್ರ, ದೇವರು ವಿಚಾರಗಳಿದ್ದವು. ಈ ಧಾರಾವಾಹಿಯ ಹೀರೋ ಸಾಮ್ರಾಟ್ ಪಾತ್ರದಲ್ಲಿ ತ್ರಿವಿಕ್ರಮ್‌ ಅವರು ನಟಿಸಿದ್ದರು. ಈ ಜೋಡಿಗೆ ಒಳ್ಳೆಯ ಮೆಚ್ಚುಗೆ ಸಿಕ್ಕಿತ್ತು.

210
ಕನ್ನಡದ ಒಂದೇ ಧಾರಾವಾಹಿಯಲ್ಲಿ ನಟನೆ

ನಟಿ ದೀಪ್ತಿ ಮನ್ನೆ (Deepthi Manne) ಅವರು ಕನ್ನಡದಲ್ಲಿ ಒಂದೇ ಧಾರಾವಾಹಿಯಲ್ಲಿ ನಟಿಸಿದ್ದರು. ಆ ಬಳಿಕ ತೆಲುಗು ಕಿರುತೆರೆಗೆ ಎಂಟ್ರಿ ಕೊಟ್ಟು, ಅಲ್ಲಿ ಒಂದಾದ ಮೇಲೆ ಒಂದರಂತೆ ಸೀರಿಯಲ್‌ಗಳಲ್ಲಿ ನಟಿಸುತ್ತ, ಅಲ್ಲಿಯೇ ಬ್ಯುಸಿಯಾಗಿದ್ದಾರೆ.

310
YES, I’m IN LOVE

ಸೋಶಿಯಲ್ ಮೀಡಿಯಾದಲ್ಲಿ ಕೆಲ ದಿನಗಳ ಹಿಂದೆ ನಟಿ ದೀಪ್ತಿ ಅವರು ತಾವು ಲವ್‌ನಲ್ಲಿರೋದಾಗಿ ಹೇಳಿಕೊಂಡಿದ್ದರು. And YES, I’m IN LOVE ಎಂದು ಹುಡುಗನ ಮುಖವನ್ನು ರಿವೀಲ್‌ ಮಾಡದೆ, ಕೆಲ ಪ್ರಿ ವೆಡ್ಡಿಂಗ್‌ ಫೋಟೋಗಳನ್ನು ಹಂಚಿಕೊಂಡಿದ್ದರು.

410
ಹುಡುಗನ ಫೋಟೋ ರಿವೀಲ್

ಇಷ್ಟುದಿನಗಳಿಂದ ನಟಿ ದೀಪ್ತಿ ಮನ್ನೆ ಅವರು ಪ್ರೀತಿಯ ವಿಷಯವನ್ನು ಹಂಚಿಕೊಂಡಿರಲಿಲ್ಲ. ಮದುವೆ ಟೈಮ್‌ ಹತ್ತಿರ ಬರುತ್ತಿದ್ದಂತೆ ಅವರು ಹೇಳಿದ್ದರು. ಇದಾಗಿ ಕೆಲ ದಿನಗಳ ಬಳಿಕ ಅವರು ಫೋಟೋಗಳನ್ನು ರಿವೀಲ್‌ ಮಾಡಿದ್ದರು.

510
ಕನ್ನಡತಿ ಸೀರಿಯಲ್‌ ನಟಿ

ಕನ್ನಡತಿ ಹಾಗೂ ಅಮೃತಧಾರೆ ಧಾರಾವಾಹಿ ನಟಿ ಸಾರಾ ಅಣ್ಣಯ್ಯ ಕೂಡ ಈ ಮದುವೆಯಲ್ಲಿ ಭಾಗಿಯಾಗಿದ್ದರು.

610
ಶಿಕ್ಷಣ ಏನು?

ಬೆಂಗಳೂರಿನ ಇಂಡಿಯನ್ ಇನ್ಸ್ ಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯಲ್ಲಿ ಡಿಗ್ರಿ ಮಾಡಿದ್ದರು.

710
ದಾವಣಗೆರೆ ಹುಡುಗಿ

ನಟಿ ದೀಪ್ತಿ ಮನ್ನೆ ಅವರು ಮೂಲತಃ ದಾವಣಗೆರೆಯವರು, ಈಗ ದಾವಣಗೆರೆಯಲ್ಲಿ ಮದುವೆ ಆಗಿದೆ.

810
ಸಿನಿಮಾದಲ್ಲಿ ನಟನೆ

ತಮಿಳಿನ ಎವನ್ ಸಿನಿಮಾದಲ್ಲಿ ನಟಿಸಿದ್ದರು. ಆಮೇಕೆ ಕನ್ನಡ, ತೆಲುಗು ಸಿನಿಮಾಗಳಲ್ಲೂ ನಟಿಸಿದ್ದರು.

910
ಸಿನಿಮಾಗಳು

'ನಮ್ಮೂರ ಹೈಕ್ಳು', ತೆಲುಗಿನ 'ಇಕ್ ಸೇ ಲವ್ ', ತಮಿಳಿನ 'ದೇವದಾಸ್ ಬ್ರದರ್ಸ್' ಸಿನಿಮಾದಲ್ಲಿ ಅವರು ನಟಿಸಿದ್ದರು. 

1010
ಸಾಲು ಸಾಲು ಸೀರಿಯಲ್‌ಗಳು

ತೆಲುಗು ಚಿತ್ರರಂಗದಲ್ಲಿ ಜಗಧಾತ್ರಿ, ರಾಧಮ್ಮ ಕೂತುರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

Read more Photos on
click me!

Recommended Stories