ಇನ್ನು ಮಗುವಾಗದೇ ಇರಲು ಕಾರಣವೇನು?, ಬಹಿರಂಗ ಪಡಿಸಿದ ನಟಿ ಶ್ವೇತಾ ಪ್ರಸಾದ್

Published : Jun 26, 2022, 03:14 PM IST

ಮಗು ಮಾಡಿಕೊಳ್ಳುವ ಬಗ್ಗೆ ನಟಿ ಶ್ವೇತಾ ಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ. ಮಗು ಮಾಡಿಕೊಳ್ಳುವುದು ಬಿಡುವುದು ಮಹಿಳೆಯರ ಆಯ್ಕೆಯಾಗಿದೆ ಎಂದು ಶ್ವೇತಾ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. 'ನನಗಿನ್ನು ಮಗುವಾಗದೇ ಇರಲು ಕಾರಣವೇನು? ನನ್ನ ವೈಯಕ್ತಿಕ ವಿಚಾರ ನಿಮಗೆ ಸಂಬಂಧಿಸಿದಲ್ಲ. ಮಗುವನ್ನು ಪಡೆಯುವುದು ಮಹಿಳೆಯ ಆಯ್ಕೆಯಾಗಿದೆ. ಯಾವಾಗ ಎಲ್ಲಿ, ಹೇಗೆ ಎನ್ನುವುದನ್ನು ಅವಳಿಗೆ ಬಿಟ್ಟುಬಿಡಿ ಎಂದಿದ್ದಾರೆ. 

PREV
16
ಇನ್ನು ಮಗುವಾಗದೇ ಇರಲು ಕಾರಣವೇನು?, ಬಹಿರಂಗ ಪಡಿಸಿದ ನಟಿ ಶ್ವೇತಾ ಪ್ರಸಾದ್

ಕಿರುತೆರೆಯ ಖ್ಯಾತ ನಟಿ ಶ್ವೇತಾ ಪ್ರಸಾದ್ ಮತ್ತೆ ಸುದ್ದಿಯಲ್ಲಿದ್ದಾರೆ. ಧಾರಾವಾಹಿ ಲೋಕದಿಂದ ಅಂತರ ಕಾಯ್ದುಕೊಂಡಿರುವ ಶ್ವೇತಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಶ್ವೇತಾ ಸದಾ ಹೊಸ ಹೊಸ ಪೋಸ್ಟ್‌ಗಳನ್ನು ಶೇರ್ ಮಾಡುತ್ತಿರುತ್ತಾರೆ. 

26

ಇತ್ತೀಚಿಗೆ ಸಿಕ್ಕಾಪಟ್ಟೆ ಬೋಲ್ಡ್ ಆಗಿರುವ ಶ್ವೇತಾ ಹಾಟ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ಶ್ವೇತಾ ಮಗು ಮಾಡಿಕೊಳ್ಳುವ ವಿಚಾರವಾಗಿ ಸುದ್ದಿಯಾಗಿದ್ದಾರೆ. ಶ್ವೇತಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್  ಮಾಡಿದಾಗಲೆಲ್ಲಾ ಮಗು ಮಾಡಿಕೊಳ್ಳುವ ವಿಚಾರವಾಗಿ ಕಾಮೆಂಟ್‌ಗಳು ಹರಿದುಬರುತ್ತಿತ್ತು.

36

ಆದರೆ ಈ ಬಗ್ಗೆ ಶ್ವೇತಾ ಯಾವುತ್ತು ಪ್ರತಿಕ್ರಿಯೆ ನೀಡಿರಲಿಲ್ಲ. ಆದರೀಗ ಸಾಮಾಜಿಕ ಜಾಲತಾಣದಲ್ಲಿ ಗರಂ ಆಗಿದ್ದಾರೆ. ಮಗು ಮಾಡಿಕೊಳ್ಳುವುದು ಬಿಡುವುದು ಮಹಿಳೆಯರ ಆಯ್ಕೆಯಾಗಿದೆ ಎಂದು ಶ್ವೇತಾ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. 

46

'ನನಗಿನ್ನು ಮಗುವಾಗದೇ ಇರಲು ಕಾರಣವೇನು? ನನ್ನ ವೈಯಕ್ತಿಕ ವಿಚಾರ ನಿಮಗೆ ಸಂಬಂಧಿಸಿದಲ್ಲ. ಮಗುವನ್ನು ಪಡೆಯುವುದು ಮಹಿಳೆಯ ಆಯ್ಕೆಯಾಗಿದೆ. ಯಾವಾಗ ಎಲ್ಲಿ, ಹೇಗೆ ಎನ್ನುವುದನ್ನು ಅವಳಿಗೆ ಬಿಟ್ಟುಬಿಡಿ. ಓದು, ಮದುವೆ, ಮಗು, ಸಾಯುವುದು ಅಂತ ಏನು ಸೂತ್ರವಿಲ್ಲ' ಎಂದಿದ್ದಾರೆ.

56

'ಮಕ್ಕಳನ್ನು ಹೊಂದಿದ ಮಹಿಳಯರ ಬಗ್ಗೆ ಹೇಳುವುದಾದರೇ, ಕುಟುಂಬದವರ ಒತ್ತಡದಿಂದ, ಸಮಾಜ ಕೇಳುತ್ತಿದೆ ಎಂದು, ಅಮ್ಮ ಹೇಳಿದರು ಎನ್ನುವ ಕಾರಣಕ್ಕೆ. ಇವರೆಲ್ಲರಿಂದ ಒತ್ತಡವಿದೆ ಎನ್ನುವ ಕಾರಣಕ್ಕೆ ಎಂದು ಹೇಳುತ್ತಾರೆ' ಎಂದು ಶ್ವೇತಾ ಹೇಳಿದ್ದಾರೆ.

66
shwetha

'ಇದು ತುಂಬಾ ವೈಯಕ್ತಿಕ ಮತ್ತು ಮಗುವನ್ನು ಮಾಡಿಕೊಳ್ಳಲು ನಿರ್ಧರಿಸುವ ಪಯಣ ಹೆಣ್ಣಿಗೆ ತುಂಬಾ ಸುಂದರವಾದುದ್ದು. ಮಗುವನ್ನು ಪಡೆಯಲು ಮಹಿಳೆೇ ನಿರ್ಧರಿಸಿ ಪಡೆಯಬೇಕು. ಅವಳನ್ನು ನೀವು ನಿರ್ಧರಿಸಬೇಡಿ, ಅವಳ ನಿರ್ಧಾರವನ್ನು ಪ್ರಶ್ನೆ ಮಾಡದಿರಿ. ಇದನ್ನು ಪ್ರಶ್ನೆ ಮಾಡಲು ಯಾರಿಗೂ ಅಧಿಕಾರವಿಲ್ಲ' ಎಂದು ಹೇಳಿದ್ದಾರೆ. 
   

Read more Photos on
click me!

Recommended Stories