ಹಳೆ ಹುಡುಗಿ ವಿಷಯ ಎತ್ಬೇಡಿ; ಹೊಸ ಹುಡುಗಿ ಬಗ್ಗೆ ಹೇಳ್ತೀನಿ: ಬೃಂದಾವನ ಧಾರಾವಾಹಿ ನಟ ವರುಣ್‌ ಆರಾಧ್ಯ

Published : Apr 22, 2026, 05:41 PM IST

ಬೃಂದಾವನ ಧಾರಾವಾಹಿ ನಟ, ಕನ್ನಡ ಯುಟ್ಯೂಬರ್‌ ವರುಣ್‌ ಆರಾಧ್ಯ ಅವರು ಹೊಸ ಹುಡುಗಿಯ ಜೊತೆ ಎಂಗೇಜ್‌ ಆಗಿದ್ದಾರೆ. ಈ ಹಿಂದೆ ಅವರು ಓರ್ವ ಯುಟ್ಯೂಬರ್‌ನ್ನು ಲವ್‌ ಮಾಡಿದ್ದು, ಬ್ರೇಕಪ್‌ ಮಾಡಿಕೊಂಡಿದ್ದಾರೆ. ಅನೇಕರು ಈ ಬಗ್ಗೆ ನೆಗೆಟಿವ್‌ ಮಾತನಾಡಿದ್ದು, ವರುಣ್‌ ಅವರು ಬೇಸರ ಹೊರಹಾಕಿದ್ದಾರೆ. 

PREV
14
ಜನರ ನೆಗೆಟಿವ್‌ ಮಾತಿಗೆ ಬೇಸರ!

ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್‌ ಆಗಿರೋ ವರುಣ್ ಆರಾಧ್ಯ ಅವರು ಹಳೆಯ ಸಂಬಂಧ, ಮೂವ್ ಆನ್ ಆಗಿರುವ ರೀತಿ ಮತ್ತು ನೆಟ್ಟಿಗರ ಕಾಮೆಂಟ್‌ಗಳಿಂದ ತಮಗಾಗುತ್ತಿರುವ ನೋವಿನ ಬಗ್ಗೆ ಮಾತನಾಡಿದ್ದಾರೆ.

ಬದಲಾದ ಕಾಲ, ಬದಲಾದ ಜೀವನ

ವರುಣ್ ಅವರು, ಬ್ರೇಕ್ಅಪ್ ಆಗಿ ಈಗ ಸುಮಾರು ಮೂರು ವರ್ಷಗಳು ಕಳೆದಿವೆ. ಮನುಷ್ಯ ಬದಲಾಗುವುದು ಅನಿವಾರ್ಯ. "ಬ್ರೇಕ್ಅಪ್ ಆದ ಮೇಲೆ ಮೂವ್ ಆನ್ ಆಗುವುದು ತಪ್ಪಾ? ಪ್ರತಿಯೊಬ್ಬರಿಗೂ ತಮ್ಮ ಜೀವನವನ್ನು ಹೊಸದಾಗಿ ರೂಪಿಸಿಕೊಳ್ಳುವ ಹಕ್ಕಿದೆ ಎಂದು ಹೇಳಿದ್ದಾರೆ.

24
ನೆಟ್ಟಿಗರ ಕಾಮೆಂಟ್‌ಗಳಿಗೆ ಬೇಸರ

ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಇಂದಿಗೂ ಅವರ ಹಳೆಯ ಲವ್ ಬಗ್ಗೆ ಕಾಮೆಂಟ್ ಮಾಡುವುದು, ಮಾಜಿ ಗೆಳತಿಯ ಹೆಸರನ್ನು ಪ್ರಸ್ತಾಪಿಸುವುದು‌, ಹೊಸ ಗೆಳತಿಯೊಂದಿಗೆ ಹೋಲಿಕೆ ಮಾಡುವುದು ನಡೆಯುತ್ತಿದೆ ಎಂದು ಅವರಿಗೆ ಬೇಸರ ಆಗಿದೆಯಂತೆ. "ಒಂದು ಹಂತದಲ್ಲಿ ಎಲ್ಲವನ್ನೂ ಸಹಿಸಿಕೊಂಡು ಸೈಲೆಂಟ್ ಆಗಿರೋದು ಒಳ್ಳೆಯದು ಅನಿಸುತ್ತದೆ. ಆದರೆ ಪದೇ ಪದೇ ಹಳೆಯ ವಿಷಯಗಳನ್ನು ಕೆದಕುವುದರಿಂದ ಎರಡು ಕುಟುಂಬಗಳಿಗೂ, ಈಗ ಇರುವ ಸಂಬಂಧಕ್ಕೂ ತೊಂದರೆಯಾಗುತ್ತದೆ" ಎಂದು ಅವರು ಹೇಳಿದ್ದಾರೆ.

34
ಮೂವ್ ಆನ್: ಅನಿವಾರ್ಯತೆ ಮತ್ತು ಧೈರ್ಯ

ಸೈಕಲ್ ಕಲಿಯುವಾಗ ಬೀಳುವುದು ಹೇಗೆ ಸಹಜವೋ, ಜೀವನದಲ್ಲಿ ಸೋತಾಗ ಎದ್ದು ನಿಲ್ಲುವುದು ಅಷ್ಟೇ ಮುಖ್ಯ ಎನ್ನುತ್ತಾರೆ ವರುಣ್. ಪ್ರತಿಯೊಬ್ಬರಿಗೂ ಖಾಸಗಿ ಬದುಕು ಇರುತ್ತದೆ. ಪ್ರೇಕ್ಷಕರು ಕಲಾವಿದರ ವೈಯಕ್ತಿಕ ಜೀವನದ ನಿರ್ಧಾರಗಳನ್ನು ಗೌರವಿಸಬೇಕು ಎಂದು ಹೇಳಿದ್ದಾರೆ.

44
ಮುಂದಿನ ಯೋಜನೆ, ಸರ್ಪ್ರೈಸ್

ಸದ್ಯದಲ್ಲೇ ಒಂದು ದೊಡ್ಡ ಇವೆಂಟ್ ಮೂಲಕ ಅಧಿಕೃತವಾಗಿ ಹುಡುಗಿ ಯಾರು ಎಂದು ಹೇಳ್ತೀನಿ. ಕೆಟ್ಟ ಕಾಮೆಂಟ್‌ಗಳನ್ನು ಮಾಡುವ ಬದಲು, ಒಬ್ಬ ಕನ್ನಡಿಗನಾಗಿ ಬೆಳೆಯುತ್ತಿರುವ ತಮಗೆ ಸಪೋರ್ಟ್ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories