ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲೂ ತಮ್ಮ ಪ್ರತಿಭೆಯಿಂದ ಗುರುತಿಸಿಕೊಂಡಿರುವ ನಟಿ ಸೋನಾರಿಕಾ ಭಡೋರಿಯಾ ಈಗ ತಮ್ಮ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡುತ್ತಿದ್ದಾರೆ.
214
'ದೇವೋನ್ ಕೆ ದೇವ್ ಮಹಾದೇವ್' ಧಾರಾವಾಹಿಯಲ್ಲಿ ಪಾರ್ವತಿ ಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ಸೋನಾರಿಕಾ, ತಾನು ತಾಯಿಯಾಗಲಿರುವ ವಿಷಯವನ್ನು ಸಂತೋಷದಿಂದ ಹಂಚಿಕೊಂಡಿದ್ದಾರೆ.
314
ನಟಿ ಈ ಸುದ್ದಿಯನ್ನು ಬೀಚ್‌ಸೈಡ್ ಮೆಟರ್ನಿಟಿ ಫೋಟೋಶೂಟ್ ಮೂಲಕ ತಮ್ಮ ಅಭಿಮಾನಿಗಳ ನಡುವೆ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಸಿರೀಸ್‌ನಲ್ಲಿ ಚಿತ್ರಗಳನ್ನು ಹಂಚಿಕೊಂಡ ಸೋನರಿಕಾ, "ನಮ್ಮ ಇದುವರೆಗಿನ ಅತ್ಯುತ್ತಮ ಸಾಹಸ" ಎಂದು ಬರೆದಿದ್ದಾರೆ.
ತಮ್ಮ ಪತಿಯೊಂದಿಗೆ ಬೇಬಿ ಬಂಪ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಈ ಸಿಹಿಸುದ್ದಿ ನೀಡಿದ್ದು, ಅಭಿಮಾನಿಗಳು ಹಾಗೂ ಸ್ನೇಹಿತರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.
514
ಸೋನಾರಿಕಾ 2011ರಲ್ಲಿ 'ತುಮ್ ದೇನಾ ಸಾತ್ ಮೇರಾ' ಧಾರಾವಾಹಿಯ ಮೂಲಕ ನಟನಾ ಲೋಕಕ್ಕೆ ಕಾಲಿಟ್ಟರು.
614
ಆದರೆ ಅವರಿಗೆ ದೇಶದಾದ್ಯಂತ ದೊಡ್ಡ ಹೆಸರು ತಂದುಕೊಟ್ಟಿದ್ದು 'ದೇವೋನ್ ಕೆ ದೇವ್ ಮಹಾದೇವ್' ಧಾರಾವಾಹಿಯ ಪಾರ್ವತಿ ಪಾತ್ರ.
714
ಈ ಪಾತ್ರ ಎಷ್ಟು ಜನಪ್ರಿಯವಾಯಿತೆಂದರೆ, ಇಂದಿಗೂ ಅನೇಕರು ಅವರನ್ನು ನಿಜವಾದ ಪಾರ್ವತಿ ದೇವಿಯಂತೆಯೇ ಕಾಣುತ್ತಾರೆ. ಹಿಂದಿ ಕಿರುತೆರೆಯಲ್ಲದೆ, ಸೋನಾರಿಕಾ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟರು.
814
'ಜಾದುಗಾಡು', 'ಸ್ಪೀಡುನ್ನೋಡು' ಹಾಗೂ ಮಂಚು ವಿಷ್ಣು ಜೊತೆಗಿನ ಸಿನಿಮಾಗಳಲ್ಲಿ ನಟಿಸಿ ಸೋನಾರಿಕಾ ಭಡೋರಿಯಾ ಸೈ ಎನಿಸಿಕೊಂಡಿದ್ದರು.
914
2024ರ ಫೆಬ್ರವರಿ 18 ರಂದು ಉದ್ಯಮಿ ವಿಕಾಸ್ ಪರಾಶರ್ ಅವರೊಂದಿಗೆ ಸೋನಾರಿಕಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ದೀರ್ಘಕಾಲದ ಪ್ರೀತಿಗೆ ಹೊಸ ರೂಪ ನೀಡಿದ ಈ ಜೋಡಿ ಸರಳವಾಗಿ ವಿವಾಹವಾಗಿದ್ದರು.
1014
ನಟಿ ತನ್ನ ಪತಿ ವಿಕಾಸ್ ಪರಾಶರ್ ಜೊತೆ ಸಮುದ್ರ ತೀರದಲ್ಲಿ ತಮ್ಮ ಬೇಬಿಬಂಪ್ ಹಿಡಿದು ಫೋಟೋಶೂಟ್ ಮಾಡಿಸಿದ್ದಾರೆ. ಜೋಡಿಯ ರೋಮ್ಯಾಂಟಿಕ್ ಪೋಸ್‌ಗಳು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.
1114
ಸದ್ಯ ನಟನೆಯಿಂದ ವಿರಾಮ ತೆಗೆದುಕೊಂಡಿರುವ ಸೋನಾರಿಕಾ, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ತಮ್ಮ ಜೀವನದ ಪ್ರಮುಖ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.
1214
ಇದೀಗ ಅವರು ತಮ್ಮ ಬೇಬಿ ಬಂಪ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಹೊಸ ಸದಸ್ಯರ ಆಗಮನವನ್ನು ಘೋಷಿಸಿದ್ದಾರೆ.
1314
ಸಮುದ್ರ ತೀರದಲ್ಲಿ ಕೈಕೈ ಹಿಡಿದು, ದಂಪತಿಗಳು ತಮ್ಮ ಮೊದಲ ಮಗುವನ್ನು ಆತ್ಮೀಯತೆಯಿಂದ ತುಂಬಿದ ಫೋಟೋಗಳೊಂದಿಗೆ ಸಂಭ್ರಮಿಸಿದ್ದಾರೆ.
1414
ಸೋನಾರಿಕಾ ಆಫ್-ಶೋಲ್ಡರ್ ನೆಟೆಡ್ ಡ್ರೆಸ್ ಧರಿಸಿದ್ದರು. ಸೋನಾರಿಕಾ ಅವರ ಪತಿ ಸಂಪೂರ್ಣ ಬಿಳಿ ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ.