ಗಂಡನ ಕೈ ಹಿಡಿದು ದೆಹಲಿ ಸುತ್ತಿದ ಕನ್ನಡ ಕಿರುತೆರೆ ಸುಂದ್ರಿ ವೈಷ್ಣವಿ ಗೌಡ

Published : Mar 17, 2026, 02:47 PM IST

ಕನ್ನಡ ಕಿರುತೆರೆಯ ಜನಪ್ರಿಯ ನಟಿ ವೈಷ್ಣವಿ ಗೌಡ, ಮದುವೆಯಾದ ಬಳಿಕ ನಟನೆಗೆ ಬ್ರೇಕ್ ಕೊಟ್ಟು, ದೇಶ ಸುತ್ತೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಒಂದು ಕಡೆ ನಟಿ ಕಂ ಬ್ಯಾಕ್ ಮಾಡ್ತಿದ್ದಾರೆ ಎನ್ನುವ ಸುದ್ದಿಯ ನಡುವೆ, ವೈಷ್ಣವಿ ಗಂಡನ ಜೊತೆ ದೆಹಲಿ ಪ್ರವಾಸ ಮಾಡುತ್ತಿರುವ ಫೋಟೊ ವೈರಲ್ ಆಗ್ತಿದೆ. 

PREV
16
ವೈಷ್ಣವಿ ಗೌಡ

ಕನ್ನಡ ಕಿರುತೆರೆಯ ಜನಪ್ರಿಯ ನಟಿಯರಲ್ಲಿ ಒಬ್ಬರು ವೈಷ್ಣವಿ ಗೌಡ. ಸೀತಾ ರಾಮ ಸೀರಿಯಲ್ ಬಳಿಕ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ವೈಷ್ಣವಿ ಗೌಡ ಬಳಿಕ ನಟನೆಯಿಂದ, ಕೊಂಚ ದೀರ್ಘ ಬ್ರೇಕ್ ತೆಗೆದುಕೊಂಡು, ಗಂಡನ ಜೊತೆ ದೇಶ ಸುತ್ತೋದ್ರಲ್ಲಿ ಬ್ಯುಸಿಯಾಗಿದ್ದಾರೆ.

26
ದೆಹಲಿಯಲ್ಲಿ ವೈಷ್ಣವಿ

ಸದ್ಯ ವೈಷ್ಣವಿ ಗೌಡ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿದ್ದು, ಪತಿ ಜೊತೆ ಕೈ ಕೈ ಹಿಡಿದು ನಟಿ ದೆಹಲಿಯ ಪ್ರವಾಸಿ ತಾಣಗಳನ್ನು ಸುತ್ತಾಡುತ್ತಿದ್ದಾರೆ. ಸುಂದರ ಫೋಟೊಗಳನ್ನು ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

36
ಆಟೋದಲ್ಲಿ ದೆಹಲಿ ರೈಡ್

ಇಂಡಿಯಾ ಗೇಟ್, ಕುತುಬ್ ಮಿನಾರ್, ಸಿಖ್ ಮಂದಿರಗಳಿಗೆ ವೈಷ್ಣವಿ ಗೌಡ ಭೇಟಿ ನೀಡಿದ್ದಾರೆ. ಆಟೋ ರೈಡ್ ಮಾಡಿ ದೆಹಲಿ ಸುತ್ತಿದ್ದಾರೆ, ಆಲೂ ಪರೋಟ ಸವಿದಿದ್ದಾರೆ. ಒಟ್ಟಲ್ಲಿ ಗಂಡನ ಜೊತೆ ದೆಹಲಿ ಟೂರ್ ಮಾಡ್ತಾ ಸಖತ್ ಆಗಿ ಎಂಜಾಯ್ ಮಾಡಿದ್ದಾರೆ ವೈಷ್ಣವಿ ಗೌಡ.

46
ಸೀರಿಯಲ್ ನಟನೆ

ವೈಷ್ಣವಿ ಗೌಡ, ಶೀಘ್ರದಲ್ಲೇ ಕನ್ನಡ ಕಿರುತೆರೆಗೆ ಮತ್ತೆ ಕಂ ಬ್ಯಾಕ್ ಮಾಡಲಿದ್ದಾರೆ ಎನ್ನುವ ಸುದ್ದಿ ಬಂದಿತ್ತು. ಉದಯ ಟಿವಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿಗೆ ವೈಷ್ಣವಿ ನಾಯಕಿಯಾಗ್ತಾರೆ ಎನ್ನಲಾಗುತ್ತಿದ್ದು, ಆದರೆ ಈಗ ನಟಿ ಗಂಡನ ಕೈ ಹಿಡಿದು ದೆಹಲಿ ಸುತ್ತುವ ಹೋಟೊಗಳು ವೈರಲ್ ಆಗುತ್ತಿದ್ದು, ನಟಿ ಮತ್ತೆ ಕಿರುತೆರೆಗೆ ಬರ್ತಾರ ಅನ್ನೋದು ಮತ್ತೆ ಡೌಟ್ ಆಗಿದೆ.

56
ಅನುಕೂಲ್ ಮಿಶ್ರಾ ಜೊತೆ ವಿವಾಹ

ಕಳೆದ ವರ್ಷ ಸೀತಾ ರಾಮ ಸೀರಿಯಲ್ ಮುಗಿಯುತ್ತಿದ್ದಂತೆಮ್ ಜೂನ್ 4 ರಂದು ವೈಷ್ಣವಿ ಗೌಡ ಉತ್ತರ ಭಾರತದ ಛತ್ತೀಸ್ಗಢ ಮೂಲದವರಾದ ಏರ್‌ಫೋರ್ಸ್‌ನಲ್ಲಿ ಕೆಲಸ ಫ್ಲೈಟ್‌ ಲೆಫ್ಟಿನೆಂಟ್ ಆಗಿರುವ ಅನುಕೂಲ್ ಮಿಶ್ರಾ ಜೊತೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

66
ವೈಷ್ಣವಿ ಗೌಡ ಧಾರಾವಾಹಿಗಳು

‘ಸೀತಾರಾಮ’, ‘ಅಗ್ನಿಸಾಕ್ಷಿ’, ‘ದೇವಿ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ , ಬಿಗ್ ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಸಿರುವ ವೈಷ್ಣವಿ ಗೌಡ, ಮದುವೆಯಾದ ಬಳಿಕ ಸೀರಿಯಲ್ ನಲ್ಲಿ ನಟಿಸುವುದಿಲ್ಲ ಎನ್ನಲಾಗುತ್ತಿತ್ತು, ಇದೀಗ ಮತ್ತೆ ನಟಿಸುತ್ತಾರೆ ಎನ್ನುವ ಸುದ್ದಿ ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಆದರೆ ಸೀರಿಯಲ್ ಯಾವಾಗ ರಿಲೀಸ್, ಯಾರು ನಾಯಕ ಎನ್ನುವ ಬಗ್ಗೆ ಮಾಹಿತಿ ಇಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories