'ಕರ್ಣ' ಸೀರಿಯಲ್‌ನ ಮಹಿಳಾ ದಿನದ ವಿಶೇಷ ಸಂಚಿಕೆಯಲ್ಲಿನ ಫೈಟಿಂಗ್ ದೃಶ್ಯದ ಬಗ್ಗೆ 'ಅಣ್ಣಯ್ಯ' ಸೀರಿಯಲ್ ಖ್ಯಾತಿಯ ನಟಿ ರಾಘವಿ ಅರಳಗುಂಡಗಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಭಯಪಟ್ಟಿದ್ದು, ನಟ ಕಿರಣ್ ರಾಜ್ ಅವರನ್ನು ಶ್ಲಾಘಿಸಿದ್ದು, ಸಹ-ನಟಿಯರೊಂದಿಗಿನ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ.
Karna Serialನಲ್ಲಿ ಮಹಿಳಾ ದಿನದ ವಿಶೇಷವಾಗಿ ಹೆಣ್ಣುಮಕ್ಕಳ ಭರ್ಜರಿ ಫೈಟಿಂಗ್ ನಡೆದಿತ್ತು. ಈ ರೋಚಕ ಸಂಚಿಕೆ ನೋಡಲು ಮಹಿಳೆಯರು ಮಾತ್ರವಲ್ಲದೇ ಪುರುಷರೂ ಉತ್ಸುಕರಾಗಿದ್ದರು. ಸೀರೆಯುಟ್ಟ ನಾರಿಯರ ಭರ್ಜರಿ ಫೈಟಿಂಗ್ಗೆ ರೌಡಿಗಳು ಸುಸ್ತಾಗಿದ್ದರು. ರಮೇಶ್ ಕುತಂತ್ರದಿಂದ ಜೈಲುಪಾಲಾಗಿದ್ದ ಕರ್ಣನ ಪರವಾಗಿ ಸಾಕ್ಷಿ ಸಮೇತ ಹೋಗುತ್ತಿದ್ದ ವೇಳೆ ಈ ಅಟ್ಯಾಕ್ ನಡೆದಿತ್ತು.
26
ಅಣ್ಣಯ್ಯ ರಾಣಿ
ಈ ಫೈಟಿಂಗ್ನಲ್ಲಿ ಇದ್ದ ನಟಿಯರ ಪೈಕಿ ಅಣ್ಣಯ್ಯ ಸೀರಿಯಲ್ (Annayya Serial) ರಾಣಿ ಅರ್ಥಾತ್ ರಾಘವಿ ಅರಳಗುಂಡಗಿ ಅವರೂ ಒಬ್ಬರು. ಇದೀಗ ಅವರು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಅನುಭವವನ್ನು ಶೇರ್ ಮಾಡಿಕೊಂಡಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
36
ತುಂಬಾ ಭಯಪಟ್ಟಿದ್ದೆ
ಒಂದು ಸೀರಿಯಲ್ನಿಂದ ಇನ್ನೊಂದು ಸೀರಿಯಲ್ನಲ್ಲಿ ಆ್ಯಕ್ಟ್ ಮಾಡುವಾಗ ನಿರ್ದೇಶಕರೆಲ್ಲರೂ ಬೇರೆ ಇರುತ್ತಾರೆ ಎಂದು ಸಹಜವಾಗಿ ಭಯವಾಗುತ್ತದೆ. ಅದರಲ್ಲಿಯೂ ಈ ಸೀರಿಯಲ್ನಿಂದ ನನ್ನನ್ನು ಏಕೆ ಆಯ್ಕೆ ಮಾಡಿಕೊಂಡರು ಎನ್ನುವುದು ತಿಳಿದಿಲ್ಲ. ಆದರೂ ಫೈಟಿಂಗ್ ದೃಶ್ಯ ಎಂದಾಗ ಆರಂಭದಲ್ಲಿ ಭಯವಾಯ್ತು. ಆದರೆ ಆಮೇಲೆ ಎಲ್ಲವೂ ಸಹಜವಾಗಿ ಅಂದುಕೊಂಡಂತೆ ನಡೆಯಿತು ಎಂದಿದ್ದಾರೆ ನಟಿ.
ಅದರಲ್ಲಿಯೂ ರೌಡಿಗಳ ಮೇಲೆ ಕಲ್ಲು ಎತ್ತಾಕುವಾಗ ಕೈಯೆಲ್ಲಾ ನಡುಗಿ ಹೋಯ್ತು. ಅದು ಡಮ್ಮಿ ಕಲ್ಲು ಎಂದು ಗೊತ್ತಿತ್ತು. ಆದರೂ ತುಂಬಾ ಭಯವಾಯ್ತು. ಫೈಟ್ ಮಾಸ್ಟರ್ ಏನಾಗಲ್ಲಮ್ಮ ಎತ್ತಿ ಹಾಕು ಅಂತಿದ್ರು. ಆದರೂ ಏನಾದ್ರು ಎಡವಟ್ಟು ಆಗಿ ಬಿಟ್ರೆ ಅಂತ ಭಯ ಆಗ್ತಿತ್ತು. ಆಮೇಲೆ ಎಲ್ಲರೂ ಸಹಾಯ ಮಾಡಿದ್ರು, ಕೆಂಪು ಸೀರೆ ಧೂಳಿಗೆ ಧೂಳಿನ ಬಣ್ಣವೇ ಆಗಿ ಹೋಗಿತ್ತು ಎಂದಿದ್ದಾರೆ.
56
ಮೂರು ದಿನ ಫೈಟ್
ಈ ಫೈಟಿಂಗ್ ದೃಶ್ಯವನ್ನು ಮೂರು ದಿನ ಮಾಡಿದ್ವಿ. ನನ್ನ ಜೊತೆ ಕರ್ಣ ಸೀರಿಯಲ್ ನಮ್ರತಾ ಗೌಡ, ಭವ್ಯಾ ಗೌಡ, ಬ್ರಹ್ಮಗಂಟು ದಿಯಾ ಎಲ್ಲರೂ ಸಿಕ್ಕಿದ್ದು ಸಕತ್ ಫನ್ನಿಯಾಗಿತ್ತು. ಮೊದಲು ಅವರೆಲ್ಲಾ ಅಷ್ಟು ಪರಿಚಯ ಇರಲಿಲ್ಲ. ಶೂಟಿಂಗ್ ಸೆಟ್ನಲ್ಲಿ ತುಂಬಾ ಕ್ಲೋಸ್ ಆದ್ವಿ ಎಂದಿದ್ದಾರೆ ನಟಿ.
66
ಕಿರಣ್ ರಾಜ್ ತುಂಬಾ ಸ್ವೀಟ್
ಇದೇ ವೇಳೆ ಕರ್ಣ ಸೀರಿಯಲ್ ಹೀರೋ ಕಿರಣ್ ರಾಜ್ (Kiran Raj) ಅವರ ಬಗ್ಗೆಯೂ ಮಾತನಾಡಿರುವ ನಟಿ, ಅವರು ತುಂಬಾ ಸ್ವೀಟ್ ವ್ಯಕ್ತಿ. ಅಷ್ಟು ದೊಡ್ಡ ಸ್ಟಾರ್ ಆದರೂ ಕೊಂಚವೂ ಆಟಿಟ್ಯೂಡ್ ಇಲ್ಲ. ನಾನು ಶಾಲೆಯಲ್ಲಿ ಇದ್ದಾಗಲೇ ಅವರ ನಟನೆಯ 'ಕಿನ್ನರಿ' ಸೀರಿಯಲ್ ನೋಡ್ತಿದ್ದೆ. ಅವರೆಂದರೆ ಆಗಿಂದಲೂ ಇಷ್ಟ. ಈಗ ಅವರ ಜೊತೆ ಆ್ಯಕ್ಟ್ ಮಾಡುವ ಅವಕಾಶ ಸಿಕ್ಕಿದ್ದು ತುಂಬಾ ಖುಷಿಯಾಯ್ತು. ನನ್ನ ಆ್ಯಕ್ಟಿಂಗ್ ನೋಡಿ ಅವರು ಪ್ರಶಂಸೆ ಮಾಡಿದಾಗ ಇನ್ನೂ ಖುಷಿಯಾಯ್ತು ಎಂದಿದ್ದಾರೆ ರಾಘವಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.