ಕನ್ನಡ ಕಿರುತೆರೆ ಲೋಕದ ಜನಪ್ರಿಯ ನಟಿ ಕಮ್ ನಿರೂಪಕಿ ಅನುಪಮಾ ಗೌಡ ಥೈಲ್ಯಾಂಡ್‌ನಲ್ಲಿ ಸ್ಕೂಬಾ ಡೈವಿಂಗ್ ಟ್ರೈನಿಂಗ್ ಮಾಡಿದ್ದಾರೆ. ಹೀಗಾಗಿ ಒಂದು ವಾರಕ್ಕೂ ಹೆಚ್ಚು ದಿನಗಳು ಥೈಲ್ಯಾಂಡ್‌ನಲ್ಲಿ ಕಳೆದಿದ್ದಾರೆ.
ಥೈಲ್ಯಾಂಡ್‌ನಲ್ಲಿ ಸ್ಕೂಬಾ ಡೈವಿಂಗ್ ಟ್ರೈನಿಂಗ್ ನಂತರ ಅಲ್ಲೇ ಹತ್ತಿರವಿದ್ದ ಆನೆ ಕ್ಯಾಂಪ್‌ಗೆ ಭೇಟಿ ನೀಡಿದ್ದಾರೆ. 70 ವರ್ಷ ಯೋಯೋ ಆನೆ ಜೊತೆ ಒಂದು ದಿನ ಸಮಯ ಕಳೆದಿದ್ದಾರೆ.
ಯೋಯೋ ಆನೆಗೆ ಸ್ನಾನ ಮಾಡಿಸಿ ಊಟ ಮಾಡಿಸಬಹುದು. ಇಲ್ಲಿಗೆ ಎಂಟ್ರಿ ಫೀಸ್ ಇಲ್ಲ ಆದರೆ ಆನೆಗಳನ್ನು ನೋಡಿಕೊಳ್ಳಲು ಮೆಡಿಕಲ್ ಚೆಕ್ ಮಾಡಲು ಹಣ ನೀಡಬಹುದು.
ಅಲ್ಲಿದ್ದ ವೈದ್ಯರ ಸಹಾಯ ಪಡೆದುಕೊಂಡು ಅನುಪಮಾ ಗೌಡ ತಮ್ಮ ಕೈಯಾರೆ ಆಹಾರ ತಯಾರಿ ಮಾಡಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ Vlog ಮೂಲಕ ಹೇಗಿತ್ತು ಕ್ಯಾಂಪ್ ಎಂದು ಹಂಚಿಕೊಂಡಿದ್ದಾರೆ.
18 ಗಂಟೆಗಳ ಕಾಲ ತಿನ್ನುವ ಆನೆ ಯೋಯೋ ಅಗಿದ್ದು ಅನುಪಮಾ ಅವರೇ 10 ಸಲ ಆಹಾರ ತಿನ್ನಿಸಿದ್ದಾರೆ. ದಿನಕ್ಕೆ 300 ಕೆಜಿ ತಿನ್ನುತ್ತದೆ ಎಂದಿದ್ದಾರೆ.
ಅಂಡಮಾನ್‌ನಲ್ಲಿ ಸ್ಕೂಬಾ ಟ್ರೈನಿಂಗ್ ಮಾಡಬೇಕಿತ್ತು ಆದರೆ ಅಲ್ಲಿನ ಹವಮಾನದಿಂದ ಪ್ರಯಾಣ ಮತ್ತು ಸ್ಕೂಬಾ ಮಾಡಲಾಗದ ಕಾರಣ ಥೈಲ್ಯಾಂಡ್‌ನ ಆಯ್ಕೆ ಮಾಡಿಕೊಂಡರಂತೆ.
ರಾಜ ರಾಣಿ ಮತ್ತು ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ನಿರೂಪಣೆ ಮಾಡಿದ ನಂತರ ಆನ್‌ಸ್ಕ್ರೀನ್‌ನಿಂದ ಅನುಪಮಾ ಬ್ರೇಕ್ ತೆಗೆದುಕೊಂಡಿದ್ದಾರೆ.
ಸದ್ಯ ಸೋಷಿಯಲ್ ಮೀಡಿಯಾ ಮತ್ತು ಯುಟ್ಯೂಬ್ ಮೂಲಕ ತಮ್ಮ ಫಾಲೋವರ್ಸ್‌ನ ಮನೋರಂಜಿಸುತ್ತಿದ್ದಾರೆ. ಅಲ್ಲದೆ ಸ್ಕಿನ್ ಕೇರ್, ಹೇರ್ ಕೇರ್ ಮತ್ತು ಲೈಫ್‌ಸ್ಟೈಲ್ ಬಗ್ಗೆ ಹಂಚಿಕೊಳ್ಳುತ್ತಾರೆ.