ತಮ್ಮ ‘ಜೂನಿಯರ್ ಟೋಸ್’ ತಂಡದ ಜೊತೆ ಥೈಲ್ಯಾಂಡ್ ಪ್ರವಾಸ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್

Published : Apr 23, 2026, 03:20 PM IST

‘ಜಾಲಿಡೇಸ್’ ಸಿನಿಮಾ ಖ್ಯಾತಿಯ ನಟಿ ಹಾಗೂ ಉದ್ಯಮಿಯಾಗಿರುವ ಸ್ಪೂರ್ತಿ ವಿಶ್ವಾಸ್ ಹಾಗೂ ಇನ್ನಿತರರ ಜೊತೆ ಅಶ್ವಿನಿ ಪುನೀತ್ ರಾಜಕುಮಾರ್ ಇತ್ತೀಚೆಗೆ ಬ್ಯಾಂಕಾಕ್ ಗೆ ತೆರಳಿದ್ದಾರೆ. ಸ್ಪೂರ್ತಿ ವಿಶ್ವಾಸ್ ಅಲ್ಲಿನ ಡಿಯೋರ್ ಗೋಲ್ಡ್ ಹೌಸ್ ಫೋಟೊಗಳನ್ನು ಹಂಚಿಕೊಂಡಿದ್ದಾರೆ. 

PREV
15
ಬ್ಯಾಂಕಾಕ್ ನಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್

ಅಶ್ವಿನಿ ಪುನೀತ್ ರಾಜಕುಮಾರ್ ಅವರು ತಮ್ಮ ‘ಜೂನಿಯರ್ ಟೋಸ್’ ಸಂಸ್ಥೆಯ ಫೌಂಡರ್ಸ್, ಡೈರೆಕ್ಟರ್ಸ್ ಜೊತೆಗೆ ಥೈಲ್ಯಾಂಡ್ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿ ಬ್ಯಾಂಕಾಕ್ ಸೇರಿ ವಿವಿಧ ತಾಣಗಳಿಗೆ ಭೇಟಿ ನೀಡಿ ಎಂಜಾಯ್ ಮಾಡಿದ್ದು, ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

25
‘ಜೂನಿಯರ್ ಟೋಸ್’ ತಂಡ ಥೈಲ್ಯಾಂಡಲ್ಲಿ

ಕನ್ನಡ ಸಿನಿಮಾ ನಿರ್ಮಾಪಕಿಯಾಗಿರುವ ಅಶ್ವಿನಿ ಪುನೀತ್ ರಾಜ್‌ಕುಮಾರ್ ‘ಜೂನಿಯರ್ ಟೋಸ್’ ಎಂಬ ಅಂತರರಾಷ್ಟ್ರೀಯ ಪ್ರೀಸ್ಕೂಲ್‌ ಸಂಸ್ಥೆಯನ್ನು ಸ್ಥಾಪಿಸಿದ್ದು, ಇದಕ್ಕೆ ಜಾಲಿಡೇಸ್ ಸಿನಿಮಾ ನಟಿ ಹಾಗೂ ಜನಪ್ರಿಯ ಉದ್ಯಮಿಯಾಗಿರುವ ಸ್ಪೂರ್ತಿ ವಿಶ್ವಾಸ್ ಮತ್ತು ಸುನೀತಾ ಗೌಡ ಸಹ ಸ್ಥಾಪಕರಾಗಿದ್ದು, ಅವರ ಜೊತೆ ಅಶ್ವಿನಿ ಪುನೀತ್ ರಾಜಕುಮಾರ್ ಥೈಲ್ಯಾಂಡ್ ಪ್ರವಾಸ ಮಾಡಿದ್ದಾರೆ.

35
ಸೋಶಿಯಲ್ ಮೀಡಿಯಾದಲ್ಲಿ ಪೋಟೊಗಳು

ಇತ್ತೀಚೆಗೆ ‘ಜೂನಿಯರ್ ಟೋಸ್’ ಸ್ಥಾಪಕರಾದ ಅಶ್ವಿನಿ ಪುನೀತ್ ರಾಜ್‌ಕುಮಾರ್, ಸ್ಫೂರ್ತಿ ವಿಶ್ವಾಸ್, ಸುನೀತಾ ಗೌಡ ಬ್ಯಾಂಕಾಕ್ - ಥೈಲ್ಯಾಂಡ್ ಪ್ರವಾಸ ಕೈಗೊಂಡಿದ್ದು, ಇದು ಸಂಸ್ಥೆಯ ಲೀಡರ್‌ಶಿಪ್‌ನ ಆಫ್‌ಸೈಟ್ ಪ್ರವಾಸವಾಗಿದೆ. ನಟಿ ಸ್ಪೂರ್ತಿ ವಿಶ್ವಾಸ್ ಈ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

45
DIOR ಗೋಲ್ಡನ್ ಹೌಸ್

ಇದು ಬ್ಯಾಂಕಾಕ್ ನಲ್ಲಿ ಹೊಸದಾಗಿ ಅರಂಭವಾಗಿರುವ ಫ್ಯಾಷನ್ ಸ್ಟೋರ್ ಆಗಿದ್ದು, ಇಲ್ಲಿ ಜ್ಯುವೆಲ್ಲರಿ ಜೊತೆಗೆ ಕೆಫೆ ಕೂಡ ಇದೆ. ಇದು ಕ್ಲಾಸ್ ಮತ್ತು ಲಕ್ಸುರಿ ಹೌಸ್ ಆಗಿದ್ದು, ಈ DIOR ಗೋಲ್ಡನ್ ಹೌಸ್ ನ್ನು ಪೂರ್ತಿಯಾಗಿ ಗೋಲ್ಡನ್ ಬಣ್ಣದಲ್ಲಿ ವಿನ್ಯಾಸ ಮಾಡಲಾಗಿದೆ.

55
ಸ್ಪೂರ್ತಿ ವಿಶ್ವಾಸ್ ಹೇಳಿದ್ದೇನು?

ಬ್ಯಾಂಕಾಕ್‌ನಲ್ಲಿರುವ ಡಿಯೋರ್ ಕೆಫೆ.... ವೈಬ್ ಗಾಗಿ ಒಳಗೆ ಹೋದೆ, ಕಾಫಿ + ಕ್ರೋಸೆಂಟ್‌ಗಳಿಗಾಗಿ ಉಳಿದೆ (ತುಂಬಾ ಚೆನ್ನಾಗಿದೆ!!). ಎಲ್ಲವೂ Pinterest ಬೋರ್ಡ್‌ನಿಂದ ನೇರವಾಗಿ ಹೊರ ಬಂದಂತೆ ಕಾಣುತ್ತದೆ. ಕನಸಿನ ನಗರಿಯಂತಿತ್ತು, ಸೂಪರ್ ಐಷಾರಾಮಿ. ಡಿಯೋರ್ ಶಾಪಿಂಗ್ ಮಾಡಿದ ಬಳಿಕ, ಎರಡು ನಿಮಿಷದಲ್ಲಿ ಕೆಫೆಯಲ್ಲೂ ಕುಳಿತುಕೊಳ್ಳಬಹುದು ಎಂದು ಸ್ಪೂರ್ತಿ ಬರೆದುಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories