ಅಣ್ಣಯ್ಯ ಧಾರಾವಾಹಿಯಲ್ಲಿ ಶಿವಣ್ಣನ ಇಬ್ಬರು ತಂಗಿಯರ ಜೀವನದಲ್ಲಿ ಬಿರುಗಾಳಿ ಬೀಸಿದೆ. ಒಬ್ಬಳು ತಂಗಿಯನ್ನು ಮನೆಯಿಂದಲೇ ಹೊರಗಿಟ್ಟಿದ್ದರೆ, ಇನ್ನೊಬ್ಬ ತಂಗಿಗೆ ತನ್ನ ಗಂಡ ತನ್ನನ್ನು ಪ್ರೀತಿಸುತ್ತಿಲ್ಲ, ಪಿಂಕಿಯನ್ನು ಲವ್ ಮಾಡ್ತಿದ್ದಾನೆ ಅನ್ನೋದು ಗೊತ್ತಾಗಿ ಹೃದಯ ಒಡೆದು ಹೋಗಿದೆ.
ಅಣ್ಣಯ್ಯ ಧಾರಾವಾಹಿಯಲ್ಲಿ (Annayya Serial) ಕಥೆಯಲ್ಲಿ ವಿಭಿನ್ನ ತಿರುವುಗಳು ಬಂದಿವೆ. ಇಲ್ಲಿವರೆಗೆ ಬರೀ ಸಂತೋಷವೇ ತುಂಬಿದ್ದ ಶಿವಣ್ಣನ ಕುಟುಂಬದಲ್ಲಿ ಒಂದೊಂದಾಗಿ ಕೆಟ್ಟ ಘಟನೆಗಳು ಶುರುವಾಗೋದಕ್ಕೆ ಆರಂಭವಾಗಿದೆ.
27
ಶಿವಣ್ಣನ ತಂಗಿಯರ ಜೀವನದಲ್ಲಿ ಬಿರುಗಾಳಿ
ಶಿವಣ್ಣ ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ತಂಗಿಯರ ಜೀವನದಲ್ಲಿ ಬಿರುಗಾಳಿ ಬೀಸಿದೆ. ತಂಗಿ ರಾಣಿಯನ್ನು ರಾಜಕುಮಾರನಿಗೆ ಮದುವೆ ಮಾಡಿಕೊಟ್ಟಿದ್ದು, ಆಕೆ ಮಹಾರಾಣಿಯಂತೆ ಉತ್ತಮ ಜೀವನ ನಡೆಸುತ್ತಿದ್ದಾಳೆ ಎಂದು ಅಂದುಕೊಂಡಿರುತ್ತಾನೆ ಶಿವಣ್ಣ, ಆದರೆ ಅಲ್ಲಿ ಆಗಿರೋದೆ ಬೇರೆ.
37
ಒಂದೊತ್ತಿನ ಊಟಕ್ಕೂ ಗತಿ ಇಲ್ಲ ರಾಣಿಗೆ
ರಾಣಿಯ ಪರಿಸ್ಥಿತಿ ಹೇಗಾಗಿದೆ ಎಂದರೆ, ಆಸ್ತಿಯನ್ನೆಲ್ಲಾ ರಾಣಿ ಕೈಯಿಂದ ತಮ್ಮ ಹೆಸರಿಗೆ ಬರೆದುಕೊಂಡಿರುವ ವಿಲನ್ ಗಳು, ಅವರನ್ನು ಮನೆಯಿಂದ ಹೊರ ಹಾಕಿದ್ದಾರೆ. ಊಟವನ್ನು ಕೊಡದೆ ಸತಾಯಿಸುತ್ತಿದ್ದಾರೆ. ರಾಣಿ ಗಂಡ ಹಸಿವಿನಿಂದ ನರಳುತ್ತಿದ್ದರೆ, ರಾಣಿ ಸ್ವಲ್ಪನಾದ್ರೂ ತಿನ್ನೋದಕ್ಕೆ ಕೊಡಿ ಎಂದು ಬೇಡಿಕೊಳ್ಳುತ್ತಿದ್ದಾರೆ.
ಇನ್ನೊಂದು ಕಡೆ ಗುಂಡಮ್ಮನ ಮುಂದೆ ಸೀನಾ ಮತ್ತು ಪಿಂಕಿಯ ಲವ್ ಸ್ಟೋರಿ ಅನಾವರಣ ಆಗಿದೆ. ಸೀನಾ ಹುಟ್ಟುಹಬ್ಬಕ್ಕೆ ರಶ್ಮಿ ಗಂಡನಿಗೆ ಇಷ್ಟವಾದ ಎಲ್ಲಾ ತಿಂಡಿಗಳನ್ನು ಮಾಡಿ ಗಂಡನಿಗೆ ಕೊಡಲು ಖುಷಿ ಖುಷಿಯಾಗಿ ಬಂದರೆ, ಅಲ್ಲಿ ನಡೆಯುತ್ತಿರುವ ಘಟನೆ ನೋಡಿ ರಶ್ಮಿ ಎದೆಯೇ ನಿಂತಂತಾಗಿದೆ.
57
ಸೀನಾಗೆ ಪ್ರಪೋಸ್ ಮಾಡಿದ ಪಿಂಕಿ
ಪಿಂಕಿ ಸೀನಾಗೆ ಉಂಗುರುವನ್ನು ತೊಡಿಸುತ್ತಾ, ಮತ್ತೆ ಪ್ರೀತಿಸಿ ನನ್ನನ್ನು ಮದುವೆ ಮಾಡಿಕೊಳ್ತಿಯಾ ಎಂದು ಕೇಳಿದ್ದಾನೆ, ಅದಕ್ಕೆ ಸೀನಾ ಕೂಡ ಒಪ್ಪಿಗೆ ಕೊಟ್ಟು ಕೈ ಮುಂದೆ ಮಾಡಿದ್ದಾರೆ. ಜೊತೆಗೆ ಇನ್ನು ಮುಂದೆ ನಾನು ಯಾರಿಗೂ ಹೆದರೋದಿಲ್ಲ, ನಾನು ನನಗೋಸ್ಕರ ಜೀವಿಸುತ್ತೇನೆ ಎನ್ನುತ್ತಾ ಅಮ್ಮನನ್ನು ಮತ್ತು ಪಿಂಕಿಗೆ ಧನ್ಯವಾದಗಳನ್ನು ಹೇಳುತ್ತಾನೆ.
67
ಕುಸಿದ ರಶ್ಮಿ
ಸೀನಾ ತನ್ನನ್ನು ಪ್ರೀತಿ ಮಾಡುತ್ತಲೇ ಇಲ್ಲ, ತಾನು ಇಲ್ಲಿವರೆಗೆ ಕಟ್ಟಿಕೊಂಡು ಬಂದಿದ್ದ ನಂಬಿಕೆ ಸುಳ್ಳಾಯ್ತು ಎಂಬುದನ್ನು ಅರಿತ ರಶ್ಮಿಗೆ ತಾನು ನಿಂತ ನೆಲವೇ ಕುಸಿದಂತಾಗುತ್ತದೆ. ಅಣ್ಣನಿಗೆ ಹೇಳಲು ಆಗದೇ, ಮನಸ್ಸಿನಲ್ಲಿ ಇಟ್ಟುಕೊಳ್ಳಲೂ ಆಗದೇ ಕಣ್ಣೀರಿಡುತ್ತಾ ಒದ್ದಾಡುತ್ತಿದ್ದಾಳೆ ರಶ್ಮಿ.
77
ರಕ್ಷಣೆಗೆ ಮಾಂಕಾಳವ್ವನೇ ಬರಬೇಕು
ಇಬ್ಬರು ಮಕ್ಕಳ ಜೀವನದಲ್ಲಿ ಬಿರುಗಾಳಿ ಎದ್ದಿರುವ ಈ ಸಮಯದಲ್ಲಿ ಇಬ್ಬರ ರಕ್ಷಣೆಗಾಗಿ ಶಿವಣ್ಣ ನಂಬಿರುವ ಮಾಂಕಾಳವ್ವನೇ ಬರಬೇಕಾಗುವುದೋ, ಅಥವಾ ಅಮ್ಮ ಶಾರದಾ ಮನೆಗೆ ಎಂಟ್ರಿ ಕೊಡಬೇಕಾಗುವುದೋ ಅದನ್ನು ಕಾದು ನೋಡಬೇಕು.